ಅನಾಥ ಮಕ್ಕಳಿದ್ದಲ್ಲಿ ಮಾಹಿತಿ ನೀಡಲು ಮನವಿ-ಕೊಡಗು ಜಿಲ್ಲಾ ಪೊಲೀಸ್

0 0
Read Time:2 Minute, 38 Second

ಕೋವಿಡ್ -19ನಿಂದ ಪೋಷಕರಿಬ್ಬರು ಮೃತಪಟ್ಟು ಅನಾಥರಾದ ಮಕ್ಕಳ ಬಗ್ಗೆ ಮಾಹಿತಿ ಇದ್ದಲ್ಲಿ ಅವರ ರಕ್ಷಣೆ ಮತ್ತು ಪೋಷಣೆ ದೃಷ್ಟಿಯಿಂದ ಅಂತಹ ಮಕ್ಕಳಿರುವ ಮಾಹಿತಿಯನ್ನು ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ, ಮಕ್ಕಳ ವಿಶೇಷ ಪೊಲೀಸ್ ಘಟಕಕ್ಕೆ ಆಥವಾ 112, 1098ಕ್ಕೆ ಕರೆ ಮಾಡಿ ತಿಳಿಸುವಂತೆ ಸಾರ್ವಜನಿಕರಲ್ಲಿ ಕೋರಿದ್ದು, ಅಂತಹ ಮಕ್ಕಳ ಮುಂದಿನ ಪಾಲನೆ, ಪೋಷಣೆ, ರಕ್ಷಣೆ ಮತ್ತು ಪುನರ್ ವಸತಿ ಕಲ್ಪಿಸುವ ಬಗ್ಗೆ ಅಂತಹ ಮಕ್ಕಳನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ” ಮುಂದೆ ಹಾಜರುಪಡಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಕೋವಿಡ್ -19 ನಿಂದ ತನ್ನ ತಂದೆಯನ್ನು ಕಳೆದುಕೊಂಡ ನೊಂದ ಬಾಲಕಿ ಅವರಿಗೆ ಆಹಾರ ಸಾಮಾಗ್ರಿಯನ್ನು ನೀಡುವಂತೆ 1098ಕ್ಕೆ ಕರೆ ಮಾಡಿ ತಿಳಿಸಿದ್ದು ಈ ವಿಚಾರ ತಿಳಿದ ಮಕ್ಕಳ ವಿಶೇಷ ಪೊಲೀಸ್ ಘಟಕದ ಸಿಬ್ಬಂದಿಗಳು ಅವರ ಮನೆಗೆ ತೆರಳಿ ಅವರ ಯೋಗಕ್ಷೇಮವನ್ನು ವಿಚಾರಿಸಿಕೊಂಡು ಅವರಿಗೆ ಮಕ್ಕಳ ವಿಶೇಷ ಪೊಲೀಸ್ ಘಟಕದ, ಜಿಲ್ಲಾ ಅಪರಾಧ ಪತ್ತೆ ದಳದ ಸಿಬ್ಬಂದಿಗಳು ಹಾಗೂ ಸ್ವಸ್ಥ ಸಂಸ್ಥೆಯ ನಿರ್ದೇಶಕಿ ಶ್ರೀಮತಿ ಆರತಿ ಸೋಮಯ್ಯನವರು ಸೇರಿಕೊಂಡು ಅವರಿಗೆ ಆಹಾರ ಸಾಮಾಗ್ರಿಗಳನ್ನು ಒದಗಿಸಿರುತ್ತಾರೆ. ಅಂತೆಯೇ ಸೋಮವಾರಪೇಟೆ ತಾಲೋಕು ಕೂಡಿಗೆ ಗ್ರಾಮದಲ್ಲಿ ತನ್ನ ತಂದೆ ತಾಯಿಯಿಂದ ಪರಿತ್ಯಜಿಸಲ್ಪಟ್ಟು ಅಜ್ಜ ಅಜ್ಜಿಯೊಂದಿಗೆ ವಾಸವಿರುವ 7 ವರ್ಷದ ಬಾಲಕಿ ತಮಗೆ ಜೀವಿಸಲು ಕಷ್ಟವಾಗುತ್ತಿದ್ದು ತನ್ನ ಅಜ್ಜ ಅಜ್ಜಿಗೆ ಕೆಲಸ, ಸೂರು ಮತ್ತು ಮೂಲಭೂತ ಸೌಕರ್ಯಗಳಿಲ್ಲದೆ ಇದ್ದು, ಆಹಾರ ಸಾಮಾಗಿಗಳ ಅವಶ್ಯಕತೆ ಇರುವುದಾಗಿ 1098ಕ್ಕೆ ಕರೆಮಾಡಿ ತಿಳಿಸಿದ್ದು, ಈ ವಿಚಾರ ತಿಳಿದ ಮಕ್ಕಳ ವಿಶೇಷ ಪೊಲೀಸ್ ಘಟಕದ ಸಿಬ್ಬಂದಿಗಳು ಅವರ ಮನೆಗೆ ಭೇಟಿ ನೀಡಿ ಅವರ ಯೋಗಕ್ಷೇಮವನ್ನು ವಿಚಾರಿಸಿಕೊಂಡು ಅವರಿಗೆ ಮಕ್ಕಳ ವಿಶೇಷ ಪೊಲೀಸ್ ಘಟಕದ, ಜಿಲ್ಲಾ ಅಪರಾಧ ಪತ್ತೆ ದಳದ ಸಿಬ್ಬಂದಿಗಳು ಹಾಗೂ ಸ್ವಸ್ಥ ಸಂಸ್ಥೆಯ ನಿರ್ದೇಶಕಿ ಶ್ರೀಮತಿ ಅರತಿ ಸೋಮಯ್ಯನವರು ಸೇರಿಕೊಂಡು ಆಹಾರ ಸಾಮಾಗ್ರಿಗಳನ್ನು ನೀಡುವ ಮೂಲಕ ನೆರವು ನೀಡುರುತ್ತಾರೆ.

ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,

This image has an empty alt attribute; its file name is John_prem.jpg

ಜೆ .ಜಾನ್ ಪ್ರೇಮ್

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Next Post

ಕೆಎಸ್ಪಿ ಕಾನ್ಸ್ಟೇಬಲ್ ನೇಮಕಾತಿ 2021: ಸಿಪಿಸಿಗೆ 4000 ಖಾಲಿ ಹುದ್ದೆಗಳು, ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ @@recruitment.ksp.gov.in

Job Summary Notification KSP Constable Recruitment 2021: 4000 Vacancies Notified, Apply Online @recruitment.ksp.gov.in Notification Date May 24, 2021 Last Date of Submission Jun 25, 2021 City Bangalore State Karnataka Country India Organization Karnataka Police Education Qual Secondary, Senior Secondary Functional Other Funtional Area ಕೆಎಸ್ಪಿ ಕಾನ್ಸ್ಟೇಬಲ್ ನೇಮಕಾತಿ 2021 ಅಧಿಸೂಚನೆ: ಕರ್ನಾಟಕ ರಾಜ್ಯ […]

Get News on Whatsapp

by send "Subscribe" to 7200024452
Close Bitnami banner
Bitnami