ಮಂಡ್ಯ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ-2020 ಅನ್ನು ಈ ದಿನ ಮಂಡ್ಯ ಡಿಎಆರ್ ಪೆರೆಡ್ ಮೈದಾನದಲ್ಲಿ ಮಾನ್ಯ ಮಂಡ್ಯ ಪ್ರಧಾನ ಜಿಲ್ಲಾ & ಸತ್ರ ನ್ಯಾಯಾಧೀಶರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾನ್ಯ ಜಿಲ್ಲಾಧಿಕಾರಿಗಳು ಮಂಡ್ಯ, ಪೊಲೀಸ್ ಅಧೀಕ್ಷಕರು ಮಂಡ್ಯ, ಅಪರ ಪೊಲೀಸ್ ಅಧೀಕ್ಷಕರು ಮಂಡ್ಯ ರವರು ಹಾಗೂ ಜಿಲ್ಲೆಯ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿರವರು ಪಾಲ್ಗೊಂಡಿರುತ್ತಾರೆ.
ಬೀರೂರು ಪೊಲೀಸರು ಇತ್ತೀಚೆಗೆ ನಡೆಸಿದ ಬಂಧನ ಕಾರ್ಯಾಚರಣೆಯಲ್ಲಿ ನಾಲ್ವರು ಹೆದ್ದಾರಿ ಡಕಾಯಿತಿ ಆರೋಪಿಗಳನ್ನು ಬಂಧಿಸಿರುತ್ತಾರೆ ಮತ್ತು ಓರ್ವ ಆರೋಪಿ ಪರಾರಿಯಾಗಿದ್ದಾನೆ.ಸದರಿ ಆರೋಪಿತರುಗಳಿಂದ 10,000 / – ಮೌಲ್ಯದ ಬಜಾಜ್ ಪಲ್ಸರ್ ಬೈಕು, 45,000 / – ಮೌಲ್ಯದ 11.25 ಗ್ರಾಂ ಚಿನ್ನದ ಬಳೆ, 5000 / – ಮೌಲ್ಯದ ರೆಡ್ಮಿ ಫೋನ್ ಮತ್ತು 6070 / – ಹಣವನ್ನು ವಶಪಡಿಸಿಕೊಳ್ಳಲಾಗಿದೆ. ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ, ಜೆ .ಜಾನ್ ಪ್ರೇಮ್