ಕವಲಂದೆ ಪೊಲೀಸರಕಾರ್ಯಾಚರಣೆ 12 ಪ್ರತ್ಯೇಕ ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿಗಳ ಬಂಧನ ಸುಮಾರು ಐದು ಲಕ್ಷ ರೂ ಮೌಲ್ಯದ ವಿವಿಧ ಬೈಕ್ ಮತ್ತು ಚಿನ್ನ ವಶ. ಹಾಗೂ ಕೋವಿಡ್ 19 ನಿಯಮಗಳನ್ನು ಮೀರಿ ಬೈಕ್ ರೇಸಿಂಗ್ ವ಼ೀಲಿಂಗ್ ಮಾಡುತ್ತಿದ್ದವರ ಮೇಲೆ ನಂಜನಗೂಡು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿದ್ದರ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ. ಚೇತನ್.ಆರ್.ಐಪಿಎಸ್ ರವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು . ಡಿಎಸ್ಪಿ ನಂಜನಗೂಡು ಶ್ರೀ.ಗೋವಿಂದರಾಜು ರವರು, ಸಿಪಿಐ ನಂಜನಗೂಡು ವೃತ್ತ ನಿರೀಕ್ಷಕರಾದ ಶ್ರೀ.ಲಕ್ಷ್ಮೀಕಾಂತ್ ತಳವಾರ್ ರವರು ಹಾಜರಿದ್ದರು.
ರೈತರ ಹಾಗೂ ವರ್ತಕರಿಂದ ಮೆಕ್ಕೆಜೋಳ ಖರೀದಿಸಿ ಹಣ ನೀಡದೆ ವಂಚನೆ ಮಾಡಿದ್ದವರಿಂದ ಹಣ ವಶಪಡಿಸಿಕೊಂಡು ರೈತರಿಗೆ ವಾಪಸ್ ಮರಳಿಸಿದ್ದರಿಂದ ರೈತರು ದಿನಾಂಕ-13-01-2022 ರಂದು ಅಭಿನಂದನಾ ಕಾರ್ಯಕ್ರಮವನ್ನು ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ.ಬಸವರಾಜ್ ರವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಛೇರಿಯ ತುಂಗಭದ್ರಾ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಮಾನ್ಯ ಸಂಸದರಾದ ಶ್ರೀ ಜಿ.ಎಂ.ಸಿದ್ದೇಶ್ವರ ರವರು, ಮಾನ್ಯ ಶಾಸಕರುಗಳಾದ ಶ್ರೀ ಎಸ್.ಎ. ರವೀಂದ್ರನಾಥ್, ಶ್ರೀ ಪ್ರೋ. ಲಿಂಗಣ್ಣ ರವರು, ಪೂಜ್ಯ ಮೇಯರ್ ಶ್ರೀ ವೀರೇಶ್ […]