ಮೊಬೈಲ್ ಹಾಗೂ ಹಣ ಸುಲಿಗೆ : ಕಲುಬುರ್ಗಿ ಪೊಲೀಸ್ ಕಾರ್ಯಾಚರಣೆ

0 0
Read Time:2 Minute, 22 Second

ದಿನಾಂಕ: 31-05-2023 ರಂದು,ಸಿದ್ರಾಮಪ್ಪ ತಂದೆ ಕಾಮಣ್ಣ, ಸಾ|| ಕಾಟಂದೇವರಹಳ್ಳಿ ತಾ|| ಚಿತ್ತಾಪೂರರವರು ಸಲ್ಲಿಸಿದ ಫಿರ್ಯಾದಿಯ ಸಾರಾಂಶವೇನೆಂದರೆ ಕಲಬುರಗಿ ನಗರದ ಕೇಂದ್ರ ಬಸ್‌ ನಿಲ್ದಾಣದ ಹತ್ತಿರ 01 ರಿಯಲ್ ಮಿ ಮೋಬೈಲ್, ಪೋನ್ ಕವರನಲ್ಲಿದ್ದ ನಗದು ಹಣ 3,000/- ರೂಪಾಯಿ ಸುಲಿಗೆಗೈದಿದ್ದಾರೆ ಎಂದು ನೀಡಿದ ಅರ್ಜಿಯ ಸಾರಾಂಶದ ಮೇಲಿಂದ ಅಶೋಕ ನಗರ ಪೊಲೀಸ್ ಠಾಣೆ ಗುನ್ನೆ ನಂ. 69/2023 ಕಲಂ 392 ಐ.ಪಿ.ಸಿ. ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಕೊಂಡಿದ್ದು ಇರುತ್ತದೆ. ಪ್ರಕರಣದ ಆರೋಪಿ ಪತ್ತೆ ಕುರಿತು ಮಾನ್ಯ ಶ್ರೀ ಅಡೂರು ಶ್ರೀನಿವಾಸುಲು, ಐ.ಪಿ.ಎಸ್, ಉಪ-ಪೊಲೀಸ ಆಯುಕ್ತರು (ಕಾ&ಸೂ) ಕಲಬುರಗಿ ನಗರ, ಮಾನ್ಯ ಶ್ರೀ ಐ.ಎ ಚಂದ್ರಪ್ಪ ಉಪ-ಪೊಲೀಸ ಆಯುಕ್ತರು (ಅ&ಸಂ) ಕಲಬುರಗಿ ನಗರ, ಶ್ರೀ ಭೂತೇಗೌಡ, ಎ.ಸಿ.ಪಿ ದಕ್ಷಿಣ ಉಪವಿಭಾಗ ಕಲಬುರಗಿ ನಗರರವರ ಮಾರ್ಗದರ್ಶನದಲ್ಲಿ ಶ್ರೀ ಪಂಡಿತ ಸಗರ ಪಿ.ಐ. ಅಶೋಕ ನಗರ ಪೊಲೀಸ ಠಾಣೆ ಕಲಬುರಗಿ ನಗರ ಇವರ ನೇತೃತ್ವದಲ್ಲಿ ಶ್ರೀ ಶಿವಪ್ಪ ಪಿ.ಎಸ್.ಐ. ಮತ್ತು ಸಿಬ್ಬಂದಿಯವರಾದ ಶ್ರೀ ಗುರುಮೂರ್ತಿ ಸಿ.ಹೆಚ್.ಸಿ-47, ಸಂಜುಕುಮಾರ ಸಿ.ಹೆಚ್.ಸಿ-115, ಶಿವಲಿಂಗ ಸಿ.ಪಿ.ಸಿ-446, ಹಾಗೂ ನೀಲಕಂಠರಾಯ ಪಾಟೀಲ ಸಿ.ಪಿ.ಸಿ-531 ರವರನ್ನೊಳಗೊಂಡ ತಂಡವು ಪ್ರಕರಣದ ಆರೋಪಿ ಶಿವಾ ತಂದೆ ಯಾದವರಾವ ಹುಣ್ಣೆ, ವಯಸ್ಸು :22 ವರ್ಷ, ಉಬೇಕಾರ, ಸಾ|| ಭೀಮನಗರ ಭಾಲ್ಕಿ, ಜಿ|| ಬೀದರ ಇತನನ್ನು ವಶಕ್ಕೆ ಪಡೆದು ಅವನಿಂದ 01) ಒಂದು ರಿಯಲ್ ಮೀ ಮೋಬೈಲ್ ಅ.ಕಿ. 5, 000/-, 02) ಒಂದು ಒಪ್ಪೋ ಮೋಬೈಲ್ ಅ.ಕಿ. 5,000/- ಹಾಗೂ ನಗದು ಹಣ 650/- ರೂಪಾಯಿಗಳು ಒಟ್ಟು ಅ.ಕಿ. 10,650/– ರೂ ಮೌಲ್ಯದ ಸ್ವತ್ತು ಜಪ್ತಿ ಪಡಿಸಿಕೊಂಡು ದಸ್ತಗಿರಿ ಕ್ರಮ ಕೈ ಗೊಂಡಿದ್ದು ಇರುತ್ತದೆ.

ಸದರಿ ಪ್ರಕರಣದ ಪತ್ತೆ ಕಾರ್ಯದಲ್ಲಿ ಯಶಸ್ವಿಯಾದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಮಾನ್ಯ ಶ್ರೀ ಚೇತನ್. ಆರ್., ಐ.ಪಿ.ಎಸ್, ಪೊಲೀಸ್ ಆಯುಕ್ತರು, ಕಲಬುರಗಿ ನಗರ ರವರು
ಶ್ಲಾಘಿಸಿರುತ್ತಾರೆ.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Next Post

ಹಣಕ್ಕೆ ಬೇಡಿಕೆಯಿಟ್ಟು ಅಪಹರಣ ಮಾಡಿದ ಆರೋಪಿಗಳ ಬಂಧನ: ಜ್ಞಾನಭಾರತಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ.ಸುಬ್ರಮಣಿ ಮತ್ತು ಸಿಬ್ಬಂದಿಗಳ ಕಾರ್ಯಾಚರಣೆ

ದಿನಾಂಕ:20/06/2023 ರಂದು ಜ್ಞಾನಭಾರತಿ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದು, ದೂರಿನಲ್ಲಿ ಕೆಂಚನಪುರ ಕ್ರಾಸ್‌ನಲ್ಲಿರುವ ಸಂತೋಷ್ ಸೋಶಿಯಲ್ ಸರ್ವೀಸ್ ಸೊಸೈಟಿ (ರಿಯಾಬಿಲಿಟೇಷನ್ ) ಸೆಂಟರ್ ನ ಮಾಲೀಕನಿಗೆ ಮೊಬೈಲ್ ಮುಖಾಂತರ ದಮ್ಮಿ ಹಾಕಿ 10 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದು, ಸದರಿ ಮಾಲೀಕರು ಹಣ ಕೊಡಲು ನಿರಾಕರಿಸಿದ್ದರು. ನಂತರ ರಿಯಾಬಿಲಿಟೇಷನ್‌ ಸೆಂಟರ್ ಹತ್ತಿರ ಬಂದ 7-8 ಜನ ಆಸಾಮಿಗಳು ಮ್ಯಾನೇಜರ್ ಬಳಿ, ಮಾಲೀಕರ ಬಗ್ಗೆ ವಿಚಾರಿಸಿದ್ದು, ಮ್ಯಾನೇಜರ್ ರವರು ಮಾಲೀಕರು ಇಲ್ಲವೆಂದು […]

Get News on Whatsapp

by send "Subscribe" to 7200024452
Close Bitnami banner
Bitnami