ಸಿಸಿಬಿ ಪೊಲೀಸರಿಂದ ಆಶೋಕನಗರ ಪೊಲೀಸ್ ಠಾಣೆ ರೌಡಿ ಪಟ್ಟಿ ಆಸಾಮಿ ಇರ್ಫಾನ್ ಎಂಬುವನನ್ನು ಗೂಂಡಾ ಕಾಯಿದೆ ಅಡಿ ಬಂಧನ

0 0
Read Time:1 Minute, 57 Second

ಬೆಂಗಳೂರು ನಗರ ಸಿಸಿಬಿ ಸಂಘಟಿತ ಅಪರಾಧ ದಳದ ಅಧಿಕಾರಿಗಳು 2013 ರಿಂದಲೂ ಸುಲಿಗೆ,ಕೊಲೆ ಪ್ರಯತ್ನ, ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದ, ಆಶೋಕನಗರ ಪೋಲೀಸ್ ಠಾಣಾ ರೌಡಿಪಟ್ಟಿ ಆಸಾಮಿಯಾದ ಇರ್ಫಾನ್ – ರಹೀಮುಲ್ಲಾ 29 ವರ್ಷ, ಈತನನ್ನು ಕರ್ನಾಟಕ ಗೂಂಡಾ ಕಾಯಿದ ಅಡಿಯಲ್ಲಿ ಬಂಧನದಲ್ಲಿಡಲು ಸಿಸಿಬಿ ಸಂಘಟಿತ ಅಪರಾಧ ದಳದ ಅಧಿಕಾರಿಗಳು ಇನ್ನು ಕಳೆದ 10 ವರ್ಷಗಳಲ್ಲಿ ಭಾಗಿಯಾಗಿರುವ ಎಲ್ಲಾ ಅಪರಾಧ ಪ್ರಕರಣ ದಾಖಲೆಗಳನ್ನು ಸಂಗ್ರಹಿಸಿ ಈತನನ್ನು ಪ್ರತಿಬಂಧಕ ಕಾಯಿದೆ ಅಡಿಯಲ್ಲಿ ಬಂಧನದಲ್ಲಿಡಲು ಪ್ರಸ್ತಾವನೆ ಸಲ್ಲಿಸಿದ್ದರು.
ಈತನ ವಿರುದ್ಧ ಈವರೆಗೆ ಸುಲಿಗೆ, ಕೊಲೆ ಪ್ರಯತ್ನ ಜೀವ ಬೆದರಿಕೆ ಸೇರಿದಂತೆ 15 ಪ್ರಕರಣಗಳು, ದಾಖಲಾಗಿರುತ್ತವೆ. ಈತನು ಜಾಮೀನು ಪಡೆದು ಬಿಡುಗಡೆ ನಂತರ 6 ಪ್ರಕರಣಗಳಲ್ಲಿ ವಿಚಾರಣೆಗೆ ಹಾಜರಾಗದೆ ತಲೆ ಮರೆಸಿಕೊಂಡಿದ್ದನು. ನ್ಯಾಯಾಲಯಗಳಿಂದ ಈತನ ವಿರುದ್ಧ ವಾರಂಟ್ ಗಳು ಬಾಕಿ ಉಳಿದಿದ್ದವು, ಸಿಸಿಬಿ ಅಧಿಕಾರಿಗಳು ಸತತ ಪ್ರಯತ್ನದಿಂದ ತಲೆ ಮರೆಸಿಕೊಂಡಿದ್ದ ರೌಡಿ ಆಸಾಮಿಯನ್ನು ಕೊಲೆ ಪ್ರಯತ್ನ ಕೇಸಿನ ವಾರಂಟ್ ನಲ್ಲಿ ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ, ಗೂಂಡಾ ಕಾಯ್ದೆ ಬಂಧನ ಆದೇಶ ನೀಡಲು ಪ್ರಸ್ತಾವನೆ ಸಲ್ಲಿಸಿದ್ದರು.

ಸಿಸಿಬಿ ಅಧಿಕಾರಿಗಳ ಪ್ರಸ್ತಾವನೆಯನ್ನು ಪರಿಶೀಲಿಸಿದ ಪೊಲೀಸ್ ಆಯುಕ್ತರು, ದಿನಾಂಕ 25.08,2023 ರಂದು ಈತನನ್ನು ಕರ್ನಾಟಕ ಗೂಂಡಾ ಕಾಯಿದೆ ಅಡಿಯಲ್ಲಿ ಬಂಧನದಲ್ಲಿಡಲು ಆದೇಶ ಹೊರಡಿಸಿದ್ದರು. ಅವರಂತೆ ಸಿಸಿಬಿ ಅಧಿಕಾರಿಗಳು ಬಂಧನ ಆದೇಶವನ್ನು ಕಾರಾಗೃಹದಲ್ಲಿ ಜಾರಿಗೊಳಿಸಿರುತ್ತಾರೆ.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Next Post

ಚಿನ್ನಾಭರಣ ಹಾಗೂ ವಜ್ರದ ಆಭರಣಗಳನ್ನು ಕಳವು ಮಾಡಿದ್ದ ಖಾಸಗಿ ಕ್ಯಾಬ್ ಚಾಲಕನ ಬಂಧನ:ಯಲಹಂಕ ಉಪನಗರ ಪೊಲೀಸ್‌ ಠಾಣೆ

ಸಂಬಂಧಿಕರ ಮದುವೆಗೆಂದು ಚೆನ್ನೈನಿಂದ ಬೆಂಗಳೂರಿಗೆ ಬಂದಿದ್ದವರ ಸೂಟ್‌ಕೇಸ್‌ನಲ್ಲಿದ್ದ ಚಿನ್ನಾಭರಣಮತ್ತು ವಜ್ರದ ಒಡವೆಗಳು ಕಳ್ಳತನವಾಗಿರುವ ಬಗ್ಗೆ, ಯಲಹಂಕ ಉಪನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣದ ತನಿಖೆ ಪ್ರಾರಂಭಿಸಿದ ಯಲಹಂಕ ಉಪನಗರ ಪೊಲೀಸರು ಏರಾದುದಾರರು ಹೋಟೆಲ್‌ನಿಂದ ಮದುವೆಗೆ ಓಡಾಡಲು ಬಾಡಿಗೆಗೆ ಪಡೆದಿದ್ದ ಕಾರ್ ಚಾಲಕನನ್ನು ಬಂಧಿಸಿ, ಕಳುವಾಗಿದ್ದ ಸುಮಾರು 30,00,000/- ರೂ ಮೌಲ್ಯದ 485 ಗ್ರಾಂ ಚಿನ್ನಾಭರಣ ಹಾಗೂ 17.5 ಕ್ಯಾರೆಟ್ ತೂಕದ ವಜ್ರದ ಆಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.ಪಿರಾದುದಾರರು ಮದುವೆ ಕಾರ್ಯಕ್ರಮ […]

Get News on Whatsapp

by send "Subscribe" to 7200024452
Close Bitnami banner
Bitnami