ಕೋಲಾರ ಗ್ರಾಮಾಂತರ ಪೊಲೀಸರ ಕಾರ್ಯಾಚರಣೆ: ರೂ. 40 ಲಕ್ಷ ಮೌಲ್ಯದ ಅಕ್ರಮ ಗಾಂಜಾ ವಶ ಒಬ್ಬನ ಬಂಧನ

John Prem
1 0
Read Time:1 Minute, 29 Second

ಕೋಲಾರ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ದೇವರಾಜ್, ಐ.ಪಿ.ಎಸ್ ಹಾಗೂ ಹೆಚ್ವುವರಿ ಪೊಲೀಸ್ ಅಧೀಕ್ಷರಾದ ಶ್ರೀ ಸಚಿನ್ ಪಿ ಘೋರ್ಪಡೆ ರವರ ಮಾರ್ಗದರ್ಶನದಲ್ಲಿ ಕೋಲಾರ ಉಪ‌ವಿಭಾಗದ ಡಿ.ಎಸ್.ಪಿ ವಿ.ಲ್.ರಮೇಶ್ ಮತ್ತು ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕರಾದ ಬಿ‌.ಐಯ್ಯಣ್ಣರೆಡ್ಡಿ ಮತ್ತು ಸಿಬ್ಬಂದಿಯವರು ದಿನಾಂಕ 16-07-2022 ರಂದು ಬೆಳಗ್ಗೆ 07:45 ಗಂಟೆ ಸಮಯದಲ್ಲಿ ಕಾರ್ಯಾಚರಣೆ ನಡೆಸಿ ಕೋಲಾರ ಹೊರವಲಯದ ಎನ್.ಹೆಚ್ 75 ರಸ್ತೆಯ ಕೊಂಡರಾಜನಹಳ್ಳಿ ಗೇಟ್ ಬಳಿ ಟಾಟಾ ಇಂಡಿಕಾ ಕಾರನ್ನು ತಡೆದು ನಿಲ್ಲಿಸಿ ಪರಿಶೀಲಿಸಿರುತ್ತಾರೆ‌‌.

ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 84.710 ಕೆ.ಜಿ ತೂಕದ ಸುಮಾರು 40 ಲಕ್ಷರೂ ಮೌಲ್ಯದ ಗಾಂಜಾ ಮೂಟೆಗಳನ್ನು ವಶಪಡಿಸಿಕೊಂಡು ಕಾರಿನ ಚಾಲಕನಾದ ಗೌಸ್ ಅಲಿಯಾಸ್ ಗೌಸ್ ಪಷಾ ಎಂಬುವನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ದಾಳಿಯಲ್ಲಿ ಭಾಗವಹಿಸಿದ್ದ ಸಿಬ್ಬಂದಿಯವರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಅಭಿನಂದಿಸಿ, ರೂ. 25,000 ನಗದು ಬಹುಮಾನವನ್ನು ವಿತರಿಸಿ ಸಿಬ್ಬಂದಿ ವರ್ಗಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
100 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published.

Next Post

ಕಳವು ಆರೋಪಿ ಬಂಧನ<br>ನಂದಗುಡಿ ಪೊಲೀಸರಿಂದ ಚಿನ್ನಾಭರಣ ವಶ

ಹೊಸಕೋಟೆ ತಾಲೂಕು ನಂದಗುಡಿ ಹೋಬಳಿಯ ಚಿಕ್ಕ ಕೊರಟಿ ಗ್ರಾಮದ ವಾಸಿ ಪಟಾಲಪ್ಪ(38) ಆರೋಪಿಯನ್ನು ವಶಕ್ಕೆ ಪಡೆದು 117 ಗ್ರಾಂ ತೂಕದ 5.85 ಲಕ್ಷ ಬೆಲೆಬಾಳುವ ಚಿನ್ನಾಭರಣಗಳನ್ನು ಸ್ಥಳೀಯ ನಂದಗುಡಿ ಪೊಲೀಸರು ಪಡಿಸಿಕೊಂಡಿದ್ದಾರೆ.ಮನೆಯಲ್ಲಿ ಯಾರೂ ಇಲ್ಲದ ವೇಳೆ ಅದೇ ಗ್ರಾಮದ ವಾಸಿ ಪಟಾಲಪ್ಪ ಹೊಂಚು ಹಾಕಿ ಮನೆಯ ಬೀಗ ತೆಗೆದು ಬಿರುವಿನಲ್ಲಿದ್ದ ಚಿನ್ನಾಭರಣಗಳನ್ನು ಕದ್ದು ಯಾರಿಗೂ ಅನುಮಾನ ಬರದಂತೆ ಬೀಗ ಹಾಕಿ ಪರಾರಿಯಾಗಿದ್ದಾನೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಹೊಸಕೋಟೆ ಉಪ […]

Get News on Whatsapp

by send "Subscribe" to 7200024452
Close Bitnami banner
Bitnami