ದಾವಣಗೆರೆ ಜಿಲ್ಲೆಯಲ್ಲಿ ಕೋವಿಡ್ 2ನೇ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರ ನೇತೃತ್ವದ ತಂಡ ನಗರದ ಗಡಿಯಾರಕಂಬ, ಕಾಳಿಕಾದೇವಿ ರಸ್ತೆ ಸೇರಿದಂತೆ ವಿವಿಧ ರಸ್ತೆಗಳಲ್ಲಿ ಸಂಚರಿಸಿ, ಮಾಸ್ಕ್ ಧರಿಸದವರಿಗೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದ ಅಂಗಡಿಗಳ ಮೇಲೆ ದಂಡ ಹಾಕುವ ಮೂಲಕ ಚುರುಕು ಮುಟ್ಟಿಸುವುದರ ಜೊತೆಗೆ ಕೊರೊನ ಸೋಂಕಿನ ಕುರಿತು ಜಾಗೃತಿ ಮೂಡಿಸಿದರು. ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸಿ ವ್ಯಾಪಾರ ಪರವಾನಗಿಯನ್ನು ರದ್ದು ಮಾಡುವ ಎಚ್ಚರಿಕೆ ನೀಡಿದರು. […]
Davangere District Police
ಆಟೋ ಚಾಲಕನ ಪ್ರಾಮಾಣಿಕತೆಗೆ ದಾವಣಗೆರೆ ಜಿಲ್ಲಾ ಪೋಲಿಸ್ ಶ್ಲಾಘನೆ
ದಿನಾಂಕ 25-03-2021ರಂದು ನಗರದ ಪಿಜೆ ಬಡಾವಣೆಯ 07 ನೇ ಮುಖ್ಯ ರಸ್ತೆಯಲ್ಲಿ 15 ಗ್ರಾಂ ತೂಕದ ಬಂಗಾರದ ಒಡವೆ ಮತ್ತು 2508/- ರೂ ಮೊತ್ತದ ಹಣ ಇರುವ ಪರ್ಸ್ ,ದಾವಣಗೆರೆ ನಗರದ ಆಟೊ ಚಾಲಕರಾದ ಶ್ರೀ. ಜಗದೀಶ್ ಆರ್. ಟಿ. ರವರಿಗೆ ಸಿಕ್ಕಿದ್ದು ,ಸದರಿ ಅವರು ಅತ್ಯಂತ ಪ್ರಾಮಾಣಿಕತೆ ಯಿಂದ ಬಡಾವಣೆ ಪೊಲೀಸ್ ಠಾಣೆಗೆ ತಂದು ಒಪ್ಪಿಸಿತ್ತು ನಂತರ ಬಡಾವಣೆಯ ಪೊಲೀಸರು ಅದರ ವಾರಸುದಾರರನ್ನು ಪತ್ತೆ ಮಾಡಿ ಬಂಗಾರ ಮತ್ತು […]
ದಾವಣಗೆರೆ ಜಿಲ್ಲಾ ಪೊಲೀಸ್-ಕೊರೊನಾ ಜಾಗೃತಿ
ರಾಜ್ಯದಲ್ಲಿ ಕೊರೊನಾ ಎರಡನೆ ಹಳೆ ಹೆಚ್ಚುತ್ತಿರುವ ಈ ಸಮಯದಲ್ಲಿ ದಾವಣಗೆರೆ ಜಿಲ್ಲಾ ಪೊಲೀಸರಿಂದ ಕೊರೊನಾ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು .ದಿನಾಂಕ-05-04-2021 ರಂದು ದಾವಣಗೆರೆ ಜಿಲ್ಲಾ ಪೊಲೀಸ್ ವತಿಯಿಂದ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಶಾಲಾ ಕಾಲೇಜುಗಳು, ಸಾರ್ವಜನಿಕ ಸ್ಥಳಗಳು, ಜನ ಸಂದಣಿ ಸ್ಥಳಗಳಲ್ಲಿ, ಹೋಟೆಲ್, ಮಾರುಕಟ್ಟೆಗಳಲ್ಲಿ ಭೇಟಿ ನೀಡಿ ಕೊರೊನಾ ವೈರಸ್ ನಿಂದ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಿದ್ದು, ಕಡ್ಡಾಯವಾಗಿ ಮಾಸ್ಕ್ ಧರಿಸುವ ಬಗ್ಗೆ ಸೂಚಿಸಲಾಗಿರುತ್ತದೆ ಹಾಗೂ ಸಾಮಾಜಿಕ […]
ದಾವಣಗೆರೆ ಜಿಲ್ಲಾ ಪೊಲೀಸ್ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯವರುಗಳಿಗೆ ಹರಿಹರ ವೃತ್ತ ಕಛೇರಿಯಲ್ಲಿ ಗೌರವ ವಂದನೆ ಕಾರ್ಯಕ್ರಮವನ್ನು ಹಮ್ಮಿಕೊಡಿದ್ದು ಸದರಿ ಕಾರ್ಯಕ್ರಮಕ್ಕೆ ಅಧ್ಯಕ್ಷರಾಗಿ ಶ್ರೀ ನರಸಿಂಹ ವಿ ತಾಮ್ರಧ್ವಜ, ಡಿವೈಎಸ್ ಪಿ ದಾ.ಗ್ರಾ.ಉ.ವಿಭಾಗ ರವರು ವಹಿಸಿಕೊಂಡಿದ್ದು ಮುಖ್ಯ ಅತಿಧಿಗಳಾಗಿ ಶ್ರೀಮತಿ ಸವಿತಾ, ವೈದ್ಯಾಧಿಕಾರಿಗಳು ಸರ್ಕಾರಿ ಆಸ್ಪತ್ರೆ ಹರಿಹರ ರವರು ಮತ್ತು ಶ್ರೀಮತಿ ಸುಜಾತ ಗಿರಿಯಮ್ಮ ಕಾಲೇಜ್ ಪ್ರಾಚಾರ್ಯರು ಹರಿಹರ ರವರು ಹಾಗೂ ಹರಿಹರ ವೃತ್ತ ನಿರೀಕ್ಷರಾದ ಶ್ರೀ […]
ದಾವಣಗೆರೆ ಜಿಲ್ಲಾ ಪೊಲೀಸ್ ವತಿಯಿಂದ 32 ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಮಾಸಚಾರಣೆ
ದಾವಣಗೆರೆ ಜಿಲ್ಲಾ ಪೊಲೀಸ್ ವತಿಯಿಂದ 32 ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಮಾಸಚಾರಣೆ 2021 ಪ್ರಯುಕ್ತ ದಾವಣಗೆರೆ ನಗರದಲ್ಲಿ ಇಂದು ಬೈಕ್ ಜಾಥಾ ಹಮ್ಮಿಕೊಳಲಾಗಿತ್ತು. ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ರಾಜೀವ್ ಎಂ ರವರು ರಸ್ತೆ ಸುರಕ್ಷತಾ ಮಾಸಚಾರಣೆ ಗೆ ನಗರದ ಹೈಸ್ಕೂಲ್ ಮೈದಾನದಿಂದ ಚಾಲನೆ ನೀಡಿದರು. ನಗರದ ವಿವಿಧ ಪ್ರಮುಖ ರಸ್ತೆಗಳಲ್ಲಿ ಬೈಕ್ ಜಾಥಾ ನಡೆಸಲಾಯಿತು.ಜಾಥದಲ್ಲಿ ಆರ್.ಟಿ.ಓ ಅಧಿಕಾರಿಗಳಾದ ಶ್ರೀ ಶ್ರೀಧರ್, ನಗರ ಡಿವೈಎಸ್ಪಿ ರವರಾದ […]