ಅಕ್ರಮ ಗಾಂಜಾ ಮಾರಾಟ ಪ್ರಕರಣ

1 0
Read Time:2 Minute, 11 Second

ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕು ಹೆಬ್ಬಾಲೆ ಗ್ರಾಮದ ಬಳಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಪ್ರಕರಣವನ್ನು ಕುಶಾಲನಗರ ಗ್ರಾಮಾಂತರ ಠಾಣಾ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರನ್ನೊಳಗೊಂಡ ತಂಡ ಪತ್ತೆ ಮಾಡಿ ಮೂವರು ಆರೋಪಿಗಳನ್ನು ದಸ್ತಗಿರಿ ಮಾಡಿ ಬಂಧಿತರಿಂದ 9 ಕೆ.ಜಿ 500 ಗ್ರಾಂ ಗಾಂಜಾ ಮತ್ತು 6.2 ಗ್ರಾಂ ಎಂ.ಡಿ.ಎಂ.ಎ ಮಾದಕವಸ್ತು, ನಗದು, ಕೃತ್ಯಕ್ಕೆ ಉಪಯೋಗಿಸಿದ ಮೊಬೈಲ್‌ ಪೋನ್‌, ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಪ್ರಕರಣವನ್ನು ಆರ್.ವಿ.ಗಂಗಾಧರಪ್ಪ, ಡಿವೈಎಸ್‌ಪಿ, ಸೋಮವಾರಪೇಟೆ ಉಪ ವಿಭಾಗ, ಮಹೇಶ್.ಬಿ.ಜಿ, ಸಿಪಿಐ, ಕುಶಾಲನಗರ ವೃತ್ತ ಹಾಗೂ ಮೋಹನ್‌ರಾಜು ಪಿ, ಪಿಎಸ್‌ಐ, ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಗಳನ್ನೊಳಗೊಂಡ ತಂಡ ಪತ್ತೆ ಮಾಡಿದ್ದು ಪೊಲೀಸ್‌ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯವನ್ನು ಶ್ಲಾಘಿಸಲಾಗಿದೆ.

ವಂಚನೆ ಪ್ರಕರಣ, ಆರೋಪಿಗಳ ಬಂಧನ:

ಕುಶಾಲನಗರದ ಜ್ಯುವೆಲ್ಲರಿ ಮಳಿಗೆಯೊಂದರಲ್ಲಿ ಚಿನ್ನಾಭರಣ ಖರೀದಿಸುವ ನೆಪದಲ್ಲಿ ನಕಲಿ ಚಿನ್ನಾಭರಣ ಇಟ್ಟು ವಂಚನೆ ಮಾಡಿದ್ದ ಪ್ರಕರಣದಲ್ಲಿ ಆರೋಪಿ ಮಹಿಳೆಯರನ್ನು ಬಂಧಿಸಿ ಒಟ್ಟು 75 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಕಳೆದ ಎರಡು ದಿನಗಳಲ್ಲಿ 5 ಅಕ್ರಮ ಗಾಂಜಾ ಮಾರಾಟ ಪ್ರಕರಣಗಳನ್ನು ಪತ್ತೆ ಮಾಡುವಲ್ಲಿ ಕೊಡಗು ಜಿಲ್ಲಾ ಪೊಲೀಸ್‌ ಯಶಸ್ವಿಯಾಗಿದ್ದು ಒಟ್ಟು 17 ಆರೋಪಿಗಳನ್ನು ಬಂಧಿಸಿ 13.5 ಕೆ.ಜಿ ಗಾಂಜಾ, 19.5 ಗ್ರಾಂ MDMA ಮಾದಕ ವಸ್ತು, ನಗದು, ಕೃತ್ಯಕ್ಕೆ ಉಪಯೋಗಿಸಿದ 14 ಮೊಬೈಲ್‌ ಫೋನ್‌ಗಳು, 1 ಕಾರು, 2 ಆಟೋ ರಿಕ್ಷಾ, 2 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಪರಾಧ ಪ್ರಕರಣಗಳನ್ನು ಪತ್ತೆ ಮಾಡಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯವನ್ನು ಪ್ರಶಂಶಿಸಲಾಗಿದೆ.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Next Post

ಐಶಾರಾಮಿ ಜೀವನಕ್ಕಾಗಿ ನಿಷೇಧಿತ ಮಾದಕ ವಸ್ತು ಸರಬರಾಜು ಮಾಡುತ್ತಿದ್ದ ಆರೋಪಿಯ ಬಂಧನ

ಸುಮಾರು 20.00 ಲಕ್ಷ ರೂ ಮೌಲ್ಯದ MDMA ಮಾದಕ ವಸ್ತು ವಶ ಯುವಕರು ಹಾಗೂ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ನಿಷೇಧಿತ ಮಾದಕ ವಸ್ತುಗಳನ್ನು ಬಸವನಗುಡಿಠಾಣೆ ವ್ಯಾಪ್ತಿಯಲ್ಲಿ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ, ಕಾರ್ಯಪ್ರವೃತ್ತರಾದ ಬಸವನಗುಡಿ ಪೊಲೀಸರು ಕೇರಳ ಮೂಲದ ಆರೋಪಿಯೊಬ್ಬನನ್ನು ಬಂಧಿಸಿ, ಆತನಿಂದ ನಿಷೇಧಿತ ಮಾದಕ ವಸ್ತು 200 ಗ್ರಾಂ ತೂಕದ MDMA ಮತ್ತು ಕೃತ್ಯಕ್ಕೆ ಉಪಯೋಗಿಸಿದ್ದ ವೆಸ್ತಾ ದ್ವಿ ಚಕ್ರವಾಹನ, ಮೊಬೈಲ್ ಫೋನ್ ಮತ್ತು ನಗದು […]

Get News on Whatsapp

by send "Subscribe" to 7200024452
Close Bitnami banner
Bitnami