Read Time:1 Minute, 16 Second
ಮೈಸೂರು ಎಕ್ಸಪ್ರೆಸ್‌ವೇನಲ್ಲಿ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಎಡಿಜಿಪಿ ಅಲೋಕ್ ಕುಮಾರ್ ಅವರು ಬೆಂಗಳೂರು ದಕ್ಷಿಣ ತಾಲೂಕಿನ ಬಾಬಾಸಾಹೇಬರ ಪಾಳ್ಯ ಬಳಿ ಹೈವೇಯನ್ನು ಪರಿಶೀಲಿಸಿದ್ದಾರೆ. ಬೆಂಗಳೂರು-ಮೈಸೂರು ಎಕ್ಸಪ್ರೆಸ್‌ನಲ್ಲಿ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಎಡಿಜಿಪಿ ಅಲೋಕ್ ಕುಮಾರ್ ಅವರು ಬೆಂಗಳೂರು ದಕ್ಷಿಣ ತಾಲೂಕಿನ ಬಾಬಾಸಾಹೇಬರ ಪಾಳ್ಯ ಬಳಿ ಹೈವೇಯನ್ನು ಪರಿಶೀಲಿಸಿದ್ದಾರೆ.
ಎಡಿಜಿಪಿ ಅಲೋಕ್ ಕುಮಾರ್ ಅವರಿಗೆ ಎನ್‌ಹೆಚ್‌ಎಐ (NHAI), ಪಿಡಬ್ಲ್ಯೂ, ಆರ್‌ಟಿಓ, ಆರೋಗ್ಯ ಅಧಿಕಾರಿಗಳು, ಐಜಿಪಿ ರವಿಕಾಂತೇಗೌಡ ಹಾಗೂ ಎಸ್‌ಪಿ ಕಾರ್ತಿಕ್ ರೆಡ್ಡಿ ಸಾಥ್ ನೀಡಿದ್ದಾರೆ. ಪರಿಶೀಲನೆ ಬಳಿಕ ಅಧಿಕಾರಿಗಳ ಜೊತೆ ರಾಮನಗರದಲ್ಲಿ ಅಲೋಕ್ ಕುಮಾರ್ ಸಭೆ ನಡೆಸಲಿದ್ದಾರೆ. ಇತ್ತೀಚೆಗೆ ಹೆದ್ದಾರಿಯಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಿತ್ತು. ಐದು ತಿಂಗಳಲ್ಲಿ 105 ಜನ ಸಾವನ್ನಪ್ಪಿದ್ದು, 250 ಅಪಘಾತ ಪ್ರಕರಣ ದಾಖಲಾಗಿವೆ.
