ಉತ್ತರ ಕನ್ನಡ ಜಿಲ್ಲಾ ಪೊಲೀಸರಿಂದ ಯೋಗ ತರಬೇತಿ ಕಾರ್ಯಕ್ರಮ

John Prem 9448190523
2 0
Read Time:1 Minute, 47 Second

ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಆರೋಗ್ಯ ಮತ್ತು ಮಾನಸಿಕವಾಗಿ ಸದೃಢರನ್ನಾಗಿಸುವ ಹಿತದೃಷ್ಟಿಯಿಂದ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಅಧಿಕಾರಿ/ಸಿಬ್ಬಂದಿಗಳಿಗೆ ದಿನಾಂಕ:18-02-2022 ರಿಂದ ದಿನಾಂಕ:08-03-2022 ರವರೆಗೆ ಯೋಗ ತರಭೇತಿಯನ್ನು ಹಮ್ಮಿಕೊಂಡು ಆಯುಷ ಇಲಾಖೆಯ ವೈದ್ಯರಾದ ಡಾ. ಪ್ರಕಾಶ ರವರು ಯೋಗಾಸನದ ಅನೇಕ ಬಂಗಿಗಳನ್ನು ಸಿಬ್ಬಂದಿಗಳಿಗೆ ತಿಳಿಸಿಕೊಟ್ಟು ಅದರಿಂದ ಮಾನವನ ಶರೀರಕ್ಕೆ ಆಗುವ ಉಪಯೋಗಗಳ ಬಗ್ಗೆ ಸಿಬ್ಬಂದಿಗಳಿಗೆ ತಿಳಿಸಿಕೊಟ್ಟಿದ್ದು, ಸಶಸ್ತ್ರ ಪಡೆಯ ಅಧಿಕಾರಿ ಸಿಬ್ಬಂದಿಗಳು ಅದರ ಸದುಪಯೋಗವನ್ನು ಪಡೆದುಕೊಂಡಿರುತ್ತಾರೆ.

ಈ ದಿನ ದಿನಾಂಕ:09-03-2022 ರಂದು ಜಿಲ್ಲಾ ಸಶಸ್ತ್ರ ಪೊಲೀಸ್ ಸಭಾಂಗಣದಲ್ಲಿ ನಡೆದ ಯೋಗ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಉತ್ತರಕನ್ನಡ ಜಿಲ್ಲೆಯ ಪೊಲೀಸ್ ವರಿಷ್ಟಾಧಿಕಾರಿಗಳಾದ ಡಾ. ಸುಮನ್ ಪೆನ್ನೇಕರ ಹಾಗೂ ಆಯುಷ ಇಲಾಖೆಯ ಮುಖ್ಯಸ್ಥರಾದ ಡಾ. ಲಲಿತಾ ಶೆಟ್ಟಿ ಹಾಗೂ ಯೋಗ ತರಬೇತಿ ನೀಡಿದ ಡಾ. ಪ್ರಕಾಶ್ ಹಾಗೂ ಸಶಸ್ತ್ರ ಮೀಸಲು ಪೊಲೀಸ್ ಪಡೆಯ ಉಪಾಧಿಕ್ಷಕರಾದ ದಿಲೀಪ್ ರವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಆಯುಷ ಇಲಾಖೆಯ ವತಿಯಿಂದ ಪೊಲೀಸ್ ಅಧಿಕಾರಿ/ಸಿಬ್ಬಂದಿಗಳಿಗೆ ಅರೋಗ್ಯವನ್ನು ಕಾಪಾಡಿಕೊಳ್ಳಲು ಉಪಯೋಗವಾಗುವಂತಹ ಔಷಧಿಯ ಕಿಟ್ ಗಳನ್ನು ವಿತರಿಸುವ ಮೂಲಕ ಸಮಾರೋಪ ಸಮಾರಂಭ ವನ್ನು ಮುಕ್ತಾಯಗೊಳಿಸಲಾಯಿತು.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Next Post

ಮೈಸೂರು ಜಿಲ್ಲಾ ಪೊಲೀಸರಿಂದ ರಸ್ತೆ ಸುರಕ್ಷತಾ ಕಾರ್ಯಕ್ರಮ

ಇಲವಾಲ ಪೊಲೀಸ್ ಠಾಣೆಯಲ್ಲಿಂದು ರಸ್ತೆ ಸುರಕ್ಷತಾ ಕಾರ್ಯಕ್ರಮಕ್ಕೆ ಶಾಸಕರಾದ ಶ್ರೀ.ಜಿ.ಟಿ. ದೇವೇಗೌಡರವರು ಚಾಲನೆ ನೀಡಿದರು. ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ.ಚೇತನ್.ಆರ್ ಐಪಿಎಸ್ ರವರು ಸಹ ಹಾಜರಿದ್ದು ಸಾರ್ವಜನಿಕರ ಸುರಕ್ಷತೆಗಾಗಿ ಸಂಚಾರಿ ನಿಯಮಗಳಿದ್ದು ಕಡ್ಡಾಯವಾಗಿ ಪಾಲಿಸುವುದರಿಂದ ಅಪಘಾತಗಳನ್ನು ನಿಯಂತ್ರಿಸಿ ಮತ್ತು ಅಪಘಾತ ಸಮಯದಲ್ಲಿ ಜೀವವನ್ನು ಉಳಿಸಬಹುದೆಂದು ತಿಳಿಸಿದರು.

Get News on Whatsapp

by send "Subscribe" to 7200024452
Close Bitnami banner
Bitnami