ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಕಾರಾಚರಣೆ

0 0
Read Time:3 Minute, 32 Second

ಬೆಂಗಳೂರು ನಗರದ ವ್ಯಾಪ್ತಿಯಲ್ಲಿ ಡ್ರಗ್ಸ್ ಸರಬರಾಜು ಮಾಡುತ್ತಿದ್ದ ಒಬ್ಬ ವಿದೇಶಿ ಹಾಗೂ 34 ಜನ ಅಂತರರಾಜ್ಯ ಡ್ರಗ್‌ ಪೆಡ್ಲರ್‌ರವರನ್ನು ದಸ್ತಗಿರಿ ಮಾಡಿ ಒಟ್ಟು ಅಂದಾಜು 2 ಕೋಟಿ 42 ಲಕ್ಷಕ್ಕೂ ಅಧಿಕ ಮೌಲ್ಯದ ನಿಷೇಧಿತ ಮಾದಕ ವಸ್ತುಗಳ ವಶ.

ಬೆಂಗಳೂರು ನಗರ ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳವು ನಗರದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿರುವ ಪ್ರಮುಖ ಕಾಲೇಜು ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಸಂಗ್ರಹಿಸಲಾದ ಮಾಹಿತಿಯ ಆಧಾರದ ಮೇಲೆ ಕಾರ್ಯಾಚರಣೆಯನ್ನು ನಡೆಸಿ ಬೆಂಗಳೂರು ನಗರದ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಾಖಲಾಗಿರುವ ಒಟ್ಟು 24 ಪ್ರಕರಣಗಳಲ್ಲಿ 34 ಜನ ಡ್ರಗ್‌ ಪೆಡ್ಲರ್‌ಗಳನ್ನು ಬಂಧಿಸಿದ್ದು, ಇವರುಗಳಲ್ಲಿ ಕೇರಳ ರಾಜ್ಯದ 15 ಜನ, ಕರ್ನಾಟಕದ 10 ಜನ, ಬಿಹಾರದ 4 ಜನ, ಒರಿಸ್ಸಾದ ಇಬ್ಬರು, ಅಸ್ಸಾಂ ರಾಜ್ಯದ ಒಬ್ಬ, ಹರಿಯಾಣದ ಒಬ್ಬ ಹಾಗೂ ನೈಜೀರಿಯಾ ದೇಶದ ಒಬ್ಬ ಡ್ರಗ್ ಪೆಕ್ಟರ್‌ಗಳಾಗಿರುತ್ತಾರೆ. ಇವರುಗಳ ವಶದಿಂದ ಅಂದಾಜು 2,42,20,000/-ರೂ ಮೌಲ್ಯದ ನಿಷೇಧಿತ ಮಾದಕ ವಸ್ತುಗಳಾದ 37 kg 900 grams Ganja, 167.56 grams MDMA crystal, 70 LSD strips, 620 Ecstasy pills, 495 grams Charas, Hydro ganja-84 grams, Cocaine-72.5 grams, Hashish Oil- 1kg 26 grams, 30 Mobile Phones, 5 Two wheelers ಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.

ಸಿಸಿಬಿಯ ಮಾದಕದ್ರವ್ಯ ನಿಗ್ರಹ ದಳದ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡವು ವೈಟ್‌ ಫೀಲ್ಡ್ , ವರ್ತೂರು, ಕಾಟನ್‌ಪೇಟೆ, ಮೈಕೋಲೇಔಟ್, ಆರ್.ಟಿ. ನಗರ, ಬೊಮ್ಮನಹಳ್ಳಿ, ಕೆಂಗೇರಿ, ಚಾಮರಾಜಪೇಟೆ, ವೈಯ್ಯಪ್ಪನಹಳ್ಳಿ, ರಾಮಮೂರ್ತಿನಗರ, ಕೊಡಿಗೇಹಳ್ಳಿ, ಕೆ.ಆರ್ ಪುರಂ, ಪರಪ್ಪನ ಅಗ್ರಹಾರ, ಗಿರಿನಗರ, ಹೆಣ್ಣೂರು, ಕೊತ್ತನೂರು, ಯಲಹಂಕ, ಮಾರತ್‌ಹಳ್ಳಿ, ಹುಳಿಮಾವು ಹಾಗೂ ಜೆ.ಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಕಾರ್ಯಾಚರಣೆಯನ್ನು ನಡೆಸಿ ಡ್ರಗ್ ಪೆಡ್ಡಿಂಗ್‌ನಲ್ಲಿ ತೊಡಗಿದ್ದ ವಿವಿಧ ರಾಜ್ಯಗಳ 34 ಹಾಗೂ ಒಬ್ಬ ವಿದೇಶಿ ಡ್ರಗ್‌ ಪ್ಲೇಡ್ಲೆರ್ ರನ್ನು ಬಂಧಿಸಲಾಗಿರುತ್ತದೆ.

ಮೇಲ್ಕಂಡ ಪ್ರಕರಣಗಳಲ್ಲಿ ಬಂಧಿತ ಆರೋಪಿಗಳು ಕಡಿಮೆ ಸಮಯದಲ್ಲಿ ಹೆಚ್ಚಿನ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಕಡಿಮೆ ಬೆಲೆಗೆ ನಿಷೇಧಿತ ಮಾದಕ ವಸ್ತುಗಳನ್ನು ಖರೀದಿ ಮಾಡಿ ಅವುಗಳನ್ನು ಪರಿಚಯಸ್ಥ ಗ್ರಾಹಕರಿಗೆ, ಕಾಲೇಜು ವಿದ್ಯಾರ್ಥಿಗಳಿಗೆ, ಐಟಿ/ಬಿಟಿ ಉದ್ಯೋಗಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಅಕ್ರಮ ಹಣ ಸಂಪಾದನೆಯಲ್ಲಿ ತೊಡಗಿರುತ್ತಾರೆ. ಬಂಧಿತ ಆರೋಪಿಗಳ ವಿರುದ್ಧ ಬೆಂಗಳೂರಿನ ಪೊಲೀಸ್‌ ಠಾಣೆಗಳಲ್ಲಿ ಎನ್.ಡಿ.ಪಿ.ಎಸ್ ಕಾಯ್ದೆ-1985 ರೀತ್ಯಾ ಪ್ರಕರಣಗಳು ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.

ಈ ಕಾರ್ಯಾಚರಣೆಯನ್ನು ಜಂಟಿ ಪೊಲೀಸ್ ಆಯುಕ್ತರು, ಅಪರಾಧ ಹಾಗೂ ಡಿ.ಸಿ.ಪಿ ಅಪರಾಧ-2 ರವರ ಮಾರ್ಗದರ್ಶನದಲ್ಲಿ ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡವು ಯಶಸ್ವಿಯಾಗಿ ಕೈಗೊಂಡಿರುತ್ತಾರೆ.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Next Post

ಬೆಂಗಳೂರು ನಗರ ಆತ್ಮೀಯ ವಿಭಾಗದ ಸಿ.ಇ.ಎನ್ ಪೊಲೀಸರಿಂದ ರಿವಾರ್ಡ್ ಪಾಯಿಂಟ್' ವೆಬ್ ಸೈಟ್ ನ್ನು ಹಾಕ್ ಮಾಡಿ ಕೋಟ್ಯಂತರ ರೂ ಮೊತ್ತದ ಚಿನ್ನ ಬೆಳ್ಳಿಯನ್ನು ಖರೀದಿಸಿದ ಆಂದ್ರ ಪ್ರದೇಶ ಮೂಲದ ವ್ಯಕ್ತಿಯ ಬಂಧನ

24/06/2023 ರಂದು reward’s 360 ಕಂಪನಿಯ ಡೈರೆಕ್ಟರ್ ರವರು ತಮ್ಮ ಕಂಪನಿಯ ವತಿಯಿಂದ ಕಸ್ಟಮರ್ ಗಳಿಗೆ ನೀಡುವ ವೋಚರ್ ಗಳನ್ನು ಕಂಪನಿಯ ಕಸ್ಟಮರ್ ಗಳು ಬಳಕೆ ಮಾಡುವ ಮೊದಲೇ ತಮ್ಮ ಕಂಪನಿಯ ವೆಬ್ ಸೈಟ್ ಹಾಕ್ ಮಾಡಿ ಬಳಕೆ ಮಾಡುತ್ತಿದೆ. ಈ ಬಗ್ಗೆ, ಕಸ್ಟಮರ್ ಗಳಿಂದ ದೂರುಗಳನ್ನು ಸ್ವೀಕರಿಸುತ್ತಿದ್ದೇವೆ, ಅವರಿಂದ ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಿಸಿ ತನಿಖೆ ಕೈಗೊಂಡಿರುತ್ತದೆ. ಬೆಂಗಳೂರು ನಗರ ಆಜ್ಞೆಯಾ […]

Get News on Whatsapp

by send "Subscribe" to 7200024452
Close Bitnami banner
Bitnami