ಕೊಲೆ ಪ್ರಯತ್ನ ಪ್ರಕರಣದಲ್ಲಿ ತಲೆ ಮರೆಸಿಕೊಂಡಿದ್ದ 07 ಜನ ಆರೋಪಿಗಳ ಬಂಧನ : ಅನ್ನಪೂರ್ಣೇಶ್ವರಿನಗರ ಪೊಲೀಸರ ಕಾರ್ಯಾಚರಣೆ

0 0
Read Time:1 Minute, 48 Second

ಅನ್ನಪೂರ್ಣೇಶ್ವರಿನಗರ ಪೊಲೀಸ್‌ಠಾಣೆಯ ಸರಹದ್ದಿನ ಪ್ರತಿಷ್ಠಿತ ಕಾಲೇಜಿನ ಮುಂಭಾಗ 07 ಜನ ಆರೋಪಿಗಳು ದರ್ಶನ್ ಎಂಬುವವರನ್ನು ಅಡ್ಡಗಟ್ಟಿ, ಮಾರಕ ಆಯುಧಗಳಿಂದ ಹಲ್ಲೆ ಮಾಡಿ, ಕೊಲೆಗೆ ಪ್ರಯತ್ನಿಸಿ, ತಲೆಮರೆಸಿಕೊಂಡಿರುತ್ತಾರೆ. ಈ ಬಗ್ಗೆ ಅನ್ನಪೂರ್ಣೇಶ್ವರಿನಗರ ಪೊಲೀಸ್‌ ಠಾಣೆಯಲ್ಲಿ ದಿ:05.06.2023 ರಂದು ಪ್ರಕರಣ ದಾಖಲಾಗಿರುತ್ತದೆ.

ಪ್ರಕರಣದ ತನಿಖೆಯನ್ನು ಮುಂದುವರೆಸಿ, ಹಲವಾರು ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಿ, ಹಾಗೂ ಸಾಮಾಜಿಕ ಜಾಲತಾಣದಲ್ಲಿ ಸದರಿ ಘಟನೆಯ ಬಗ್ಗೆ ವೈರಲ್ ಆಗಿದ್ದನ್ನು ಸಹ ಪರಿಶೀಲಿಸಿ, 07 ಜನ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿರುತ್ತಾರೆ.

ಈ ಕಾರ್ಯಾಚರಣೆಯನ್ನು ಬೆಂಗಳೂರು ನಗರದ ಪಶ್ಚಿಮ ವಿಭಾಗದ ಉಪ ಪೊಲೀಸ್ ಕಮೀಷನರ್ ರವರಾದ ಡಾ:ಲಕ್ಷ್ಮಣ ನಿಂಬರಗಿ, ರವರ ಸೂಕ್ತ ಮಾರ್ಗದರ್ಶನದಲ್ಲಿ, ಕೆಂಗೇರಿ ಉಪ- ವಿಭಾಗದ ಸಹಾಯಕ ಪೊಲೀಸ್ ಕಮೀಷನರ್ ರವರಾದ ಶ್ರೀ.ಹೆಚ್.ಎಸ್.ಪರಮೇಶ್ವರ್ ರವರ ನಿರ್ದೇಶನದಲ್ಲಿ ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ.ರಾಮಮೂರ್ತಿ.ಬಿ ರವರು ಮತ್ತು ಸಿಬ್ಬಂದಿಗಳು ಕಾರ್ಯಾಚರಣೆಯನ್ನು ಕೈಗೊಂಡು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.
ಈ ಮೇಲೆ ತಿಳಿಸಿದ ಅಧಿಕಾರಿಗಳ ಮತ್ತು ಸಿಬ್ಬಂದಿಯವರುಗಳ ಕರ್ತವ್ಯವನ್ನು ಪೊಲೀಸ್ ಆಯುಕ್ತರು, ಬೆಂಗಳೂರು ನಗರ ಮತ್ತು ಅಪರ ಪೊಲೀಸ್ ಆಯುಕ್ತರು, ಪಶ್ಚಿಮ ರವರು ಪ್ರಶಂಸಿರುತ್ತಾರೆ.

ವರದಿ : ಆಂಟೋನಿ ಬೇಗೂರು

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Next Post

CEIR PORTAL ಸಹಾಯದಿಂದ ಕಳುವಾದ ಕಳೆದುಕೊಂಡಿದ್ದ 10 ಮೊಬೈಲ್‌ಗಳನ್ನು ಪತ್ತೆ

ಹರಿಹರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳುವಾದ/ಕಳೆದು ಹೋದ ಮೊಬೈಲ್‌ಫೋನ್‌ಗಳನ್ನು CEIR PORTAL ನಲ್ಲಿ ಮೊಬೈಲ್‌ನ ವಾರಸುದಾರರ ವಿವರಗಳನ್ನು ನಮೂದು ಮಾಡಿ, ಮೊಬೈಲ್‌ನ ಐಎಂಇಐ ನಂಬರ್‌ನ್ನು ಬ್ಲಾಕ್ ಮಾಡುವ ಮುಖಾಂತರ ಕಳೆದುಹೋದ / ಕಳುವಾದ ಮೊಬೈಲ್‌ಗಳ ಪೈಕಿ 10 ಮೊಬೈಲ್‌ಗಳನ್ನು ಹರಿಹರ ನಗರ ಪೊಲೀಸ್ ಠಾಣೆಯಲ್ಲಿ ಪತ್ತೆ ಮಾಡಿ, ಮೊಬೈಲ್ ವಾರಸುದಾರರಾದ 1] ವಿರುಪಾಕ್ಷಿ, 2] ಸ್ವರೂಪ್ ದುರುಗೋಜಿ, 3] ರಮೇಶ, 4] ಎನ್ ಪಿ ಹಿರೇಮಠ, 5] ಗುಡ್ಡಾಚಾರಿ, […]

Get News on Whatsapp

by send "Subscribe" to 7200024452
Close Bitnami banner
Bitnami