ಬಕ್ರೀದ್ ಪ್ರಯುಕ್ತ ಶಾಂತಿಯುತ ಸಭೆ|ಮೈಕೋ ಲೇಔಟ್ ಉಪವಿಭಾಗ ಪೊಲೀಸ್ |ACP Karibasavana Gowda |Police News Plus |

3 0
Read Time:3 Minute, 10 Second

ಬೆಂಗಳೂರು :ಮೈಕೋ ಲೇಔಟ್ ಉಪವಿಭಾಗ ಪೊಲೀಸ್ ವತಿಯಿಂದ ಬಕ್ರೀದ್ ಹಬ್ಬದ ಪ್ರಯುಕ್ತ ಮುಂಜಾಗ್ರತಾ ಸಭೆ ಆಯೋಜಿಸಲಾಯಿತು.ತಿಲಕ್ ನಗರ ,ಎಸ್ .ಜಿ. ಪಾಳ್ಯ ,ಬಿ.ಟಿ.ಎಂ. ಲೇಔಟ್ ಮತ್ತು ಬೊಮ್ಮನಹಳ್ಳಿ ದಿಂದ ಧಾರ್ಮಿಕ ಮುಖಂಡರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.

Mico Layout Sub-Division ACP M.N Karibasavana Gowda

ರಾಜ್ಯದಲ್ಲಿ ಜುಲೈ 10 ರಂದು ಆಚರಿಸಲಿರುವ ಬಕ್ರೀದ್ ಹಬ್ಬದ ದಿನಗಳಲ್ಲಿ ಅಕ್ರಮವಾಗಿ ಗೋವು ಅಥವಾ ಒಂಟೆಗಳ ಹತ್ಯೆ ಮತ್ತು ಅನಧಿಕೃತ ಪ್ರಾಣಿ ವಧೆ ತಡೆಗಟ್ಟಲು ರಾಜ್ಯ ಸರ್ಕಾರವು ‘ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಆದ್ಯಾದೇಶ-2020ರ ಪ್ರಕಾರ ಅದೇಶ ಹೊರಡಿಸಿದೆ.ಮುಸ್ಲಿಂ ಬಾಂಧವರು ಭಾನುವಾರ ಬಕ್ರೀದ್‌ ಹಬ್ಬವನ್ನು ರಾಜ್ಯಾದ್ಯಂತ ಆಚರಿಸಲಿದ್ದಾರೆ ಎಂದು ರಾಜ್ಯ ಚಂದ್ರದರ್ಶನ ಸಮಿತಿ ಘೋಷಿಸಿದೆ. ಹಬ್ಬದ ದಿನದಂದು ಮುಸ್ಲಿಂ ಬಾಂಧವರು ಮಸೀದಿಯಲ್ಲಿ ಬೆಳಗ್ಗೆ ಸಾಮೂಹಿಕ ಪ್ರಾರ್ಥನೆಯನ್ನು ಸಲ್ಲಿಸುತ್ತಾರೆ. ಧಾರ್ಮಿಕ ಆಚರಣೆಯ ಪ್ರಯುಕ್ತ ಹಬ್ಬದ ದಿನ ಸೇರಿದಂತೆ ಮೂರು ದಿನ ಖುರ್ಬಾನಿ ನೀಡುವ ಸಂಪ್ರದಾಯ ಇದೆ. ಹಬ್ಬವನ್ನು ಶಾಂತಿ, ಸುವ್ಯವಸ್ಥೆ ಮತ್ತು ಸಾಮರಸ್ಯದೊಂದಿಗೆ ಆಚರಣೆ ಮಾಡಬೇಕು.

ಈ ಹಿನ್ನೆಲೆಯಲ್ಲಿ ಸರ್ಕಾರ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಶ್ರೀ.ಎಂ.ಎನ್‌.ಕರಿಬಸವನಗೌಡ ಎಸಿಪಿ, ಮೈಕೋ ಲೇಔಟ್‌ ಉಪವಿಭಾಗ (ಬೆಂಗಳೂರು) ಮನವಿ ಮಾಡಿದರು.

ಖುರ್ಬಾನಿಯನ್ನು ಸಾರ್ವಜನಿಕ ಪ್ರದೇಶ, ರಸ್ತೆಗಳು, ಶಾಲಾ-ಕಾಲೇಜು, ಆಸ್ಪತ್ರೆ ಅವರಣ, ಉದ್ಯಾನವನ ಮತ್ತು ಇತರೆ ಸಾರ್ವಜನಿಕ ಸ್ಥಳಗಳಲ್ಲಿ ನಿಷೇಧಿಸಲಾಗಿದೆ. ಖುರ್ಬಾನಿಯನ್ನು ನೆರವೇರಿಸುವಾಗ ಶುಚಿತ್ವ ಮತ್ತು ನೈರ್ಮಲ್ಯವನ್ನು ಕಡ್ಡಾಯವಾಗಿ ಕಾಪಾಡಿಕೊಳ್ಳಬೇಕು. ಪ್ರಾಣಿ ತ್ಯಾಜ್ಯವನ್ನು ಪರಿಣಾಮಕಾರಿಯಾಗಿ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು. ಪೊಲೀಸ್‌ ಇಲಾಖೆ, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯವರು ನೀಡುವ ಸಾಮಾನ್ಯ ಮತ್ತು ಸ್ಥಳೀಯವಾಗಿ ನೀಡುವ ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು BBMP ಸೂಚಿಸಿದೆ.

ಸಭೆಯಲ್ಲಿ ಮೈಕೋ ಲೇಔಟ್‌ ಉಪವಿಭಾಗ ಎಸಿಪಿ ಶ್ರೀ.ಎಂ.ಎನ್‌.ಕರಿಬಸವನಗೌಡ ,ಮೈಕೋಲೇಔಟ್ ಠಾಣಾಧಿಕಾರಿ ಶ್ರೀ. ಚೌದ್ರಿ ,ಸುದ್ದಗುಂಟೆಪಾಳ್ಯ ಠಾಣಾಧಿಕಾರಿ ಶ್ರೀ .ಮಾರುತಿ ಜಿ ನಾಯಕ್ ,ಬೊಮ್ಮನಹಳ್ಳಿ ಠಾಣಾಧಿಕಾರಿ ಶ್ರೀ ಪ್ರಶಾಂತ್ ,ತಿಲಕ್ ನಗರ ಠಾಣಾಧಿಕಾರಿ ಶ್ರೀ .ಶಂಕರಾಚಾರ್ ಹಾಗೂ ಸಿಬ್ಬಂದಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Next Post

ದಾವಣಗೆರೆ ಜಿಲ್ಲಾ ಪೊಲೀಸರ ವತಿಯಿಂದ (ಸೌಂಡ್ ಹಾರ್ನ್)ಧ್ವನಿ ವರ್ಧಕ ಬಳಸುವ ಆಹಾರ ವಿರುದ್ಧ ಕಾರ್ಯಾಚರಣೆ

ದಾವಣಗೆರೆ ನಗರದಲ್ಲಿ ಸಿಪಿಐ ಸಂಚಾರ ವೃತ್ತ ರವರ ನೇತೃತ್ವದಲ್ಲಿ ಪಿಎಸೈ ಹಾಗೂ ಸಿಬ್ಬಂದಿಗಳು ವಾಹನಗಳಲ್ಲಿ ಕಾನೂನು ಬಾಹಿರವಾಗಿ ಕರ್ಕಶ ದ್ವನಿ ಹೊರಸೂಸುವ ದ್ವನಿ ವರ್ಧಕ( ಸೌಂಡ್ ಹರ್ನ್ಸ್) ಗಳನ್ನು ಬಳಸುವವರ ವಿರುದ್ಧ ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದು, ವಾಹನ ಚಾಲಕರಿಗೆ/ಸವಾರರಿಗೆ ಇಂತಹ ಸೌಂಡ್ ಹಾರ್ನ್ಸ್ ಬಳಸುವುದು ಸಂಚಾರ ನಿಯಮ ಉಲ್ಲಂಘನೆ ಆಗಿರುವ ಬಗ್ಗೆ ಸೂಕ್ತ ತಿಳುವಳಿಕೆ ನೀಡುತ್ತಿದ್ದು, ಈಗಾಗಲೇ ಅಳವಡಿಸಿಕೊಂಡಿರುವ ವಾಹನಗಳಿಂದ ತೆಗೆಯಲು ಕ್ರಮ ಕೈಗೊಳ್ಳಲಾಗುತ್ತಿದೆ. ಹಲವಾರು ವಾಹನಗಳಿಂದ ಕರ್ಕಶ ಸೌಂಡ್ […]

Get News on Whatsapp

by send "Subscribe" to 7200024452
Close Bitnami banner
Bitnami