ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ.ಸಿ.ಬಿ.ರಿಷ್ಯಂತ್, ಐಪಿಎಸ್ ರವರಿಂದುಕರ್ನಾಟಕ ಕೇರಳ ಗಡಿ ಭಾಗದಲ್ಲಿನ ಮೈಸೂರು ಜಿಲ್ಲೆಯ ಬೀಚನಹಳ್ಳಿ ಪೊಲೀಸ್ ಠಾಣಾ ಸರಹದ್ದಿನ ಬಾವಲಿ ತಪಾಸಣಾ ಕೇಂದ್ರಕ್ಕೆ ಭೇಟಿ ನೀಡಿ, ಕೇರಳದ ವೈನಾಡು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ. ಅರವಿಂದ್, ಐಪಿಎಸ್ ರವರೊಡನೆ ಸಮಾಲೋಚನೆ ನಡೆಸಿದರು, ಇದೇ ಸಮಯದಲ್ಲಿ ಕೋವಿಡ್ 19 ಪರೀಕ್ಷಾ ಕೇಂದ್ರಕ್ಕೆ ಭೇಟಿ ಕೊಟ್ಟರು, ಕೇರಳ ರಾಜ್ಯದಿಂದ ಆಗಮಿಸುವ ಪ್ರಯಾಣಿಕರಿಗೆ ಅನ್ವಯವಾಗುವಂತೆ ಅನುಸರಿಸಬೇಕಾದ ಕ್ರಮಗಳನ್ನು ಕುರಿತು ತಿಳುವಳಿಕೆ ನೀಡಿದರು. ನಮ್ಮ […]
Mysuru District Police
ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಹಾಗೂ ಕುಟುಂಬ ವರ್ಗದವರಿಗೆ ಉಚಿತ ಆರೋಗ್ಯ ತಪಾಸಣ
ನಂಜನಗೂಡು ಕೈಗಾರಿಕೆಗಳ ಒಕ್ಕೂಟ ಮತ್ತು ನಂಜನಗೂಡು ಉಪವಿಭಾಗ ಪೊಲೀಸ್ ವತಿಯಿಂದ ಉಪವಿಭಾಗ ವ್ಯಾಪ್ತಿಯ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಹಾಗೂ ಕುಟುಂಬ ವರ್ಗದವರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ.ಸಿ.ಬಿ.ರಿಷ್ಯಂತ್, ಐಪಿಎಸ್ ರವರು ಉದ್ಘಾಟಿಸಿದರು. ಪೊಲೀಸ್ ಅಧಿಕಾರಿ ಸಿಬ್ಬಂದಿಗಳು ದೈನಂದಿನ ಕರ್ತವ್ಯ ನಿರ್ವಹಣೆಯನ್ನು ಬಹಳ ದಕ್ಷತೆ ಮತ್ತು ಪರಿಣಾಮಕಾರಿಯಾಗಿ ನಿರ್ವಹಿಸಲು ಉತ್ತಮ ದೈಹಿಕ ಮತ್ತು ಮಾನಸಿಕ ಆರೋಗ್ಯ ಅವಶ್ಯಕವಾಗಿದ್ದು ಅದಕ್ಕಾಗಿ ನಾವುಗಳು ಮಿತ ಮತ್ತು ಆರೋಗ್ಯಕರವಾದ […]
ಮೈಸೂರು ಪೊಲೀಸ್ ವತಿಯಿಂದ ತರಬೇತಿ ಕಾರ್ಯಕ್ರಮ
ಮಹಿಳೆಯರ ಮೇಲೆ ನಡೆಯುವ ಪ್ರಕರಣಗಳಿಗೆ ಸಂಬಂಧಿಸಿದಂತೆ ತನಿಖಾಧಿಕಾರಿಗಳು ಸಾಕ್ಷ್ಯ ಸಂಗ್ರಹಣೆಯ ಕುರಿತಂತೆ ಪ್ರಾದೇಶಿಕ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರಿಂದ ಕಾರ್ಯಾಗಾರವನ್ನು ನಡೆಸಿದ್ದು. ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ.ಸಿ.ಬಿ.ರಿಷ್ಯಂತ್, ಐಪಿಎಸ್ ರವರು ಮಾತನಾಡಿ ಕೃತ್ಯ ನಡೆದಾಗ ಸಾಕ್ಷಿಗಳ ಸಂಗ್ರಹ ಅಪರಾಧಿಗಳ ಪತ್ತೆ ಮತ್ತು ಶಿಕ್ಷೆ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು. ಅಪರ ಪೊಲೀಸ್ ಅಧೀಕ್ಷಕರಾದ ಶ್ರೀ .ಆರ್. ಶಿವಕುಮಾರ್ ರವರು ಸಹ ಹಾಜರಿದ್ದರು. ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಅಧಿಕಾರಿ ಸಿಬ್ಬಂದಿಗಳಿಗೆ ಕೃತ್ಯ […]
ನಂಜನ್ಗುಡ್ ನಗರದಲ್ಲಿ ರಸ್ತೆ ಸುರಕ್ಷಿತ ಜಾಗೃತಿ ನಡೆಯಿತು
ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ 2021 ರ ಅಂಗವಾಗಿ ನಂಜನಗೂಡು ಪಟ್ಟಣದಲ್ಲಿ ಸಾರ್ವಜನಿಕರಿಗೆ ಸುರಕ್ಷಿತ ಸಂಚಾರಕ್ಕಾಗಿ ಸಂಚಾರಿ ನಿಯಮಗಳನ್ನು ಪಾಲನೆ ಮಾಡುವಂತೆ ಬೀದಿನಾಟಕದ ಮೂಲಕ ಜಾಗೃತಿ ಮೂಡಿಸಿದ್ದು, Addl sp ಶ್ರೀ. ಆರ್. ಶಿವಕುಮಾರ್ ರವರು, DSP ಶ್ರೀ. ಗೋವಿಂದರಾಜು ರವರು &CPI ಶ್ರೀ.ಲಕ್ಷ್ಮೀಕಾಂತ್ ತಳವಾರ್ ರವರು ಹಾಜರಿದ್ದರು. ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,
“ಜೀವ ರಕ್ಷಾ ಟ್ರಸ್ಟ್“ ಯ ವತಿಯಿಂದ ತುರ್ತು ಸ್ಪಂದನಾ ಸಹಾಯ ವ್ಯವಸ್ಥೆ
ಸಿಬ್ಬಂದಿಗಳಿಗೆ ತುರ್ತು ಸಂದರ್ಭಗಳಾದ ಅಪಘಾತ, ಹೃದಯಾಘತ, ಹಾವು ಕಡಿತ ಮತ್ತು ಇತರ ತುರ್ತು ಸಮಯಗಳಲ್ಲಿ ಯಾವ ರೀತಿ ಪ್ರಥಮ ಚಿಕಿತ್ಸೆಯನ್ನು ನೀಡಬೇಕು ಎಂಬುದರ ಬಗ್ಗೆ ಉಪನ್ಯಾಸವನ್ನು ನೀಡಿದರು. ಪ್ರಾತ್ಯಕ್ಷತೆ ಮತ್ತು ಪ್ರಯೋಗದ ಮೂಲಕ ತರಬೇತಿಯನ್ನು ನೀಡಲಾಯಿತು. ಸದರಿ ತರಬೇತಿ ಕಾರ್ಯವು ವಿವಿಧ ತುರ್ತು ಸಮಯಗಳಲ್ಲಿ ಯಾವ ರೀತಿ ಪ್ರಥಮ ಚಿಕಿತ್ಸೆಯನ್ನು ನೀಡಬೇಕು ಎಂಬುದರ ಕುರಿತಾಗಿದ್ದು ಇದು ಜೀವ ರಕ್ಷಣೆಯಲ್ಲಿ ಬಹಳ ಮಹತ್ವವನ್ನು ಹೊಂದಿದೆ. “ಜೀವ ರಕ್ಷಾ ಟ್ರಸ್ಟ್“ ಸಿಇಓ ಡಾ. […]
ಮೈಸೂರು -E OFFICE ತಂತ್ರಜ್ಞಾನ ದ ಕಾರ್ಯಗಾರ ಮುಕ್ತಾಯ ಸಭೆ
ಎರಡು ದಿನಗಳ ಕಾಲ ನಡೆದ E OFFICE ತಂತ್ರಜ್ಞಾನ ದ ಕಾರ್ಯಗಾರ ಮುಕ್ತಾಯ ಸಭೆಯಲ್ಲಿ ದಕ್ಷಿಣ ವಲಯ ಐಜಿಪಿ ರವರಾದ ಶ್ರೀ. ಪ್ರವೀಣ್ ಮಧುಕರ್ ಪವಾರ್, ಐಪಿಎಸ್ ರವರು ಸಿಬ್ಬಂದಿಗಳನ್ನುದ್ದೇಶಿಸಿ ಮಾತನಾಡಿದರು.ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ.ಸಿ.ಬಿ.ರಿಷ್ಯಂತ್, ಐಪಿಎಸ್ ರವರು , ವಲಯ ಮತ್ತು ಜಿಲ್ಲಾ ಪೊಲೀಸ್ ಕಛೇರಿಯ ಅಧಿಕಾರಿ ಸಿಬ್ಬಂದಿಗಳು ಹಾಜರಿದ್ದರು.