ನಕಲಿ ಅಂಕಪಟ್ಟಿಗಳನ್ನು ನೀಡಿ ಮೋಸ ಮಾಡುತ್ತಿದ್ದಾರೆ ಎಂದು ಸಚಿನ್ ಎಂಬುವವರು ಪುಟ್ಟೇನಹಳ್ಳಿ ಪೊಲೀಸರಿಗೆ ದೂರು

1 0
Read Time:3 Minute, 30 Second

ಸರ್ಕಾರದಿಂದ ಯಾವುದೇ ಮಾನ್ಯತೆ ಪಡೆಯದೆ ಕರ್ನಾಟಕ ಇನ್‍ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್(ಕೆಐಒಎಸ್)ಎಂಬ ಸಂಸ್ಥೆ ತೆರೆದು ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ತತ್ಸಮಾನ ಎಂದು ನಮೂದಿಸಿ ಅಂಕಪಟ್ಟಿಗಳನ್ನು ವಿತರಣೆ ಮಾಡುತ್ತಿದ್ದ ಜಾಲವೊಂದನ್ನು ಸಿಸಿಬಿ ಪೋಲಿಸರು ಪತ್ತೆ ಹಚ್ಚಿ ಮೂವರನ್ನು ಬಂಧಿಸಿದ್ದಾರೆ.

ಹುಬ್ಬಳ್ಳಿ ವಿದ್ಯಾನಗರದ ಪ್ರಭುರಾಜ ಹೊಸಪೇಟೆ (36), ಬೆಂಗಳೂರಿನ ಕನಕಪುರ ರಸ್ತೆ ಜರಗನಹಳ್ಳಿ ಎಂ.ಎಸ್ ಲೇಜೌಟ್‍ನ ಮೈಲಾರಿ ಅಲಿಯಾಸ್ ಮೈಲಾರಿ ಪಾಟೀಲ್ (46), ಮತ್ತು ಅರಕೆರೆಯ ಡಾಕ್ಟರ್ಸ್ ಲೇಜೌಟ್ ನಿವಾಸಿ ಮೊಹಮದ್ ತೈಹಿದ್ ಅಹಮದ್ (30) ಬಂಧಿತರು ಆರೋಪಿಗಳಿಂದ 10 ಮತ್ತು ಹನ್ನೇರಡನೇ ತರಗತಿಗೆ ಸಮಾನವಾದ ಎಂದು ಎಂದು ನಮೋದಿಸಿದ್ದ ವಿದ್ಯಾರ್ಥಿ ನೊಂದಣಿ ಸಂಖ್ಯೆ, ವಿದ್ಯಾರ್ಥಿ ಹೆಸರು ಮತ್ತು ಇತರ ಮಾಹಿತಿಗಳು ವಿವಿಧ ವಿಷಯಗಳ ಅಂಕ ನಮೋದಿಸಿರುವ 70 ಅಂಕ ಪಟ್ಟಿಗಳು ನೊಂದಣಿ ಸಂಖ್ಯೆ ವಿದ್ಯಾರ್ಥಿ ಹೆಸರನ್ನು ನಮೋದಿಸಿ ಅಂಕ ನಮೋದಿಸಿದ 190 ಅಂಕ ಪಟ್ಟಿಗಳು ಖಾಲಿ ಇರುವ 7100 ಅಂಕ ಪಟ್ಟಿಗಳು ಬರೆಯಲು ಕೊಡುವ 5500 ಉತ್ತರ ಪತ್ರಿಕೆಗಳು ವಿದ್ಯಾರ್ಥಿಗಳನ್ನು ಅಡ್ಮಿಷನ್ ಮಾಡಿಕೊಂಡಿರುವ 25 ಅಡ್ಮಿಷನ್ ರಿಜಿಸ್ಟರ್‍ಗಳು ನಕಲಿ ಮಾಕ್ಸ್ ಕಾರ್ಡ್‍ಗಳನ್ನು ಪ್ರಿಂಟ್ ತೆಗೆಯಲು ಬಳಸಿದ್ದ ಕಲರ್ ಪ್ರಿಂಟರ್ ಕಂ ಜೆರಾಕ್ಸ್ ಮಿಷಿನ್ ಹಾಗೂ 4 ಲ್ಯಾಪ್ ಟಾಪ್‍ಗನ್ನು ವಶಪಡಿಸಿಕೊಳ್ಳಲಾಗಿದೆ.
ವೈಟಿಟಿ ಶಾಲೆಯ ಸಂಸ್ಥಾಪಕರಾದ ಮೈಲಾರಿ ಎಂಬುವವರು ನಕಲಿ ಅಂಕಪಟ್ಟಿಗಳನ್ನು ನೀಡಿ ಮೋಸ ಮಾಡುತ್ತಿದ್ದಾರೆ ಎಂದು ಸಚಿನ್ ಎಂಬುವವರು ಪುಟ್ಟೇನಹಳ್ಳಿ ಪೊಲೀಸರಿಗೆ ದೂರು ನೀಡಿದ್ದರು.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸಿಸಿಬಿ ಪೊಲೀಸರು ತನಿಖೆ ಕೈಗೊಂಡು ಅಂಕಪಟ್ಟಿ ಜಾಲದ ಬಗ್ಗೆ ಮಾಹಿತಿಯನ್ನು ಕಲೆಹಾಕಿ ಅಂಕ ಪಟ್ಟಿಗಳನ್ನು ವಿತರಣೆ ಮಾಡುತ್ತಿದ್ದ ನಗರದ ವೈಟಿಟಿ ಇನ್‍ಸ್ಟಿಟ್ಯೂಟ್ ಸಂಸ್ಥಾಪಕ, ಇಗ್ನೈಟ್ ಗ್ರೂಪ್ ಆಪ್ ಇನ್‍ಸ್ಟಿಟ್ಯೂಟ್‍ನ ಸಂಸ್ಥಾಪಕ ಹಾಗೂ ಕೆಐಒಎಸ್ ಸಂಸ್ಥೆಯ ಮೂವರನ್ನು ಬಂಧಿಸಿದ್ದಾರೆ.

ದಾಳಿ ವೇಳೆ ಮೀರತ್‍ಯ್ಯೂನಿವರ್‍ಸಿಟಿ , ಚರಣ್ ಸಿಂಗ್ ಯ್ಯೂನಿವರ್‍ಸಿಟಿಗೆ ಸಂಬಂಧಿಸಿದ ಬಿಎ ಪದವಿಯ 3 ನಕಲಿ ಅಂಕ ಪಟ್ಟಿಗಳ ಮಿಗ್ರೇಷನ್ ಸರ್ಟಿಫಿಕೇಟ್ ಕಾನ್ವೋಕೇಷನ್ ಸರ್ಟಿಫಿಕೇಟ್ ಕೆಐಒಎಸ್ ಹುಬ್ಬಳ್ಳಿ ಸಂಸ್ಥೆಗೆ ಸೇರಿದ ಒಟ್ಟು 14 ಪಿಯು ಮತ್ತು ಎಸ್‍ಎಸ್‍ಲ್ ಸಿ ತತ್ಸಮಾನ ತರಗತಿ ನಕಲಿ ಅಂಕ ಪಟ್ಟಿಗಳು ಸೇರಿದಂತೆ ವಿವಿಧ ವಿಶ್ವವಿದ್ಯಾನಿಲಯಗಳಿಗೆ ಸೇರಿದ 4 ನಕಲ ಅಂಕ ಪಟ್ಟಿಗಣನ್ನು ವಶಕ್ಕೆ ಪಡೆದುಕೊಂಡು ತನಿಖೆ ಮುಂದುವರಿಸಲಾಗಿದೆ.

ಆರೋಪಿಗಳು ನೂರಾರು ವಿದ್ಯಾರ್ಥಿಗಳಿಗೆ ಕೆಐಒಎಸ್, ಹುಬ್ಬಳ್ಳಿ ಸಂಸ್ಥೆಯ ಸಂಸ್ಥಾಪಕರಿಂದ ಅಂಕ ಪಟ್ಟಿಗಳನ್ನು ಪಡೆದುಕೊಂಡಿರಿವುದಾಗಿ ವಿಚಾರಣೆ ವೇಳೆ ರೋಪಿಗಳು ತಿಳಿಸಿದ್ದಾರೆ.

Antony Raju A -Citizen Reporter-Karnataka
Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Next Post

ಸೂಕ್ತ ದಾಖಲೆಗಳು ಇಲ್ಲದ ಕಾರಣ ಈ ಹಣವನ್ನು ಅಧಿಕಾರಿಗಳು ಜಪ್ತಿ

ಹುಬ್ಬಳ್ಳಿಯಿಂದ ಮುಧೋಳ ಮಾರ್ಗವಾಗಿ ಸಾಗಿಸುತ್ತಿದ್ದ ಐದು ಕೋಟಿ ರೂ ಹಣವನ್ನು ಮುಧೋಳ ಚುನಾವಣಾಧಿಕಾರಿಗಳು,ಪ್ಲೈಯಿಂಗ್ ಸ್ಕ್ವಾಡ್,ಲೋಕಾಪುರ ಪೊಲೀಸರು ಸೇರಿ ವಶಕ್ಕೆ ತೆಗೆದುಕೊಂಡಿದ್ದಾರೆ.ಅಕ್ರಮವಾಗಿ ಸಾಗಿಸುತ್ತಿದ್ದ ಹಣಕ್ಕೆ ಸೂಕ್ತ ದಾಖಲೆಗಳು ಇಲ್ಲದ ಹಿನ್ನೆಲೆಯಲ್ಲಿ ಹಣವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.ಲೋಕಾಪುರ ಬಳಿ ಲಕ್ಷಾನಟ್ಟಿ ಚೆಕ್ ಪೋಸ್ಟ್ ನಲ್ಲಿ ವಾಹನ ತಪಾಸಣೆ ವೇಳೆ ಹಣವನ್ನು ಜಪ್ತಿ ಮಾಡಲಾಗಿದ್ದು ಮತ್ತು ಕಾರಿನಲ್ಲಿದ್ದ ಐವರನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.ಈ ಹಣವು ಯುನಿಯನ್ ಬ್ಯಾಂಕ್ ಗೆ ಸೇರಿದ ಹಣ ಎನ್ನುವ […]

Get News on Whatsapp

by send "Subscribe" to 7200024452
Close Bitnami banner
Bitnami