ಕರ್ನಾಟಕ ಗೋವಾ ಗಡಿಭಾಗ ಪೊಲೀಸರಿಂದ ಗೋವಾ ರಾಜ್ಯದಿಂದ ಕರ್ನಾಟಕಕ್ಕೆ ಆಗಮಿಸುವ ಪ್ರಯಾಣಿಕರಿಗೆ ವಿಶೇಷ ಸೂಚನೆಗಳು

John Prem 9448190523
6 0
Read Time:3 Minute, 51 Second

ಗೋವಾ ರಾಜ್ಯದಲ್ಲಿ , ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಗೋವಾದಿಂದ ಕರ್ನಾಟಕಕಕ್ಕೆ ಆಗಮಿಸುವ ಪ್ರಯಾಣಿಕರಿಗೆ ಸಂಬಂಧಪಟ್ಟಂತೆ ಈ ಕೆಳಕಂಡ ವಿಶೇಷ ಸರ್ವೇಕ್ಷಣಾ ಚಟುವಟಿಕೆಗಳನ್ನು ಕಡ್ಡಾಯವಾಗಿ ಕೈಗೊಳ್ಳಲು ಸೂಚಿಸಿದೆ.

1.ವಿಮಾನ, ರೈಲು, ರಸ್ತೆ (ಬಸ್‌ ಹಾಗೂ ಇತರ ಸ್ವಂತ ವಾಹನಗಳ ಮುಖಾಂತರ) ಮಾರ್ಗದಲ್ಲಿ ಕರ್ನಾಟಕಕ್ಕೆ ಆಗಮಿಸುವ ಪ್ರಯಾಣಿಕರು 72 ಗಂಟೆಗಳ ಒಳಗೆ ಮಾಡಿಸಿದ, ಆರ್‌ಟಿಪಿಸಿಆರ್ ನೆಗೆಟಿವ್ ಟೆಸ್ಟ್ ವರದಿಯನ್ನು ಹೊಂದುವುದು ಕಡ್ಡಾಯವಾಗಿರುತ್ತದೆ. ಗೋವಾದಿಂದ connecting flightನಲ್ಲ ಪ್ರಯಾಣಿಸುವವರಿಗೂ ಈ ನಿಯಮವು ಅನ್ವಯಿಸುತ್ತದೆ.

2.ಅದರಂತೆ, 72 ಗಂಟೆಗಳ ಒಳಗೆ ಮಾಡಿಸಿದ, ಆರ್‌ಐಪಿಸಿಆರ್, ನೆಗಟಿವ್ ಟೆಸ್ಟ್ ವರದಿಯನ್ನು
ಹೊಂದಿರುವ ಪ್ರಯಾಣಿಕರಿಗೆ ಮಾತ್ರವೇ ಸಂಬಂಧಪಟ್ಟ ವಿಮಾನಯಾನ ಸಂಸ್ಥೆಯವರು ಬೋರ್ಡಿಂಗ್ ಪಾಸ್ ನೀಡುವುದು.

3.ರೈಲಿನಲ್ಲಿ ಪ್ರಯಾಣಿಸುವ ಎಲ್ಲಾ ಪ್ರಯಾಣಿಕರು ಆರ್‌ಟಿಪಿಸಿಆರ್ ನೆಗಟಿವ್ ಟೆಸ್ಟ್ ವರದಿಯನ್ನು
ಹೊಂದುವುದನ್ನು ಖಚಿತಪಡಿಸಿಕೊಳ್ಳುವುದು ರೈಲ್ವೆ ಪ್ರಾಧಿಕಾರದ ಜವಾಬ್ದಾರಿಯಾಗಿರುತ್ತದೆ.

4.ಬಸ್‌ನ ಮೂಲಕ ಪ್ರಯಾಣಿಸುವವರು, ಆರ್‌ಪಿಸಿಆರ್ ನೆಗೆಟಿವ್ ಟೆಸ್ಟ್ ವರದಿಯನ್ನು
ಹೊಂದುವುದನ್ನು ಖಚಿತಪಡಿಸಿಕೊಳ್ಳುವ ಜವಾಬ್ದಾರಿಯು ಆಯಾ ಬಸ್‌ ನಿರ್ವಾಹಕರ (bus
conductor) ದ್ದಾಗಿದೆ .

5.ಗೋವಾ ರಾಜ್ಯಕ್ಕೆ ಹೊಂದಿಕೊಂಡಿರುವ ಕರ್ನಾಟಕದ ಗಡಿ ಜಿಲ್ಲೆಗಳಾದ ಬೆಳಗಾವಿ ಹಾಗೂ ಉತ್ತರಕನ್ನಡದ ಮೂಲಕ ರಾಜ್ಯಕ್ಕೆ ಪ್ರವೇಶಿಸುವ ವಾಹನಗಳಿಗೆ (ಚಾಲಕರು/ ಸಹಾಯಕರು/ಪ್ರಯಾಣಿಕರು) ಮೇಲೆ ತಿಳಿಸಿರುವ ನಿಯಮಗಳ ಅನುಪಾಲನೆಗೆ ಪೋಸ್ಟ್‌ಗಳನ್ನು ಸ್ಥಾಪಿಸುವುದು ಹಾಗೂ ಅಗತ್ಯ: ಸಿಬ್ಬಂದಿಗಳನ್ನು ನಿಯೋಜಿಸಿ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸುವ ಜವಾಬ್ದಾರಿಯು ಆಯಾ ಜಿಲ್ಲಾಧಿಕಾರಿಗಳದ್ದಾಗಿರುತ್ತದೆ.

6.ಶಾಲಾ – ಕಾಲೇಜು, ಕಛೇರಿ ಕೆಲಸ, ವ್ಯಾಪಾರ – ವ್ಯವಹಾರ, ಸೇರಿದಂತೆ, ಇತರ ಕಾರಣಗಳಿಗೆ ದೈನಂದಿನವಾಗಿ ಗೋವಾದಿಂದ ಕರ್ನಾಟಕಕ್ಕೆ ಭೇಟಿ ನೀಡುವ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಪ್ರತಿ 15 ದಿನಗಳಿಗೊಮ್ಮೆ ಆರ್‌ಟಿಪಿಸಿಆರ್ ಪರೀಕ್ಷೆ ಮಾಡಿಸಿಕೊಂಡು – ನಗೆಟಿವ್ ವರದಿಯನ್ನು ಹೊಂದುವುದು ಕಡ್ಡಾಯವಾಗಿರುತ್ತದೆ.
ಈ ಕೆಳಕಂಡ ಪ್ರಕರಣಗಳಿಗೆ / ಸಂದರ್ಭಗಳಲ್ಲಿ , ಆರ್‌ಪಿಸಿಟರ್, ನೆಗೆಟಿವ್ ಟೆಸ್ಟ್ ವರದಿ
ಹೊಂದುವುದರಿಂದ ವಿನಾಯಿತಿ ನೀಡಲಾಗಿದೆ.

ಅ ) ಸಾಂವಿಧಾನಿಕ ಕಾರ್ಯಕಾರಿಗಳು ( Constitutional functionaries) ಮತ್ತು ವೈದ್ಯ/
ವೈದ್ಯಕೀಯ ಸಿಬ್ಬಂದಿಗಳು

ಆ) ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು

ಇ ) ತುರ್ತು ಸಂದರ್ಭಗಳಲ್ಲಿ ( ಕುಟುಂಬದಲ್ಲಿ ಮರಣ ಸಂಭವಿಸಿದ ಪಕ್ಕದಲ್ಲಿ ವೈದ್ಯಕೀಯ ಚಿಕಿತ್ಸೆ, ಇತ್ಯಾದಿ ) ಕರ್ನಾಟಕ್ಕೆ ಅಗಮಿಸುವ ಪ್ರಯಾಣಿಕರ ಮಾದರಿಗಳನ್ನು ಪರೀಕ್ಷೆಗಾಗಿ ಕರ್ನಾಟಕದಲ್ಲಿಯೇ ಸಂಗ್ರಹಿಸಲಾಗುವುದು, ಸದರಿ ಪ್ರಯಾಣಿಕರ ಹೆಸರು, ವಿಳಾಸ, ಸಂಪರ್ಕ ಸಂಖ್ಯೆ, ಇತ್ಯಾದಿ ಪೂರ್ಣ ವಿವರಗಳನ್ನು ಗುರುತಿನ ಚೀಟಿಯ ಆಧಾರದ ಅನ್ವಯ ಪಡೆಯುವುದು ಆರ್‌ಟಿಪಿಸಿಆರ್ ಪರೀಕ್ಷೆಯ ವರದಿಯ ಆಧಾರದ ಮೇಲೆ ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಶಿಷ್ಟಾಚಾರದಂತೆ ಕ್ರಮ ಕೈಗೊಳ್ಳುವುದು.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Next Post

ಕೊಡಗು ಜಿಲ್ಲೆ ಸಿದ್ದಾಪುರ ಪೊಲೀಸ್ ಠಾಣೆ ಅವರಿಂದ ಯಶಸ್ವಿ ಕಾರ್ಯಾಚರಣೆ

ಕೊಡಗು ಜಿಲ್ಲೆ ವಿರಾಜಪೇಟೆ ತಾಲೋಕು ಸಿದ್ದಾಪುರ ಚೆನ್ನಯ್ಯನಕೋಟೆ ಹೊಳಮಾಳ ಗ್ರಾಮದಲ್ಲಿ ವಾಮಾಚಾರ ನಡೆಸಿ ನಿಧಿ ಶೋಧನೆ ನಡೆಸುತ್ತಿದ್ದ ವ್ಯಕ್ತಿಗಳಿಬ್ಬರನ್ನು ಪತ್ತೆಹಚ್ಚುವಲ್ಲಿ ಕೊಡಗು ಜಿಲ್ಲಾ ಡಿಸಿಐಬಿ ಹಾಗೂ ಸಿದ್ದಾಪುರ ಪೊಲೀಸರು ಯಶಸ್ವಿಯಾಗಿರುತ್ತಾರೆ. ದಿನಾಂಕ 08-01-2022ರಂದು ಖಚಿತ ಮಾಹಿತಿ ಮೇರೆ ಸಿದ್ದಾಪುರ ಚೆನ್ನಯ್ಯನಕೋಟೆ ಹೊಳಮಾಳ ಗ್ರಾಮದ ಕೋಟೆ ಪೈಸಾರಿಯ ಎಂ.ಆರ್ ಗಣೇಶ್ ಎಂಬವರ ಮನೆಗೆ ದಾಳಿ ನಡೆಸಿದ ಡಿಸಿಐಬಿ ಹಾಗೂ ಸಿದ್ದಾಪುರ ಪೊಲೀಸರು ವಾಮಾಚಾರ ನಡೆಸಿ ನಿಧಿ ಶೋಧನೆಯಲ್ಲಿ ತೊಡಗಿದ್ದ ಎಂ.ಆರ್ ಗಣೇಶ್ […]

Get News on Whatsapp

by send "Subscribe" to 7200024452
Close Bitnami banner
Bitnami