ಗಾಂಜಾ ಮಾರಾಟಗಾರರ ಬಂಧನ, 610 ಗ್ರಾಂ ಗಾಂಜಾ ವಶ

0 0
Read Time:2 Minute, 44 Second

ಇತ್ತೀಚೆಗೆ ಕಲಬುರಗಿ ನಗರದಲ್ಲಿ ಗಾಂಜಾ ಪ್ರಕರಣಗಳು ವರದಿಯಾಗುತಿದ್ದು ಕಾರಣ ಮತ್ತಷ್ಟು ಗಾಂಜಾ ಪ್ರಕರಣಗಳನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ ಮಾನ್ಯ ಶ್ರೀ ಅಡೂರು ಶ್ರೀನಿವಾಸುಲು ಐ.ಪಿ.ಎಸ್. (ಕಾ&ಸು) ಉಪ- ಪೊಲೀಸ್‌ ಆಯುಕ್ತರು ಕಲಬುರಗಿ ನಗರ, ಮಾನ್ಯ ಶ್ರೀ ಎ ಚಂದ್ರಪ್ಪಾ ಕೆ.ಎಸ್.ಪಿ.ಎಸ್.,(ಅ&ಸಂ) ಉಪ-ಪೊಲೀಸ್‌ ಆಯುಕ್ತರು ಕಲಬುರಗಿ ನಗರ ಹಾಗೂ ದಕ್ಷಿಣ ಉಪ-ವಿಭಾಗ ಎ.ಸಿ.ಪಿ ರವರಾದ ಶ್ರೀ ಭೂತೇಗೌಡ ವಿ.ಎಸ್ ರವರ ಮಾರ್ಗದರ್ಶನದಲ್ಲಿ ಶ್ರೀ ಸಚಿನ್ ಎಸ್ ಚಲವಾದಿ ಪಿ.ಐ ಬ್ರಹ್ಮಪೂರ ಪೊಲೀಸ್ ಠಾಣೆ ಇವರ ನೇತೃತ್ವದಲ್ಲಿ ಪಂಚರಾದ 1) ಶ್ರೀ ಮಾಣಿಕಪ್ಪ ತಂದೆ ಭೀಮಶ್ಯಾ ತರನಳ್ಳಿ ವಯ: 43 ವರ್ಷ, ಉ: ನೀರಾವರಿ ತನಿಖಾ ಕಛೇರಿ ವಿಭಾಗ-3 ನೇದ್ದರಲ್ಲಿ ದ್ವೀತಿಯ ದರ್ಜೆ ಸಹಾಯಕ, ಸಾ: ಹುಣಜಿ(ಕೆ), ತಾ: ಬಾಲ್ಕಿ, ಜಿ: ಬೀದರ, ಹಾವ: ಲಕ್ಷ್ಮೀ ನಗರ ಹೀರಾಪೂರ ಕಲಬುರಗಿ 2) ಶ್ರೀ ರಾಣಪ್ಪ ತಂದೆ ಈರಣ್ಣ ಭಜಂತ್ರಿ ವಯ: 33 ವರ್ಷ, ಉ: ನೀರಾವರಿ ತನಿಖಾ ಕಛೇರಿ ವಿಭಾಗ-3 ನೇದ್ದರಲ್ಲಿ ಜವಾನ್, ಸಾ: ಕುರಕೋಟಾ, ತಾ:ಜಿ: ಕಲಬುರಗಿ ರವರು ಅಲ್ಲದೇ ಶ್ರೀ ಅಶ್ವತಕುಮಾರ ಪತ್ತಾರ ನಿರೀಕ್ಷಕರು-1 ಕಾನೂನು ಮಾಪನ ಶಾಸ್ತ್ರ ಇಲಾಖೆ ಕಲಬುರಗಿ ನಗರ ರವರು ಹಾಗೂ ಸಿಬ್ಬಂದಿಯವರಾದ 1) ಶ್ರೀ ಸತೀಶ ಹೆಚ್.ಸಿ-60, 2) ಶ್ರೀ ರವಿ ಹೆಚ್.ಸಿ-45, 3) ಶ್ರೀ ಸಂತೋಷಕುಮಾರ ಪಿ.ಸಿ-112, 4) ಶ್ರೀ ಕಲ್ಯಾಣಕುಮಾರ ಪಿ.ಸಿ-252 ರವರಿದ್ದ ತಂಡ ಕಲಬುರಗಿ ನಗರದ ಭರತನಗರ ತಂಡಾದ ಹಾಳು ಬಿದ್ದ ಸರ್ಕಾರಿ ಹಾಸ್ಟೆಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದಾಗ ದಾಳಿ ಮಾಡಿ ಆರೋಪಿತರನ್ನು ವಶಕ್ಕೆ ಪಡೆದುಕೊಂಡು ಸದರಿ ಆರೋಪಿತರ ಹತ್ತಿರ ಇದ್ದ ಒಟ್ಟು 610 ಗ್ರಾಂ ಗಾಂಜಾ ಅಂ.ಕಿ. 4,880/-ರೂ ಮತ್ತು 800 ನಗದು ಹಣ ಇವುಗಳನ್ನು ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡು ಬ್ರಹ್ಮಪೂರ ಪೊಲೀಸ್ ಠಾಣೆ ಗುನ್ನೆ ನಂ. 160/2023 ಕಲಂ 20 (b)(ii)(A) NDPS act 1985 ಪ್ರಕಾರ ಆರೋಪಿತರನ್ನು ಬಂಧಿಸಿ ಪ್ರಕರಣವನ್ನು ದಾಖಲಿಸಿಕೊಂಡು ದಸ್ತಗಿರಿ ಕ್ರಮ ಕೈಗೊಂಡಿದ್ದು ಇರುತ್ತದೆ.
ಪ್ರಕರಣದ ಪತ್ತೆ ಕಾರ್ಯದಲ್ಲಿ ಯಶಸ್ವಿಯಾದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಮಾನ್ಯ ಪೊಲೀಸ್ ಆಯುಕ್ತರಾದ ಶ್ರೀ ಚೇತನ್.ಆರ್., ಐ.ಪಿ.ಎಸ್. ಕಲಬುರಗಿ ನಗರ ರವರು ಶ್ಲಾಘಿಸಿರುತ್ತಾರೆ.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Next Post

ದಕ್ಷಿಣ ವಿಭಾಗಬೆಂಗಳೂರು ನಗರ ,ವಿ.ವಿ.ಪುರಂ ಪೊಲೀಸ್‌ _ ಠಾಣೆಯ ಪೊಲೀಸರ ಕಾರ್ಯಚರಣೆ

ಲಾರಿಗಳನ್ನು ಕಳ್ಳತನ ಮಾಡಿದ ತಮಿಳುನಾಡು ಮೂಲದ ಆರೋಪಿಯ ಬಂಧನ್ನ ಬೆಂಗಳೂರು : ವಿ.ವಿ.ಪುರಂ ಪೊಲೀಸ್‌ ಠಾಣೆಯ ಪೊಲೀಸರು. ಮೋಜು ಮತ್ತು ಮಸ್ತಿಗಾಗಿ ಲಾರಿಗಳನ್ನುಕಳ್ಳತನ ಮಾಡಿ ಮಾರಾಟ ಮಾಡಿದ್ದ ಒಬ್ಬ ಆರೋಪಿಯನ್ನು ದಸ್ತಗಿರಿ ಮಾಡಿ ಆತನ ವಶದಿಂದ ಸುಮಾರು 1… ಕೋಟಿ… 5 ಲಕ್ಷ ಮೌಲ್ಯದ ಮೂರು, 12 ಚಕ್ರದ ಲಾರಿಗಳನ್ನುಅಮಾನತ್ತುಪಡಿಸಿಕೊಂಡಿರುತ್ತಾರೆ. ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಆರೋಪಿಯು ಲಾರಿಗಳನ್ನು ಕಳ್ಳತನಮಾಡಿಕೊಂಡು ಆತನ ಸಹಚರರಿಗೆ ಮಾರಾಟ ಮಾಡುತ್ತಿದ್ದ, ಆರೋಪಿಯು ತಿಳಿಸಿದಂತೆ ಸದರಿ […]

Get News on Whatsapp

by send "Subscribe" to 7200024452
Close Bitnami banner
Bitnami