ದಾವಣಗೆರೆ ಜಿಲ್ಲಾ ಪೊಲೀಸ್-ಕಾನ್ಸ್ಟೇಬಲ್ ಚೇತನ್ ಆರ್ ರವರ ಅಂತಿಮ ದರ್ಶನ

John Prem
1 0
Read Time:1 Minute, 55 Second

ಆಕಸ್ಮಿಕ ಫೈರಿಂಗ್‌ನಿಂದ ಗುಂಡು ತಗುಲಿ ಸಶಸ್ತ್ರ ಮೀಸಲು ಪಡೆಯ ಕಾನ್‌ಸ್ಟೇಬಲ್ ಸಾವನ್ನಪ್ಪಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಜಿಲ್ಲಾ ಸಶಸ್ತ್ರ ಮೀಸಲು ಪಡೆ ಆವರಣದಲ್ಲಿ ಸೋಮವಾರ ಬೆಳಗ್ಗೆ ಅವಘಡ ಸಂಭವಿಸಿದೆ.

ಚೇತನ್ (28) ಸಾವನ್ನಪ್ಪಿದ ಪೊಲೀಸ್ ಕಾನ್‌ಸ್ಟೇಬಲ್. ಬೆಳಗ್ಗೆಯ ತರಬೇತಿ ಮುಗಿಸಿ ಆಯುಧ ಸ್ವಚ್ಛ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಫೈರಿಂಗ್‌ ಆಗಿ ಗುಂಡು ತಗುಲಿದೆ. ಘಟನೆ ಬಳಿಕ ತುರ್ತಾಗಿ ದಾವಣಗೆರೆಯ ಸಿಟಿ ಸೆಂಟ್ರಲ್ ಆಸ್ಪತ್ರೆಗೆ ಚೇತನ್‌ ಅವರನ್ನು ಸಾಗಿಸಲಾಯಿತು.

ಆದರೆ, ಆಸ್ಪತ್ರೆಗೆ ಹೋಗುವ ಮಾರ್ಗ ಮಧ್ಯದಲ್ಲಿಯೇ ಚೇತನ್‌ ಸಾವನ್ನಪ್ಪಿದ್ದಾರೆ.

Constable Late.Chetan R

ಶ್ರೀ ರವಿ ಎಸ್ ಮಾನ್ಯ ಪೊಲೀಸ್ ಮಹಾ ನಿರೀಕ್ಷಕರು, ಪೂರ್ವ ವಲಯ, ದಾವಣಗೆರೆ ರವರು ಮತ್ತು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಸಿ.ಬಿ.ರಿಷ್ಯಂತ್ ಐಪಿಎಸ್ ರವರಿಂದು ದಿನಾಂಕ-23-08-2021ರಂದು ಅಕಾಲಿಕ ಮರಣಕ್ಕೀಡಾದ ದಾವಣಗೆರೆ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೊಲೀಸ್ ಕಾನ್ಸ್ಟೇಬಲ್ ಆದ ದಿ|| ಚೇತನ್ ಆರ್ ರವರ ಅಂತಿಮ ದರ್ಶನವನ್ನು ಪಡೆದು ಸಕಲ ಸರ್ಕಾರಿ ಗೌರವಗಳೊಂದಿಗೆ ಮೃತರ ಸ್ವಗ್ರಾಮ ಚನ್ನಗಿರಿ ತಾ. ಮಲಹಾಳು ಗ್ರಾಮದಲ್ಲಿ ಗೌರವ ವಂದನೆ ಸಮರ್ಪಿಸಿದರು. ಇದೇ ವೇಳೆ ಮೃತರ ಕುಟಂಬಸ್ಥರಿಗೆ ಸಾಂತ್ವಾನ ಹೇಳಿ , ಧೈರ್ಯ ತುಂಬಿದರು. ಇಲಾಖೆಯು ಸದಾ ನಿಮ್ಮ ಜೊತೆಯಲ್ಲಿದ್ದು ಯಾವುದಕ್ಕೂ ಆತಂಕ ಪಡಬಾರದೆಂದು ಹೇಳಿದರು. ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸಹ ಪಾಲ್ಗೋಂಡಿದ್ದರು.

ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,

ಜೆ .ಜಾನ್ ಪ್ರೇಮ್
Happy
Happy
0 %
Sad
Sad
100 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published.

Next Post

ನ್ಯಾಯ ವಿಜ್ಞಾನ ಪ್ರಯೋಗಾಲಯವನ್ನು ಉನ್ನತ್ತಿಕರಿಸಲು ಹೆಚ್ಚಿನ ಆದ್ಯತೆ

ಗೃಹ ಸಚಿವರು ಶ್ರೀ. ಆರಗ ಜ್ಞಾನೇಂದ್ರ ಅವರು ಬುಧವಾರ ಕರ್ನಾಟಕದಲ್ಲಿ ನ್ಯಾಯ ವಿಜ್ಞಾನ ಪ್ರಯೋಗಾಲಯಗಳನ್ನು (ಎಫ್‌ಎಸ್‌ಎಲ್) ಬಲಪಡಿಸಲು ಮತ್ತು ಅಪ್‌ಗ್ರೇಡ್ ಮಾಡಲು ಯೋಜಿಸುತ್ತಿದ್ದು, ಅವರು ಯಾವುದೇ ತನಿಖೆಯಲ್ಲಿ ಮತ್ತು ಅಪರಾಧಿಗಳನ್ನು ಬಂಧಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾರೆ ಎಂದು ಹೇಳಿದರು.ರಾಜ್ಯ ಪೋಲಿಸ್ ಕರ್ನಾಟಕ ಮೀಸಲು ಪೊಲೀಸ್ ವಿಭಾಗವು ಬುಧವಾರ ಇಲ್ಲಿ ಸ್ಥಾಪಿಸಿದ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಉದ್ಘಾಟಿಸಿದ ನಂತರ ಮಾತನಾಡಿದ ಅವರು, “ರಾಜ್ಯದ ಎಲ್ಲಾ ಎಫ್ಎಸ್ಎಲ್ಗಳನ್ನು ಮೇಲ್ದರ್ಜೆಗೇರಿಸುವ ಪ್ರಸ್ತಾಪವಿದೆ.” ಕಾನೂನು ಮತ್ತು […]

Get News on Whatsapp

by send "Subscribe" to 7200024452
Close Bitnami banner
Bitnami