ಕೊಡಗು ಜಿಲ್ಲಾ ಪೊಲೀಸರಿಂದ ಯಶಸ್ವಿ ಕಾರ್ಯಾಚರಣೆ ಕಳ್ಳತನ ಪ್ರಕರಣಗಳನ್ನು ಪತ್ತೆ

John Prem
2 0
Read Time:2 Minute, 56 Second

ಕೊಡಗು ಜಿಲ್ಲೆಯ ಕುಶಾಲನಗರ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯ ಬಸವೇಶ್ವರ ಬಡಾವಣೆ ಹಾಗೂ ಕಾವೇರಿ ಬಡಾವಣೆ ಯಲ್ಲಿ ನಡೆದ ಎರಡು ಮನೆ ಕಳ್ಳತನ ಹಾಗೂ ದಂಡಿನಪೇಟೆಯಲ್ಲಿ ನಡೆದ ಒಂದು ವಾಹನ ಕಳವು ಪ್ರಕರಣಗಳನ್ನು ಪತ್ತೆಹಚ್ಚುವಲ್ಲಿ ಕುಶಾಲನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಸದರಿ ಕಳ್ಳತನ ಪ್ರಕರಣಗಳ ಪತ್ತೆಗಾಗಿ ಕುಶಾಲನಗರ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿ, ದಿನಾಂಕ 10-11-2021 ರಂದು ರಾತ್ರಿ ಗಸ್ತಿನಲ್ಲಿದ್ದ ಎಎಸ್ಐ ಶ್ರೀ ಮಂಜುನಾಥ ಹಾಗು ಸಿಬ್ಬಂದಿಗಳು ವಾಹನ ತಪಾಸಣೆ ನಡೆಸುವ ಸಂದರ್ಭದಲ್ಲಿ ವಾಹನವೊಂದರಲ್ಲಿ ಬಂದ ಶಂಕಿತ ವ್ಯಕ್ತಿಯನ್ನು ತಡೆದು ಪರಿಶೀಲನೆ ನಡೆಸಿ ಸದರಿ ವ್ಯಕ್ತಿಯನ್ನು ವಿಚಾರಣೆ ನಡೆಸಿ ಮೇಲ್ಕಾಣಿಸಿದ ಪ್ರಕರಣಗಳನ್ನು ಪತ್ತೆಮಾಡಿದ್ದು, ಆರೋಪಿತನಿಂದ ಕಳ್ಳತನ ಮಾಡಿದ 2 ಲಕ್ಷ ಮೌಲ್ಯದ 59.15 ಗ್ರಾಂ ತೂಕದ ಚಿನ್ನಾಭರಣ, 40,000 ಮೌಲ್ಯದ ಒಂದು ಹೊಂಡಾ ಆಕ್ಟೀವಾ, 70,000/0 ರೂ ಮೌಲ್ಯದ ಯಮಹಾ ಸ್ಕೂಟರ್ ಮತ್ತು 1 ಆಪಲ್ ಐಪೋನ್ ನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿರುತ್ತಾರೆ.

ಈ ಕಾರ್ಯಾಚರಣೆಯು ಶ್ರೀ ಎಂ. ಮಹೇಶ್, ಸಿಪಿಐ ಕುಶಾಲನಗರ ವೃತ್ತ ರವರ ನೇತೃತ್ವದಲ್ಲಿ ನಡೆದಿದ್ದು ಕಾರ್ಯಾಚರಣೆಯಲ್ಲಿ ಕುಶಾಲನಗರ ಪಟ್ಟಣ ಪೊಲೀಸ್ ಠಾಣೆಯ ಪಿಎಸ್ಐ ಮಾದೇಶ್, ಎಎಸ್ಐ ಮಂಜುನಾಥ್, ಗೋಪಾಲ್, ಸಿಬ್ಬಂದಿಯವರಾದ ಪ್ರಕಾಶ್, ಟಿ.ಎಸ್.ಸಜಿ, ಅರುಣ್ ಕುಮಾರ್, ರಂಜಿತ್, ಸೌಮ್ಯ, ಚಾಲಕರಾದ ಶ್ರೀ. ಶೇಷಪ್ಪ, ಸಿಡಿಆರ್ ವಿಭಾಗದ ಸಿಬ್ಬಂದಿಗಳಾದ ರಾಜೇಶ್ ಮತ್ತು ಗಿರೀಶ್ ರವವರು ಭಾಗಿಯಾಗಿದ್ದು, ಕಾರ್ಯಾಚರಣೆಯಲ್ಲಿ ಭಾಗಿಯಾದ ಪೊಲೀಸರ ಕಾರ್ಯವನ್ನು ಶ್ಲಾಘಿಸಲಾಗಿದೆ.

ಕೊಡಗು ಜಿಲ್ಲೆಯ ಸಾರ್ವಜನಿಕರು ಬೇರೆ ಊರುಗಳಿಗೆ ತೆರಳುವ ಸಂದರ್ಭದಲ್ಲಿ ಯಾವುದೇ ಬೆಲೆ ಬಾಳುವ ಚಿನ್ನಾಭರಣಗಳನ್ನು ಮನೆಯಲ್ಲಿಡಬಾರದೆಂದು ಹಾಗೂ ಹಾಗೆ ತೆರಳುವ ಸಂದರ್ಭ ದಲ್ಲಿ ತಮ್ಮ ಮನೆಗಳಲ್ಲಿ ಪರಿಚಯಸ್ಥರನ್ನು ಉಳಿದುಕೊಳ್ಳುವ ಬಗ್ಗೆ ನೋಡಿಕೊಳ್ಳುವುದು ಹಾಗೂ ಮನೆಯ ಹೊರಗೆ ಕಾಣುವಂತೆ ಬೀಗಗಳನ್ನು ಹಾಕದೇ ಒಳ್ಳೆಯ ಡೋರ್ಲಾಕ್ಗಳನ್ನು ಬಳಸುವಂತೆ ಹಾಗೂ ಮನೆಯ ಹೊರಗೆ ವಾಹನವನ್ನು ನಿಲ್ಲಿಸುವಾಗ ಸರಿಯಾದ ಭದ್ರತೆಯೊಂದಿಗೆ ನಿಲ್ಲಿಸಿ, ಇಂತಹ ಅಪರಾಧಗಳನ್ನು ತಡೆಗಟ್ಟುವಲ್ಲಿ ಪೊಲೀಸರೊಂದಿಗೆ ಸಹಕರಿಸಬೇಕೆಂದು ಸಾರ್ವಜನಿಕರಲ್ಲಿ ಕೋರಿರುತ್ತಾರೆ.

ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,


ಜೆ .ಜಾನ್ ಪ್ರೇಮ್
Happy
Happy
100 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published.

Next Post

ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಶ್ರೀ ಕಮಲ್ ಪಂತ್ ಐಪಿಎಸ್ ಅವರಿಂದ ಪ್ರಶಂಸನೆ ಪತ್ರ

ದಿ :29-10-2021 ರಂದು ಜನಪ್ರಿಯ ಚಿತ್ರ ನಟ ಪುನೀತ್ ರಾಜಕುಮಾರ್ ಅವರು ಅಕಾಲಿಕ ಮರಣ ಹೊಂದಿದ ಸಮಯದಲ್ಲಿ ಲಕ್ಷಾಂತರ ಜನರು ಅಗಲಿದ ನಾಯಕನ ಅಂತಿಮ ದರ್ಶನಕ್ಕೆ ಕಂಠೀರವ ಕ್ರೀಡಾಂಗಣಕ್ಕೆ ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗೆ ಅವಕಾಶ ಕೊಡದೆ ಶ್ರೇಷ್ಠ ಮಟ್ಟದಲ್ಲಿ ಜನನ ನಿಯಂತ್ರಣ ಮಾಡಿ ಬಂದೋಬಸ್ತ್ ಕರ್ತವ್ಯ ಪೋಲಿಸರು ನಿರ್ವಹಿಸಿದರು .ನಂತರ ದಿ :31-10-2021 ರಂದು ದಿವಗಂತ ಅಂತ್ಯಕ್ರಿಯೆ ಮುಕ್ತಾಯಗೊಳ್ಳುವವರೆಗೆ ಸತತವಾಗಿ 48 ಗಂಟೆಗಳ ಕಾಲ ಪರಿಶ್ರಮದಿಂದ ಕರ್ತವ್ಯ […]

Get News on Whatsapp

by send "Subscribe" to 7200024452
Close Bitnami banner
Bitnami