SSLC ಅಲ್ಲಿ 6 ಕ್ಕೆ 6 ವಿಷಯ ಫೇಲ್ ಸಿದ್ದಿಕ್ : ಪೂರಕ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ, ಬಂಡೆಪಾಳ್ಯ ಪೊಲೀಸ್ ಇನ್ಸ್ಪೆಕ್ಟರ್ ರಾಜೇಶ್ ಹಾಗೂ ತಂಡದಿಂದ

0 0
Read Time:4 Minute, 7 Second

ಬೆಂಗಳೂರು : 10 ನೇ ತರಗತಿ ಎಂದರೆ ಪ್ರತಿಯೊಬ್ಬರಿಗೂ ಭಯ ಅದರಲ್ಲೂ ವಿದ್ಯಾರ್ಥಿಗಳಿಗಿಂತ ಪೋಷಕರು ಹೆಚ್ಚು ಭಯ ಪಡುತ್ತಾರೆ, ಮಕ್ಕಳಿಗೆ ಜೀವನದಲ್ಲಿ ಮುಂದೆ ಬರಲು ಒಂದು ಮೆಟ್ಟಿಲು, ಪಾಸ್ ಆದರೆ ಸರಿ…
ಇನ್ನು ಪೆಲಾದವದರ ಕತೆ ಏನು ಹೆತ್ತವರ ವ್ಯತೆ ಅವರು ಪಡುವ ವೇದನೆ, ಅವಮಾನ ವಿದ್ಯರ್ಥಿಗಳು ಮನೆ ಬಿಟ್ಟು ಎಲ್ಲೂ ಹೋಗಲ್ಲ ಪೋಷಕರು ಯಾವುದೇ ಮದುವೆ, ಯಾವುದೇ ಸಮಾರಂಭದಲ್ಲಿ ಬಾಗಿ ಆಗೋಲ್ಲ ಕಾರಣ ಎಲ್ಲರೂ ಸಂಬಂದಿಕರು ಗೊತ್ತಿರೋರು ಕೇಳೋದು ನಿಮ್ಮ ಮಗಾ ಮಗಳು ಫೇಲ್ ಅಂತೇ ಅಷ್ಟೇ ಇನ್ನು ಏನ್ ಮಾಡ್ತಾರೆ ಹಾಗೆ ಈಗೆ ಅಂತ ಚುಚ್ಚಿ ಮಾತಾಡುತ್ತಾರೆ, ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಮಗ ಆದ್ರೆ ಎಲ್ಲಾದರೂ ಕೂಲಿಗೆ ಸೇರಿಸು ಅಂತಾರೆ ಮಗಳು ಆದರೆ ಗಾರ್ಮೆಂಟ್ಸ್ ಅಂತ ಹೇಳ್ತಾರೆ, ಕೆಲವು ಮಕ್ಕಳು ತುಂಬಾ ಸೂಕ್ಷ್ಮ ಆತ್ಮಹತ್ಯೆ ಮಾಡಿಕೊಳ್ಳೋಕೆ ಮುಂದಾಗ್ತಾರೆ, ಮಾನಸಿಕವಾಗಿ ಕುಗ್ಗಿ ಹೋಗಿರುತ್ತಾತಾರೆ ವಿದ್ಯಾರ್ಥಿಗಳು ಇದೆನ್ನೆಲ್ಲಾ ಗಮನದಲ್ಲಿ ಇಟ್ಟುಕೊಂಡು ಬಂಡೆಪಾಳ್ಯ ಪೊಲೀಸ್ ಇನ್ಸ್ಪೆಕ್ಟರ್ ಎಲ್.ವೈ.ರಾಜೇಶ್ ಹಾಗೂ ತಂಡ, ರಾಜಲಾಂಚನ ಸಂಸ್ಥೆ ಹಾಗೂ ದರ್ಪಣ ಸಂಸ್ಥೆ ಸಹಭಾಗಿತ್ವದಲ್ಲಿ ಈ ಉತ್ತಮ ಕಾರ್ಯವನ್ನು ಮಾಡಿದ್ದಾರೆ.

ಬೊಮ್ಮನಹಳ್ಳಿಯ ಬಂಡೇಪಾಳ್ಯದ ಪೊಲೀಸರು SSLC ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿಧ್ಯಾರ್ಥಿಗಳನ್ನು ಗುರುತಿಸಿ ಉಚಿತ ಟ್ಯೂಷನ್​ ವ್ಯವಸ್ಥೆ ಮಾಡಿದ್ದಾರೆ. ಇವರು 20 ದಿನಗಳ ಕಾಲ 65 ವಿದ್ಯಾರ್ಥಿಗಳಿಗೆ ಟ್ಯೂಷನ್​ ವ್ಯವಸ್ಥೆ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಮಕ್ಕಳಿಗೆ ಪ್ರತಿದಿನವೂ ಎಲ್ಲಾ ಆರು ಸಬ್ಜೆಕ್ಟ್​ಗನ್ನು ಪಾಠ ಮಾಡಲು ತರಗತಿ ವ್ಯವಸ್ಥೆಯನ್ನು ಪೊಲೀಸರು ಮಾಡಿಸಿಕೊಟ್ಟಿದ್ದಾರೆ. ತರಗತಿಗಳಲ್ಲಿ ನುರಿತ ಶಿಕ್ಷಕರಿಂದ ತರಬೇತಿ ನೀಡಿಸಿದ್ದು, ಒಟ್ಟು 35 ಜನ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.

ಪೊಲೀಸರು ನಗರದ ಶೊಬೋದಿನ ಶಾಲೆಯಲ್ಲಿ ಪ್ರತಿ ದಿನ ಶಿಕ್ಷಣಕ್ಕೆ ವ್ಯವಸ್ಥೆ ಮಾಡಿಸಿದ್ದರು. ಆರಕ್ಕೆ ಆರೂ ಸಜ್ಬೆಕ್ಟ್ ಫೇಲ್ ಆಗಿದ್ದ ಸಿದ್ದಿಕ್ ಎಂಬ ವಿದ್ಯಾರ್ಥಿ ಕೂಡ ತೇರ್ಗಡೆಯಾಗಿದ್ದಾನೆ. ಈ ಹಿನ್ನೆಲೆ ಪೋಷಕರು ಸಂತಸ ವ್ಯಕ್ತಪಡಿಸಿದ್ದು ಬಂಡೆ ಪಾಳ್ಯ ಠಾಣೆ ಎದುರು ತೇರ್ಗಡೆ ಹೊಂದಿದ ವಿಧ್ಯಾರ್ಥಿಗಳು ಪೊಲೀಸರಿಗೆ ಧನ್ಯವಾದ ಹೇಳಿದ್ದಾರೆ. ಈ ಸಂದರ್ಭ ವಿಧ್ಯಾರ್ಥಿಗಳಿಗೂ ಸನ್ಮಾನಿಸಿ ಗೌರವಿಸಲಾಗಿದೆ.

ಪೊಲೀಸ್ ಅಧಿಕಾರಿಗಳು ಮನಸ್ಸು ಮಾಡಿದರೆ ಸಮಾಜಕ್ಕೆ ಎಂತಹ ಕೊಡುಗೆ ಬೇಕಾದರೂ ನೀಡುತ್ತಾರೆ ಎಂಬುದಕ್ಕೆ ಇದು ಒಂದು ಸಾಕ್ಷಿ.


ಉತ್ತಮ ಶಿಕ್ಷಣ, ಮಕ್ಕಳಿಗೆ ನಾವು ಯಾವ ತರ ಸಹಾಯ ಮಾಡಬೇಕು ಎಂಬುದು ಬಂಡೆಪಾಳ್ಯ ಪೊಲೀಸ್ ಅಧಿಕಾರಿ ರಾಜೇಶ್ ತೋರಿಸಿಕೊಟ್ಟಿದ್ದಾರೆ.
ವಿದ್ಯಭ್ಯಾಸ ಕೊರತೆಯಿಂದ ಅನೇಕ ಅಪರಾಧ ನಡೆಯುತ್ತಿದೆ, ಮಕ್ಕಳು ಫೇಲ್ ಆದರೆ ಏನ್ ಮಾಡೋದು ಎಂದು ತಿಳಿಯದೆ, ಕೆಟ್ಟ ಅಭ್ಯಾಸಗಳಿಗೆ, ಚಟಗಳಿಗೆ ಹೋಗುತ್ತಾರೆ. ಉತ್ತಮ ಶಿಕ್ಷಣ, ಉತ್ತಮ ಮಾರ್ಗದರ್ಶನ, ನಾವು ನಿಮ್ಮೊಂದಿಗೆ ಇದ್ದೇವೆ ಎಂದು ಧೈರ್ಯ ಕೊಡುವುದು ನಮ್ಮೆಲ್ಲರ ಕರ್ತವ್ಯ…
ಇದನ್ನೇ ಬಂಡೆಪಾಳ್ಯ ಠಾಣಾ ಅಧಿಕಾರಿ ರಾಜೇಶ್ ಅವರ ತಂಡ ಮಾಡಿರೋದು.
ನಮ್ಮ ಪೊಲೀಸ್ ನ್ಯೂಸ್ ಪ್ಲಸ್ ಮಾಧ್ಯಮದಿಂದ ಪಾಸ್ ಆದ ವಿದ್ಯಾರ್ಥಿಗಳಿಗೆ ಅಭಿನಂದನೆಗಳು ಹಾಗೂ ಬಂಡೆಪಾಳ್ಯ ಪೊಲೀಸ್ ಇನ್ಸ್ಪೆಕ್ಟರ್ ರಾಜೇಶ್ ಹಾಗೂ ತಂಡದವರಿಗೆ ಅಭಿನಂದನೆಗಳು….

Happy
Happy
100 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Next Post

ವೇಶ್ಯಾವಾಟಿಕೆ ದಂದೆ ನಡೆಸಿ ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದ ಆರೋಪಿಗಳ ಬಂಧನ

ಬೆಂಗಳೂರು:ಗೋವಿಂದರಾಜನಗರ ಪೊಲೀಸ್ ಠಾಣಾ ಸರಹದ್ದಿಗೆ ಸೇರಿದ ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದಾರೆಂಬ ಮಾಹಿತಿ ಸಂಗ್ರಹಿಸಿ ಗೋವಿಂದರಾಜನಗರ ಪೊಲೀಸರು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ದಾಳಿ ಮಾಡಿ, ವೇಶ್ಯಾವಾಟಿಕೆ ನಡೆಸುತ್ತಿದ್ದ ಓರ್ವ ಮಹಿಳೆ ಮತ್ತು ಒಬ್ಬ ಪುರುಷ ಆರೋಪಿಯನ್ನು ದಸ್ತಗಿರಿ ಮಾಡಲಾಗಿರುತ್ತದೆ. ಆರೋಪಿಗಳಿಂದ ಕೃತ್ಯಕ್ಕೆ ಉಪಯೋಗಿಸುತ್ತಿದ್ದ ಎರಡು ಮೊಬೈಲ್ ಫೋನ್‌ಗಳು, ರೂ.2.500/- ನಗದು ಹಣವನ್ನು ಅಮಾನತ್ತುಪಡಿಸಿಕೊಂಡು, ವೇಶ್ಯಾವಾಟಿಕೆಗೆ ದೂಡಿದ್ದ ನಾಲ್ಕು ಜನ ನೊಂದ ಮಹಿಳೆಯರನ್ನು ಸಂರಕ್ಷಿಸಿರುತ್ತಾರೆ.ಈ ಕಾರ್ಯಾಚರಣೆಯನ್ನು ಡಿಸಿಪಿ, ಪಶ್ಚಿಮ ವಿಭಾಗ ಮತ್ತು ಪೊಲೀಸ್ […]

Get News on Whatsapp

by send "Subscribe" to 7200024452
Close Bitnami banner
Bitnami