ಗೋಕರ್ಣ ಪೊಲೀಸ್ ವತಿಯಿಂದ ಕಾರ್ಯಾಚರಣೆ

Admin
0 0
Read Time:2 Minute, 9 Second

ದಿನಾಂಕ 10-12-2020 ರಂದು ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯ ಹನೇಹಳ್ಳಿ ಗ್ರಾಮದ ಶ್ರೀ ಸಂಕದ ಮಹಾಸತಿ ದೇವಸ್ಥಾನದಲ್ಲಿ ಸುಮಾರು 22 ಗ್ರಾಂ ತೂಕದ ಬಂಗಾರದ ಕರಿಮಣಿ ಸರ(ಮಂಗಳಸೂತ್ರ) ಹಾಗೂ ಸುಮಾರು 5000/- ರೂ ಕಾಣಿಕೆ ಹಣ ಕಳ್ಳತನವಾದ ಬಗ್ಗೆ ಗೋಕರ್ಣ ಪೊಲೀಸ್ ಠಾಣಾ ಗುನ್ನಾ ನಂ 91/2020 ಕಲಂ 454,457,380 ಐ.ಪಿ.ಸಿ ರಂತೆ ಪ್ರಕರಣ ದಾಖಲಾಗಿತ್ತು.

ದಿನಾಂಕ 20-01-2021 ರಂದು ಶ್ರೀ ಮಹಾಸತಿ ದೆವಸ್ಥಾನ ಕಳ್ಳತನ ಮಾಡಿದ ಆರೋಪಿತನಾದ ವಿವೇಕಾನಂದ ತಂದೆ ದುರ್ಗಯ್ಯ ಖಾರ್ವಿ, ಪ್ರಾಯ 23 ವರ್ಷ, ವೃತ್ತಿ; ಬೋಟಿಕೆಲಸ, ಸಾ|| ಬೆಳೆಂಬಾರ, ಅಂಕೋಲಾ. ಹಾಲಿ; ಹೊರಭಾಗ, ಕುಮಟಾ ತಾಲೂಕ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆಗೊಳಪಡಿಸಿ ಆರೋಪಿತನಿಂದ 22 ಗ್ರಾಂ ತೂಕದ ಸುಮಾರು 62,000/- ರೂ ಮೌಲ್ಯದ ಬಂಗಾರದ ಮಂಗಳ ಸೂತ್ರ(ಕರಿಮಣಿ ಸರ) ವನ್ನು ವಶಪಡಿಸಿಕೊಂಡು ಆರೋಪಿತನನ್ನು ಈ ದಿವಸ ದಿನಾಂಕ 21-01-2021 ರಂದು ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಕುಮಟಾ, ಪ್ರಭಾರ ಜೆ.ಎಮ್.ಎಫ್.ಸಿ ನ್ಯಾಯಾಲಯ ಹೊನ್ನಾವರ ರವರ ಮುಂದೆ ಹಾಜರುಪಡಿಸಿದ್ದು ಆರೋಪಿತನಿಗೆ ಮಾನ್ಯ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿರುತ್ತದೆ. ಈ ಪ್ರಕರಣದ ಆರೋಪಿತನಿಗೆ ಕಳೆದ ಕೆಲವು ದಿನಗಳ ಹಿಂದೆ ಕುಮಟಾ ಪೊಲಿಸ್ ಠಾಣಾ ವ್ಯಾಪ್ತಿಯ ಕೊಡ್ಕಣಿಯಲ್ಲಿ ದೇವಸ್ಥಾನ ಕಳ್ಳತನ ಪ್ರಕರಣ, ಅಂಕೋಲಾದ ಕೊಗ್ರೆ, ಹೊನ್ನಿಬೈಲ್, ಹಾಗೂ ಹೊನ್ನರಾಕಾ ದೇವಸ್ಥಾನ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾದವನಾಗಿರುತ್ತಾನೆ. ಈ ಪ್ರಕರಣದ ಕಾರ್ಯಾಚರಣೆಯಲ್ಲಿ ಗೋಕರ್ಣ ಪೊಲೀಸ್ ಠಾಣೆಯ ಪಿ.ಎಸ್.ಐ ನವೀನ್ ನಾಯ್ಕ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.

ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,

ಶ್ರೀ .ಜಾನ್ ಪ್ರೇಮ್

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Next Post

ಚಿಕ್ಕಬಳ್ಳಾಪುರ ಪೊಲೀಸ್ ವತಿಯಿಂದ ಸೈಬರ್ ಅಪರಾಧಗಳ ಜಾಗೃತಿ ಕಾರ್ಯಕ್ರಮ

ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವತಿಯಿಂದ ಎಸ್ ಜೆ ಸಿ ಐ ಟಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ “ಸೈಬರ್ ಅಪರಾಧಗಳ ಬಗ್ಗೆ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪೊಲೀಸ್ ಅಧೀಕ್ಷಕರವರು, ಪೊಲೀಸ್ ಅಧಿಕಾರಿಗಳು, ಎಸ್ ಜೆ ಸಿ ಐ ಟಿ ಕಾಲೇಜಿನ ಪ್ರಾಂಶುಪಾಲರು ಉಪನ್ಯಾಸಕರು, ವಿದ್ಯಾರ್ಥಿಗಳು ಭಾಗವಹಿಸಿದ್ದು, ಸೈಬರ್ ಅಪರಾಧದ ಕುರಿತು ಜಾಗೃತಿ, ರಸ್ತೆ ಸುರಕ್ಷತೆ, ಸಂಚಾರಿ ನಿಯಮಗಳ ಪಾಲನೆ ವಿಷಯಗಳ ಕುರಿತಾಗಿ ವಿದ್ಯಾರ್ಥಿಗಳಿಗೆ ಅರಿವನ್ನು ಮೂಡಿಸಲಾಯಿತು. ನಮ್ಮ ಮುಖ್ಯ ವರದಿಗಾರರು […]

Get News on Whatsapp

by send "Subscribe" to 7200024452
Close Bitnami banner
Bitnami