ಉತ್ತರ ಕನ್ನಡ ಜಿಲ್ಲಾ ಪೊಲೀಸ್ -ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾ ಕೂಟ -2020-21

John Prem
5 0
Read Time:2 Minute, 5 Second

ಜಿಲ್ಲಾ ಪೋಲೀಸ್ ಕವಾಯತು ಮೈದಾನ ಕಾರವಾರದಲ್ಲಿ 2020-21 ಸಾಲಿನ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾ ಕೂಟ ಉದ್ಘಾಟನೆಗೊಂಡಿರುತ್ತದೆ.
02 ದಿನಗಳ ಕಾಲ ನಡೆಯುವ ಈ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿದ ಸನ್ಮಾನ್ಯ ಶ್ರೀ ಕಾಶೀನಾಥ ನಾಯ್ಕ (ಆರ್ಮಿ) ಕ್ರೀಡಾ ತರಬೇತಿದಾರರು ಶಿರಸಿ ರವರು ಪೊಲೀಸ್ ಕ್ರೀಡಾಪಟುಗಳಿಗೆ ಮತ್ತು ಸಾರ್ವಜನಿಕರಿಗೆ, ಕ್ರೀಡೆಗಳ ಬಗ್ಗೆ ಮತ್ತು ಕ್ರೀಡೆಗಳ ಸಾಧನೆಗಳ ಬಗ್ಗೆ ತಿಳಿಸಿ, ತಾವು ಸೇನೆಯ ಸೇವೆಯಲ್ಲಿರುವಾಗಲೇ ಯಾವುದಾದರೊಂದು ಸಾಧನೆ ಮಾಡಲೇಬೇಕೆಂಬ ಛಲದಿಂದ ತಮ್ಮ ವೈಯಕ್ತಿಕ ಜೀವನದಲ್ಲಿ ಅನುಭವಿಸಬೇಕಾದ ಮೋಜಿನ ಜೀವನವನ್ನು ತ್ಯಾಗಮಾಡಿ ದೃಢ ವಿಶ್ವಾಸ ಮತ್ತು ಅವಿರತ ಶ್ರಮದಿಂದ ರಾಷ್ಟ್ರೀಯ, ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡಿರುತ್ತಾರೆ. ಮತ್ತು ತಮ್ಮ ಕ್ರೀಡಾ ತರಬೇತಿಯಿಂದ 2021 ನೇ ಸಾಲಿನ ಓಲಂಪಿಕ್ ಕ್ರೀಡೆಯಲ್ಲಿ ಬಂಗಾರದ ಪದಕ ಗಳಿಸಿರುವ “ನಿರಜ ಛೋಪ್ರಾ” ರವರ ಸಾಧನೆಯ ಬಗ್ಗೆ ತಿಳಿಸಿ, ಪೊಲೀಸ್ ಕ್ರೀಡಾ ಪಟುಗಳಿಗೆ ಉತ್ತಮ ಸ್ಪೂರ್ತಿಯನ್ನು ತುಂಬಿರುತ್ತಾರೆ.

ಕಾರ್ಯಕ್ರಮದಲ್ಲಿ ಮಾನ್ಯ ಪೊಲೀಸ್ ಆಧೀಕ್ಷಕರು ಡಾ: ಸುಮನ ಪನ್ನೇಕರ ಐ.ಪಿ.ಎಸ್. ರವರು ಕ್ರೀಡಾ ಕೂಟದ ಮಾನ್ಯ ಅತಿಥಿಗಳನ್ನು ಸ್ವಾಗತಿಸಿರುತ್ತಾರೆ, ಮತ್ತು ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಕ್ರೀಡಾಕೂಟ ಉದ್ಘಾಟನಾ ಸಮಾರಂಭದ ವಂದಾನಾರ್ಪಣೆಯನ್ನು ಮಾಡಿರುತ್ತಾರೆ ಮತ್ತು ಜಿಲ್ಲೆಯ ಎಲ್ಲಾ ಪೊಲೀಸ್‌ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಈ ಸಮಾರಂಭದಲ್ಲಿ ಪಾಲ್ಗೊಂಡಿರುತ್ತಾರೆ.

Happy
Happy
100 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Next Post

ಬೆಂಗಳೂರು ಜಿಲ್ಲಾ ಪೊಲೀಸರಿಂದ ವಾರ್ಷಿಕ ಕ್ರೀಡಾಕೂಟ 2021

ಬೆಂಗಳೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಡಾ|| ಕೆ. ವಂಶಿ ಕೃಷ್ಣ, ಐ.ಪಿ.ಎಸ್ & ಅಪರ ಪೊಲೀಸ್ ಅಧೀಕ್ಷಕರಾದ ಶ್ರೀ. ಲಕ್ಷ್ಮಿ ಗಣೇಶ್, ಕೆ.ಎಸ್.ಪಿ.ಎಸ್ ರವರ ನೇತೃತ್ವದಲ್ಲಿ ಬೆಂಗಳೂರು ಜಿಲ್ಲೆಯ 2021ನೇ ಸಾಲಿನ ವಾರ್ಷಿಕ ಕ್ರೀಡಾ ಕೂಟವನ್ನು ಏರ್ಪಡಿಸಿದ್ದು, ಸದರಿ ಕಾರ್ಯಕ್ರಮವನ್ನು ಶ್ರೀ. ಕೆ.ಶ್ರೀನಿವಾಸ್, ಭಾ.ಆ.ಸೇ, ಜಿಲ್ಲಾಧಿಕಾರಿಗಳು ಬೆಂಗಳೂರು (ಗ್ರಾ) ಜಿಲ್ಲೆ ರವರು ಉದ್ಘಾಟಿಸಿ, ಕ್ರೀಡಾ ಕೂಟಕ್ಕೆ ಚಾಲನೆ ನೀಡಿರುತ್ತಾರೆ.

Get News on Whatsapp

by send "Subscribe" to 7200024452
Close Bitnami banner
Bitnami