ರಾಷ್ಟ್ರಧ್ವಜವನ್ನು ಪ್ಲಾಸ್ಟಿಕ್, ಕಾಗದಗಳಲ್ಲಿ ತಯಾರಿಸುವುದು, ಮಾರಾಟ ಮಾಡುವುದ್ದನ್ನು ನಿಷೇಧಿಸಲಾಗಿದೆ

John Prem
1 0
Read Time:1 Minute, 40 Second

ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆಯನ್ನು ದೇಶಾದ್ಯಂತ ಆಚರಿಸುತ್ತಿದ್ದು, ಈ ಪ್ರಯುಕ್ತ ಧ್ವಜಾರೋಹಣಾ ಕಾರ್ಯಕ್ರಮ ನಡೆಸುವುದಾಗಿದೆ. ರಾಷ್ಟ್ರಧ್ವಜವನ್ನು ನಿಗದಿಪಡಿಸಿದ ಅಳತೆ/ನಮೂನೆ ಯಲ್ಲಿಯೇ ತಯಾರಿಸಬೇಕಾಗಿದ್ದು, ಯಾವುದೇ ಕಾರಣಕ್ಕೂ ರಾಷ್ಟ್ರಧ್ವಜಕ್ಕೆ ಅಗೌರವ ತೋರಿಸುವುದು ಕಾನೂನು ಬಾಹಿರವಾಗಿರುತ್ತದೆ.

ಕಾಗದ, ಪ್ಲಾಸ್ಟಿಕ್ ನಿಂದ ತಯಾರಿಸಿದ ರಾಷ್ಟ್ರಧ್ವಜವನ್ನು ಉಪಯೋಗಿಸಿ ಎಸೆಯುವ ಸಂಭವವಿರುವುದರಿಂದ ರಾಷ್ಟ್ರಧ್ವಜವನ್ನು ಪ್ಲಾಸ್ಟಿಕ್, ಕಾಗದಗಳಲ್ಲಿ ತಯಾರಿಸುವುದು, ಮಾರಾಟ ಮಾಡುವುದ್ದನ್ನು ನಿಷೇಧಿಸಲಾಗಿದೆ. ಆದುದರಿಂದ ಪ್ಲಾಸ್ಟಿಕ್ ಮತ್ತು ಕಾಗದದಲ್ಲಿ ತಯಾರಿಸಿದ ರಾಷ್ಟ್ರಧ್ವಜದ ಉಪಯೋಗ ನಿಷೇದಿಸಲಾಗಿದ್ದು, ಬಳಸಿದವರ ಮೇಲೆ ಸೂಕ್ತ ಕ್ರಮ ಜರುಗಿಸಲಾಗುವುದು.

ಅದೇ ರೀತಿ ಮಾಸ್ಕ್‌ ನಲ್ಲಿ ತ್ರಿವರ್ಣ ಧ್ವಜವನ್ನು ಅಳವಡಿಸುವುದು, ರಾಷ್ಟ್ರಧ್ವಜಕ್ಕೆ ಅಗೌರವ ತೋರಿಸಿದಂತಾಗುವುದರಿಂದ ರಾಷ್ಟ್ರಧ್ವಜವಿರುವ ಮಾಸ್ಕ್ ಬಳಸುವುದ್ದನ್ನು ಕೂಡ ನಿರ್ಬಂಧಿಸಲಾಗಿದೆ.ಮೇಲ್ಕಂಡ ನಿಯಮಗಳ ಉಲ್ಲಂಘನೆ ಕಂಡುಬಂದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕೊಡಗು ಜಿಲ್ಲಾ ಪೊಲೀಸರು ತಿಳಿಸಿದ್ದಾರೆ.

ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,

ಜೆ .ಜಾನ್ ಪ್ರೇಮ್

Happy
Happy
100 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Next Post

ಮಡಿವಾಳ ಪೊಲೀಸರಿಂದ 75ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದರು

ಬೆಂಗಳೂರು: ದೇಶದಲ್ಲಿ ಇಂದು 75ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಗುತ್ತಿದೆ. ದೇಶದ ಮೂಲೆ ಮೂಲೆಯಲ್ಲೂ ಸಂಭ್ರಮ ಕಳೆಕಟ್ಟಿದೆ. ಕೊರೊನಾ ಇರುವ ಹಿನ್ನೆಲೆ ಸರಳ ಹಾಗೂ ನಿಯಮದ ಪ್ರಕಾರವೇ ಸ್ವಾತಂತ್ರ್ಯ ಹಬ್ಬವನ್ನು ಆಚರಿಸಲಾಗುತ್ತಿದೆ.ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಯಿತು. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಗುವಾಗ ನಡೆದ ತ್ಯಾಗ ಬಲಿದಾನ ಸ್ಮರಣೆ ಮಾಡುತ್ತಾ ಬೆಂಗಳೂರು ನಗರ ಮಡಿವಾಳ ಠಾಣೆ ಪೊಲೀಸರು ಧ್ವಜಾರೋಹಣ ನೆರವೇರಿಸುವ ಮೂಲಕ ಸಾಕ್ಷಿಯಾದರು. ನಮ್ಮ ಮುಖ್ಯ ವರದಿಗಾರರು […]

Get News on Whatsapp

by send "Subscribe" to 7200024452
Close Bitnami banner
Bitnami