ಬೀಟಿ ಮರ ಕಳ್ಳತನ ಆರೋಪಿಗಳ ಬಂಧನ

John Prem
1 0
Read Time:2 Minute, 4 Second

ಮಡಿಕೇರಿ ಗ್ರಾಮಾಂತರ ಠಾಣಾ ಸರದ್ದಿನ ಚೇರಳ ಶ್ರೀಮಂಗಲ ಗ್ರಾಮದ ಬಿ.ಎಂ.ಬೋಪಯ್ಯ ಎಂಬವರ ತೋಟದಿಂದ ದಿನಾಂಕ 6.11.2020ರ 5.00 ಪಿ.ಎಂ. ನಿಂದ 18.11.2020ರ 10.00 ಎ.ಎಂ. ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಬೀಟಿ ಮರವನ್ನು ಕಳವು ಮಾಡಿಕೊಂಡು ಹೋಗಿರುವ ಬಗ್ಗೆ ದಿನಾಂಕ 20.4.2021 ರಂದು ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಲಾಗಿತ್ತು.ಪ್ರಕರಣದ ತನಿಖೆಯನ್ನು ಕೈಗೊಂಡ ಮಡಿಕೇರಿ ಗ್ರಾಮಾಂತರ ಠಾಣೆಯ ಪೊಲೀಸ್ ನಿರೀಕ್ಷಕರಾದ ಎಸ್.ಎಸ್.ರವಿಕುಮಾರ್ ರವರು ಪೊಲೀಸ್ ವರಿಷ್ಠಾಧಿಕಾರಿಯವರ ಮತ್ತು ಮಡಿಕೇರಿ ಉಪ ವಿಭಾಗದ ಪ್ರಭಾರ ಡಿವೈ.ಎಸ್.ಪಿ ಹೆಚ್.ಎಂ.ಶೈಲೇಂದ್ರ ರವರ ಮಾರ್ಗದರ್ಶನದಲ್ಲಿ ಸಿಬ್ಬಂದಿ ಯೊಂದಿಗೆ ಕಳ್ಳತನ ಅರೋಪಿಗಳನ್ನು ಪತ್ತೆಮಾಡಿಆರೋಪಿಗಳಾದ 1) ಇಬ್ರಾಹಿಂ, ಪ್ರಾಯ 27 ವರ್ಷ, ವಾಲ್ನೂರು ತ್ಯಾಗತ್ತೂರು ಗ್ರಾಮ, ಸೋಮವಾರಪೇಟೆ ತಾಲ್ಲೂಕು, 2) ಉಮ್ಮರ್ ಎಂ.ಕೆ. ತಂದೆ ಕುಂಜಾಲಿ, 33 ವರ್ಷ, ಸಿದ್ದಾಪುರ ಮತ್ತು 3) ವಾಸಿಮ ಅಕ್ರಮ್, ತಂದೆ ಸುಮಾಯಿಲ್, 25 ವರ್ಷ, ಮೈಸೂರು ನಗರ ಇವರನ್ನು ಬಂಧಿಸಿ ಆರೋಪಿಗಳು ಕಳವು ಮಾಡಿದ 1.5 ಲಕ್ಷ ರೂಪಾಯಿ ಮೌಲ್ಯದ ಬೀಟಿ ಮರದ ತುಂಡುಗಳನ್ನು ವಶಪಡಿಸಿಕೊಂಡು ಮುಂದಿನ ಕ್ರಮ ಕೈಗೊಂಡಿರುತ್ತಾರೆ.

ಈ ಕಾರ್ಯಾಚರಣೆಯಲ್ಲಿ ಮಡಿಕೇರಿ ಗ್ರಾಮಾಂತರ ಠಾಣೆಯ ಪಿ.ಐ. ರವಿಕಿರಣ್ ಎಸ್.ಎಸ್ ಸಿಬ್ಬಂದಿಗಳಾದ ರವಿಕುಮಾರ್, ಮಹೇಶ್ ಎಂ.ಕೆ, ದಿನೇಶ್ ಕೆ.ಡಿ. ಡಿಸಿಐಬಿ ವಿಭಾಗದ ಯೋಗೇಶ್, ನಿರಂಜನ್, ಅನಿಲ್ ಕುಮಾರ್ ಮತ್ತು ಶರತ್ ರವರು ಭಾಗಿಯಾಗಿದ್ದು ಇವರ ಕಾರ್ಯವೈಖರಿಯನ್ನು ಶ್ಲಾಘಿಸಲಾಗಿದೆ.

ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,

This image has an empty alt attribute; its file name is John_prem.jpg

ಜೆ .ಜಾನ್ ಪ್ರೇಮ್

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published.

Next Post

Davangere District Police ದಾವಣಗೆರೆ ಜಿಲ್ಲಾ ಪೊಲೀಸ್

ಶ್ರೀ ಸಿ.ಬಿ.ರಿಷ್ಯಂತ್ ಐಪಿಎಸ್ ರವರು ದಿನಾಂಕ-11-07-2021ರಂದು ವಿದ್ಯಾನಗರ & ಕೆಟಿಜೆ ನಗರ ಪೊಲೀಸ್ ಠಾಣೆಗಳಿಗೆ ಭೇಟಿ ಪರಿಶೀಲಿಸಿದರು. ಪೊಲೀಸ್ ಅಧಿಕಾರಿ- ಸಿಬ್ಬಂದಿಗಳ ಕುಂದುಕೊರತೆಗಳ ಬಗ್ಗೆ ಆಲಿಸಿದರು. ಈ ಸಂದರ್ಭದಲ್ಲಿ ಡಿವೈಎಸ್ಪಿ ಶ್ರೀ ನಾಗೇಶ್ ಐತಾಳ್, ಸಿಪಿಐ ಶ್ರೀ ಗುರುಬಸವರಾಜ್, ಪಿಎಸೈರವರುಗಳು ಉಪಸ್ಥಿತರಿದ್ದರು. ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ, ಜೆ .ಜಾನ್ ಪ್ರೇಮ್

Get News on Whatsapp

by send "Subscribe" to 7200024452
Close Bitnami banner
Bitnami