ಸಿಬಿಐಗೆ ಸೂದ್: ಕೇಂದ್ರೀಯ ತನಿಖಾ ದಳದ (ಸಿಬಿಐ) ನಿರ್ದೇಶಕರಾಗಿ ಮೇ.೨೫ರಂದು ಅಧಿಕಾರ

0 0
Read Time:1 Minute, 58 Second

ರಾಜ್ಯದ ಡಿಜಿ-ಐಜಿಪಿಯ ಅಧಿಕಾರವನ್ನು ಹಸ್ತಾಂತರಿಸಿದ ಹಿರಿಯ ಐಪಿಎಸ್ ಅಧಿಕಾರಿ ಪ್ರವೀಣ್ ಸೂದ್ ಅವರು ಕೇಂದ್ರೀಯ ತನಿಖಾ ದಳದ (ಸಿಬಿಐ) ನಿರ್ದೇಶಕರಾಗಿ ಮೇ.೨೫ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಅಧಿಕಾರವನ್ನು ಹಸ್ತಾಂತರಿಸಿದ ಸೂದ್ ಅವರು ನಾಳೆ ನವದೆಹಲಿಗೆ ತೆರಳಿದ್ದು ಇಂದು ಬೆಳಿಗ್ಗೆ ಅವರಿಗೆ ಪೊಲೀಸ್ ಇಲಾಖೆಯ ವತಿಯಿಂದ ನಿರ್ಗಮನ ಪಥಸಂಚಲನ ನಡೆಸಲಾಯಿತು.
ಪಥಸಂಚಲನದಲ್ಲಿ ಪಾಲ್ಗೊಂಡು ಭಾವನಾತ್ಮಕವಾಗಿ ಮಾತನಾಡಿದ ಸೂದ್ ಅವರು ರಾಜ್ಯ ಪೊಲೀಸ್ ಇಲಾಖೆಯಲ್ಲಿ ೩೭ ವರ್ಷಗಳ ಸುಧೀರ್ಘ ಸೇವೆ ಸಲ್ಲಿಸಿರುವುದಕ್ಕೆ ತೃಪ್ತಿ ವ್ಯಕ್ತಪಡಿಸಿದರು.
ಕರ್ನಾಟಕ ನನ್ನ ಕರ್ಮಭೂಮಿಯಾಗಿದ್ದು ಜನ್ಮಭೂಮಿಗಿಂತ ಹೆಚ್ಚಿನ ತೃಪ್ತಿ ನೆಮ್ಮದಿ ನೀಡಿದ್ದು ಎರಡು ವರ್ಷಗಳ ಕೇಂದ್ರ ಸೇವೆಯ ಅವಧಿಯ ಬಳಿಕ ಬೆಂಗಳೂರಿಗೆ ಬಂದು ಇಲ್ಲೇ ನೆಲೆಸಿ ನಿವೃತ್ತ ಜೀವನ ನಡೆಸುತ್ತೇನೆ ಎಂದರು.
ಪೊಲೀಸ್‌ಗೆ ಹೆಚ್ಚು ಸೌಲಭ್ಯ:
ಪೊಲೀಸ್ ಅಧಿಕಾರಿಗಳಿಂದ ಮುಖ್ಯಪೇದೆ ಪೇದೆಗಳಿಗೆ ಹೆಚ್ಚಿನ ಸೌಲಭ್ಯ, ಮುಂಬಡ್ತಿ, ವಸತಿ ಕಲ್ಪಿಸಲು ಶಕ್ತಿಮೀರಿ ಇಲಾಖೆಯ ಎಲ್ಲರ ಸಹಕಾರ ನಾಡಿನ ಜನರ ಬೆಂಬಲದೊಂದಿಗೆ ಶ್ರಮಿಸಿದ್ದೇನೆ ಎಂದು ತಿಳಿಸಿದರು.
ನಿರ್ಗಮನ ಪಥಸಂಚಲನದಲ್ಲಿ ಸೂದ್ ಅವರ ಪತ್ನಿ ಮಕ್ಕಳು ಕುಟುಂಬಸ್ಥರು ಪಾಲ್ಗೊಂಡಿದ್ದರು. ಕೆಎಸ್‌ಆರ್‌ಪಿಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಸೀಮಾಂತ್ ಕುಮಾರ್ ಸಿಂಗ್ ಅವರು ಪಥಸಂಚಲನದ ನೇತೃತ್ವ ವಹಿಸಿದ್ದರು.
ಬಹುತೇಕ ಡಿಜಿ ಎಡಿಜಿಪಿ, ಐಜಿ, ಡಿಐಜಿ, ಡಿಸಿಪಿ, ಎಸ್‌ಪಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು



Antony Raju A -Citizen Reporter-Karnataka


Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Next Post

ಕರ್ನಾಟಕ ಸರ್ಕಾರ ರಚನೆ: ಸಚಿವರ ವಿವರಗಳು

ಶ್ರೀ ಸಿದ್ದರಾಮಯ್ಯ -ಮುಖ್ಯಮಂತ್ರಿ,ಹಣಕಾಸು ಮಂತ್ರಿ ಹಾಗೂ ಸಿಬ್ಬಂದಿ ಆಡಳಿತ ಸುಧಾರಣೆ ಶ್ರೀ ಡಿ.ಕೆ.ಶಿವಕುಮಾರ್ – ಉಪಮುಖ್ಯಮಂತ್ರಿ,ಜಲಸಂಪನ್ಮೂಲ ಸಚಿವರು ಆರ್.ವಿ.ದೇಶಪಾಂಡೆ – ವಿಧಾನಸಭಾ ಸ್ಪೀಕರ್ ಡಾ.ಹೆಚ್.ಸಿ.ಮಹದೇವಪ್ಪ – ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸತೀಶ್ ಜಾರಕಿಹೋಳಿ – ಸಮಾಜ ಕಲ್ಯಾಣ ಕೃಷ್ಣಭೈರೇಗೌಡ – ಕೃಷಿ ಮತ್ತು ತೋಟಗಾರಿಕೆ ಲಕ್ಷ್ಮಿ ಹೆಬ್ಬಾಳ್ಕರ್ -ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಪುಟ್ಟರಂಗಶೆಟ್ಟಿ – ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಮುಜರಾಯಿ ಮತ್ತು ಜವಳಿ ಚೆಲುವನಾರಯಣಸ್ವಾಮಿ – […]

Get News on Whatsapp

by send "Subscribe" to 7200024452
Close Bitnami banner
Bitnami