ಉತ್ತರಕನ್ನಡ ಜಿಲ್ಲಾ ಪೊಲೀಸ್ ವತಿಯಿಂದ ” ಪೊಲೀಸ್ ದ್ವಜ” ದಿನಾಚರಣೆ

John Prem
1 0
Read Time:2 Minute, 2 Second

ಕಾರವಾರ – ಇಂದು ದಿನಾಂಕ 02/04/2022 ಉತ್ತರಕನ್ನಡ ಜಿಲ್ಲೆ ಕಾರವಾರ ಪೊಲೀಸ್ ಕವಾಯತು ಮೈದಾನ ದಲ್ಲಿ ಉತ್ತರಕನ್ನಡ ಜಿಲ್ಲಾ ಪೊಲೀಸ್ ವತಿಯಿಂದ ” ಪೊಲೀಸ್ ದ್ವಜ” ದಿನಾಚರಣೆ ಯನ್ನು ಆಚರಿಸಲಾಯಿತು. ಮಾನ್ಯ ಪೊಲೀಸ್ ಅಧಿಕ್ಷಕರು ಡಾ //ಸುಮನ್ ಪೆನ್ನೇಕರ್ ರವರು ಮತ್ತು ಮಾನ್ಯ ಅಪರ ಪೊಲೀಸ್ ಅಧಿಕ್ಷಕರು ಶ್ರೀ ಬದ್ರಿನಾಥ್ ಎಸ್. ರವರು ಹಾಜರಿದ್ದು, ಮುಖ್ಯ ಅತಿಥಿ ಗಳಾಗಿ ಶ್ರೀ ವಿನಾಯಕ್ ವಾಮನ್ ನಾಯ್ಕ್ ನಿವೃತ್ತ ಸಹಾಯಕ ಪೊಲೀಸ್ ನಿರೀಕ್ಷಕರವರು ಆಗಮಿಸಿದ್ದರು.

ಮುಖ್ಯ ಅತಿಥಿಗಳ ಆಗಮನದೊಂದಿಗೆ ಆರಂಭವಾದ ಕಾರ್ಯಕ್ರಮ ಪರೇಡ್ ಪರಿವಿಕ್ಷಣೆ, ಆಕರ್ಷಕ ಪಥಸಂಚಲನ, ರಿವ್ಯೂ ಆರ್ಡರ್, ರಾಷ್ಟ್ರ ದ್ವಜ ಹಾಗೂ ಪೊಲೀಸ್ ದ್ವಜಕ್ಕೆ ಗೌರವ ನೀಡುವುದರೊಂದಿಗೆ ವೇದಿಕೆ ಕಾರ್ಯಕ್ರಮ ಆರಂಭ ವಾಯಿತು. ಮಾನ್ಯ ಪೊಲೀಸ್ ಅಧಿಕ್ಷಕರು ಸ್ವಾಗತಿಸಿಕೊಂಡರು ಕಾರ್ಯಕ್ರಮದ ಮೇರು ಹಂತವಾಗಿ ಪೊಲೀಸ್ ದ್ವಜ ಬಿಡುಗಡೆ ಹಾಗೂ ವಿತರಣೆ ನಡೆಯಿತು.

ಮುಖ್ಯ ಅತಿಥಿ ಗಳು ಪೊಲೀಸ್ ಇಲಾಖೆಯ ಪ್ರಾಮುಖ್ಯತೆ ಮತ್ತು ಸಿಬ್ಬಂದಿಗಳ ಕುಂದು ಕೊರತೆಗಳ ಬಗ್ಗೆ ಮಾತನಾಡಿದರು. ಮುಖ್ಯ ಅತಿಥಿಗಳಿಗೆ ನೆನಪಿನ ಕಾಣಿಕೆ ನೀಡಿ ಗೌರವ ಸಮರ್ಪಿಸಲಾಯಿತು. ಮಾನ್ಯ ಅಪರ ಪೊಲೀಸ್ ಅಧಿಕ್ಷಕರು ಉತ್ತರಕನ್ನಡ ಜಿಲ್ಲೆ ಇವರು ವಂದಿಸಿದರು. ಕಾರ್ಯಕ್ರಮಕ್ಕೆ ಸಾರ್ವಜನಿಕರು ಸೇರಿದಂತೆ ನಿವೃತ್ತ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯವರು, ಸೇವಾ ನಿರತ ಪೊಲೀಸ್ ಅಧಿಕಾರಿ ಸಿಬ್ಬಂದಿಯವರು ಹಾಗೂ ಕುಟುಂಬದವರು ಆಗಮಿಸಿದ್ದರು. ಪೊಲೀಸ್ ಸಿಬ್ಬಂದಿಗಳ ಕುಂದು-ಕೊರತೆ ಬಗ್ಗೆ ಚರ್ಚಿಸಲಾಯಿತು. ಕೊರೋನ ನಿಯಮ ವನ್ನು ಪಾಲಿಸಿ ಕಾರ್ಯಕ್ರಮವನ್ನು ನಡೆಸಲಾಯಿತು.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published.

Next Post

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಮತ್ತು ಮಂಗಳೂರು ನಗರ ಪೊಲೀಸ್ ವತಿಯಿಂದ ಕರ್ನಾಟಕ ರಾಜ್ಯ ಪೊಲೀಸ್ ದ್ವಜ ಹಾಗೂ ಕಲ್ಯಾಣ ದಿನಾಚರಣೆ

ಕರ್ನಾಟಕ ರಾಜ್ಯ ಪೊಲೀಸ್ ದ್ವಜ ಹಾಗೂ ಕಲ್ಯಾಣ ದಿನಾಚರಣೆಯ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಮತ್ತು ಮಂಗಳೂರು ನಗರ ಪೊಲೀಸ್ ವತಿಯಿಂದ ದಿನಾಂಕ 02.04.2022 ರಂದು ಮಂಗಳೂರಿನ ಪೊಲೀಸ್ ಕವಾಯತು ಮೈದಾನದಲ್ಲಿ ಪಥಸಂಚಲನ ನಡೆಯಿತು. ನಿವೃತ್ತ ಪೊಲೀಸ್ ಅಧೀಕ್ಷಕರಾದ ಶ್ರೀ .ವಿನಯ್ ಎ ಗಾಂವಕರ್ ರವರು ಮುಖ್ಯ ಅತಿಥಿಗಳಾಗಿ ಆಗಮಿಸಿ, ಗೌರವ ವಂದನೆ ಸ್ವೀಕರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾನ್ಯ ಪಶ್ಚಿಮ ವಲಯ ಪೊಲೀಸ್ ಮಹಾನಿರೀಕ್ಷಕರಾದ ಶ್ರೀ. ದೇವಜ್ಯೋತಿ ರೇ […]

Get News on Whatsapp

by send "Subscribe" to 7200024452
Close Bitnami banner
Bitnami