ಅಪಹರಣವಾಗ್ತಿದ್ದ ವ್ಯಕ್ತಿಯನ್ನು ರಕ್ಷಿಸಿದ ಹಸನ ಪೊಲೀಸರು!

0 0
Read Time:2 Minute, 51 Second

ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ಯುವಕನೊಬ್ಬನನ್ನು ಅಪಹರಣ ಮಾಡುತ್ತಿದ್ದ ಕಿಡಿಗೇಡಿಗಳ ತಂಡದಿಂದ ಪೊಲೀಸರು ತಮ್ಮ ಪ್ರಾಣದ ಹಂಗು ತೊರೆದು ಸಿನಿಮೀಯ ರೀತಿಯಲ್ಲಿ ಆತನನ್ನು ರಕ್ಷಿಸಿದ ಘಟನೆ ಹಾಸನದ ಗೊರೂರಿನಲ್ಲಿ ನಡೆದಿದೆ.

ಹಣಕಾಸಿನ ವಿಷಯ ಸಂಬಂಧ ಕಾಸರಗೋಡಿನ ಅನ್ವರ್(33) ಎಂಬ ಯುವಕನನ್ನು ಕಿಡಿಗೇಡಿಗಳ ತಂಡವೊಂದು ಕಿಡ್ನಾಪ್ ಮಾಡಿ ಹಾಸನಕ್ಕೆ ಎಂಟ್ರಿಯಾಗಿತ್ತು. ಈ ವೇಳೆ ಕಾರು ಗೊರೂರಿನ ಮೂಲಕ ಪಾಸ್ ಆಗುತ್ತಿರುವುದು ತಿಳಿದ ಪೊಲೀಸರು, ಅವರನ್ನು ಹಿಡಿಯುವ ಸಲುವಾಗಿಯೇ ಯಾರಿಗೂ ಅನುಮಾನ ಬಾರದಂತೆ ರಸ್ತೆಗೆ ಅಡ್ಡಲಾಗಿ ಲಾರಿ, ಜೆಸಿಬಿ ನಿಲ್ಲಿಸಿಕೊಂಡು ಕಾಯುತ್ತಿದ್ದರು.

ಲಾರಿ ಅಡ್ಡ ಇರುವುದನ್ನು ನೋಡಿದ ಚಾಲಕ ಕಾರಿನ ವೇಗ ತಗ್ಗಿಸಿದ್ದಾನೆ. ತಕ್ಷಣ ಕಾರಿನ ಬಳಿ ಶರವೇಗದಿಂದ ಓಡಿ ಬಂದ ಗೊರೂರಿನ ಪೊಲೀಸರು, ಕಾರು ತಡೆಯಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರನ್ನು ಕಂಡೊಡನೇ ಕಾರನ್ನು ಯೂಟರ್ನ್ ಮಾಡಿ ಎಸ್ಕೇಪ್ ಆಗಲು ಕಿಡ್ನಾಪರ್ಸ್ ತಂಡ ಯತ್ನಿಸಿದೆ. ಈ ವೇಳೆ  ಪೊಲೀಸರು ತಮ್ಮ ಪ್ರಾಣದ ಹಂಗನ್ನು ತೊರೆದು, ಚಲಿಸುತ್ತಿದ್ದ ಕಾರಿನ ಹಿಂಬದಿ ಬಾಗಿಲು ತೆರೆದು ಯುವಕನ್ನು ರಕ್ಷಿಸಿದ್ದಾರೆ. ಈ ದೃಶ್ಯ ಸ್ಥಳೀಯರ ಮೊಬೈಲ್‍ನಲ್ಲಿ ಸೆರೆಯಾಗಿದ್ದು, ಸಿನಿಮಾಗಳ ಸಾಹಸ ದೃಶ್ಯಗಳನ್ನು ಮೀರಿಸುವಂತಿದೆ.

Dr.Srinivas Gowda R IPS

ಕಾರಿನಿಂದ ಕಿಡ್ನಾಪ್ ಆದ ಅನ್ವರ್‍ನನ್ನು ಬಚಾವ್ ಮಾಡಿದ್ದರೂ ಕಿಡ್ನಾಪರ್ಸ್ ಕಾರ್ ನಿಲ್ಲಿಸದೆ ವೇಗವಾಗಿ ಚಲಾಯಿಸಿಕೊಂಡು ಹೋಗಲು ಯತ್ನಿಸಿದ್ದಾರೆ. ಸ್ಥಳೀಯರು ಹಾಗೂ ಪೊಲೀಸರು ಕಾರಿನ ಹಿಂದೆಯೇ ಓಡುತ್ತಾ ತಡೆಯಲು ಯತ್ನಿಸಿದ್ದಾರೆ. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಕಾರು, ರಸ್ತೆ ಪಕ್ಕದ ಕಾಂಪೌಂಡ್‍ಗೆ ಗುದ್ದಿದೆ. ತಕ್ಷಣ ಕಾರಿನಿಂದ ಇಳಿದ ಕಿಡ್ನಾಪರ್ಸ್ ತಪ್ಪಿಸಿಕೊಂಡಿದ್ದಾರೆ. ಆದರೆ ಪ್ರಾಣದ ಹಂಗು ತೊರೆದು ಕಿಡ್ನಾಪ್ ಆದ ಯುವಕನನ್ನು ರಕ್ಷಿಸಿದ ಪೊಲೀಸರ ತಂಡಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಕಿಡ್ನಾಪ್ ಆಗಿದ್ದ ಅನ್ವರ್‍ನನ್ನು ರಕ್ಷಿಸಿದ ನಂತರ ಹಾಸನ ಪೊಲೀಸರು ಆತನನ್ನು ಕಾಸರಗೋಡು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,

ಜೆ .ಜಾನ್ ಪ್ರೇಮ್

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Next Post

ಮಾದಕ ವಸ್ತು ಮಾರುತ್ತಿದ್ದ ಅವನನ್ನು ಬಂಧಿಸಿದ ಮಡಿವಾಳ ಪೊಲೀಸರು

ಮಡಿವಾಳ ಪೋಲಿಸರನ್ನ ಸುಮಾರು 3,46,000/- ರೂ ಬೆಲೆ ಬಾಳುವ ಬ್ರೌನ್ ಶುಗರ್ ಮತ್ತು Estasi Tablets & LSD Strips ಗಳನ್ನು ಮಹಿಮಾ ಮಾಡುತ್ತಿದ್ದ ಆರೋಪಿ ಬಂಧನ . ಈ ಪ್ರಕರಣದ ಕಾರ್ಯಾಚರಣೆಯನ್ನು ಬೆಂಗಳೂರು ನಗರ ಆಗ್ನೇಯ ವಿಭಾಗದ ಮಾನ್ಯ ಉಪ ಪೊಲೀಸ್ ಕಮಿಷನರ್ ಶ್ರೀ .ಶ್ರೀನಾಥ್ ಮಹಾದೇವ್ ಜೋಷಿ ರವರ ನಿರ್ದೇಶನದಲ್ಲಿ , ಮಡಿವಾಳ ಉಪವಿಭಾಗದ ಸಹಾಯಕ ಪೊಲೀಸ್ ಕಮೀಷನರ್ ಶ್ರೀ .ಸುಧೀರ್ ಎಂ ಹೆಗ್ಡೆ ರವರ ಮಾರ್ಗದರ್ಶನದಲ್ಲಿ […]

Get News on Whatsapp

by send "Subscribe" to 7200024452
Close Bitnami banner
Bitnami