ಕಲಬುರಗಿ ನಗರ ಪೊಲೀಸ್ ಆಯುಕ್ತಾಲಯದ ವತಿಯಿಂದ ಮಹಿಳೆಯರು ಮತ್ತು ಅಪ್ರಾಪ್ತ ಬಾಲಕಿಯರ ಮೇಲೆ ನಡೆಯುವ ಲೈಂಗಿಕ ಕಿರುಕುಳ ಹಾಗೂ ದೌರ್ಜನ್ಯ ವಿರುದ್ದ “ತಡೆ ಅರಿವು ನಡೆ” ಜಾಥಾ ನಡೆಸಲಾಯಿತು. ಉಪ ಪೊಲೀಸ ಆಯುಕ್ತರಾದ ಶ್ರೀ ಅಡ್ಡೂರು ಶ್ರೀನಿವಾಸುಲು,ಭಾ.ಪೊ.ಸೇ.ರವರು ಜಾಥಾಗೆ ಚಾಲನೆ ನೀಡಿದರು. ಕಲಬುರಗಿ ನಗರ ಪೊಲೀಸ ಆಯುಕ್ತಾಲಯದ ಎಲ್ಲ ಹಿರಿಯ ಕಿರಿಯ ಪೊಲೀಸ ಅಧಿಕಾರಿ ಸಿಬ್ಬಂದಿಯವರು ಜಾಥಾದಲ್ಲಿ ಪಾಲ್ಗೊಂಡಿದ್ದರು.
ದಿನಾಂಕ :08-11-2021 ರಂದು ಬಿಡದಿ ಟೌನ್ ಕೇತಗಾನಹಳ್ಳಿ ಮುಖ್ಯರಸ್ತೆಯಲ್ಲಿ ಮಹಿಳೆಯೊಬ್ಬರ ಬಳಿ ನಡೆದಿದ್ದ ಸರಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಡದಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು .ಪ್ರಕರಣದ ಪತ್ತೆಗಾಗಿ ತನಿಖೆ ಕೈಕೊಂಡು ಮಾಹಿತಿ ಸಂಗ್ರಹಿಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದು ಆರೋಪಿಯನ್ನು ವಿಚಾರಣೆ ನಡೆಸಿ ಆರೋಪಿಯಿಂದ ಸುಮಾರು 4 ಲಕ್ಷ ಮೌಲ್ಯದ 80 ಗ್ರಾಂ ತೂಕದ ಚಿನ್ನದ ಸರ ಗಲ್ಲನ್ನು ಅಮಾನತ್ತು ಪಡಿಸಿ ಕೊಂಡಿ ಒಟ್ಟು 2ಪ್ರಕರಣಗಳು ಪತ್ತೆ ಮಾಡಲಾಗಿದೆ