ದಿನಾಂಕ: 27.06.2023 ರಂದು ಸಾಯಂಕಾಲ 06:00 ಗಂಟೆಗೆ ಫಿರಾದಿದಾರರಾದ ಶ್ರೀಮತಿ ಸುಜಾತ ಗಂಡ ಶಿವಾನಂದ ಬಿರಾದರ ವ: 29 ವರ್ಷ ಉಎಸ್.ಬಿ.ಆರ್ ಶಾಲೆಯಲ್ಲಿ ಆಯಾ ಕೆಲಸ ಸಾ:ಬೊಮ್ಮನಳ್ಳಿ ತಾ:ಆಳಂದ ಜಿ:ಕಲಬುರಗಿ ಹಾ.ವ:ಗುರುಬಸಪ್ಪ ಇವರ ಮನೆಯಲ್ಲಿ ಬಾಡಿಗೆ ಶಿವಾ ಅನುಭವ ಕಲ್ಯಾಣ ಮಂಟಪ ಹತ್ತಿರ ಶೇಕರೋಜಾ ಕಲಬುರಗಿರವರು ಪೊಲೀಸ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 23.06.2023 ರಂದು ಸಾಯಂಕಾಲ 06:25 ಗಂಟೆಯಲ್ಲಿ ಶೇಕರೋಜಾ ಸಾರ್ವಜನಿಕ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ […]
Kalaburagi City
ಸ್ಟೇಷನ್ ಬಜಾರ ಪೊಲೀಸರಿಂದ ಬೈಕ್ ಕಳ್ಳರ ಬಂಧನ 13 ದ್ವಿ-ಚಕ್ರ ವಾಹನಗಳು ವಶ
ಕಲಬುರಗಿ ನಗರದ ವಿವಿಧ ಏರಿಯಾಗಳಲ್ಲಿ ಮೋಟಾರ್ ಸೈಕಲ್ ಕಳ್ಳತನ ಪ್ರಕರಣಗಳು ಜರುಗುತ್ತಿದ್ದು, ಮೋಟಾರ್ ಸೈಕಲ್ ಪತ್ತೆಗಾಗಿ ಕಲಬುರಗಿ ನಗರ ಮಾನ್ಯ ಶ್ರೀ ಅಡೂರು ಶ್ರೀನಿವಾಸುಲು ಐ.ಪಿ.ಎಸ್ (ಕಾ&ಸೂ) ಉಪ-ಪೊಲೀಸ ಆಯುಕ್ತರು ಕಲಬುರಗಿ ನಗರ, ಮತ್ತು ಶ್ರೀ ಐ.ಎ.ಚಂದ್ರಪ್ಪ ಕೆ.ಎಸ್.ಪಿ.ಎಸ್ (ಅ&ಸಂ) ಉಪ-ಪೊಲೀಸ ಆಯುಕ್ತರು ಕಲಬುರಗಿ ನಗರ ರವರ ಮಾರ್ಗದರ್ಶನದಲ್ಲಿ ಹಾಗೂ ಶ್ರೀ ಭೂತೇಗೌಡ ಸಹಾಯಕ ಪೊಲೀಸ ಆಯುಕ್ತರು ದಕ್ಷಿಣ ಉಪ ವಿಭಾಗ ರವರುಗಳ ನೇತೃತ್ವದಲ್ಲಿ ಸ್ಟೇಷನ ಬಜಾರ ಪೊಲೀಸ ಠಾಣೆಯ […]
ಕಲಬುರಗಿ ನಗರ ಪೊಲೀಸ್ ವತಿಯಿಂದ ಐಟಿ ವಿಷಯದ ಕುರಿತು ಕಾರ್ಯಾಗಾರ
ಕಲಬುರಗಿ ನಗರ ಪೊಲೀಸ ಆಯುಕ್ತಾಲಯದ ಎಲ್ಲ ಪೊಲೀಸ ಠಾಣೆಯ ಸಿಬ್ಬಂದಿಗಳಿಗೆ ಸ್ಮಾರ್ಟ್ ಇ-ಬೀಟ್, ಕೆ.ಜಿ.ಎಸ್.ಸಿ(ಸಕಾಲ), ಪೊಲೀಸ ಐ.ಟಿ ವಿಷಯದ ಕುರಿತು ಕಾರ್ಯಾಗಾರವನ್ನು ಮಾನ್ಯ ಉಪ ಪೊಲೀಸ ಆಯುಕ್ತರಾದ ಶ್ರೀ ಅಡ್ಡೂರು ಶ್ರೀನಿವಾಸುಲು,ಭಾ.ಪೊ.ಸೇ.ರವರು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಹಿರಿಯ ಪೊಲೀಸ ಅಧಿಕಾರಿಗಳು ಹಾಗೂ ನುರಿತ ಸಿಬ್ಬಂದಿಯವರಿಂದ ತರಬೇತಿ ನೀಡಲಾಯಿತು.
ಕಲಬುರಗಿ ನಗರ ಸಿ.ಸಿ.ಬಿ ಪೊಲೀಸರಿಂದ ಕಾರ್ಯಾಚರಣೆ
ಕಲಬುರಗಿ ನಗರದ ಸಿ.ಸಿ.ಬಿ ಪೊಲೀಸರಿಂದ ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳ ಬಂಧನ. ಕಲಬುರಗಿ ನಗರದ ರೋಜಾ ಪೊಲೀಸ ಠಾಣೆಯ ವ್ಯಾಪ್ತಿಯ ಸಂತ್ರಾಸವಾಡಿ ಹತ್ತಿರ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಬಂಧಿತರಿಂದ 1.5 kg ಕೆಜಿ ಒಣ ಗಾಂಜಾ ಹಾಗೂ 4 ಕೆಜಿ ಹಸಿ ಅಕ್ರಮ ಗಾಂಜಾ , 2500 ರೂಪಾಯಿ ನಗದು ಹಣ ಹಾಗೂ 1 ಬೈಕ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.
ಕಲಬುರಗಿ ನಗರ ಪೊಲೀಸರಿಂದ ಕಾನೂನು & ಸುವ್ಯವಸ್ಥೆ ಹಾಗೂ ಅಪರಾಧ ವಿಮರ್ಶನಾ ಸಭೆ
ದಿನಾಂಕ: 06-12-2021 ರಂದು ಮಾನ್ಯ ಶ್ರೀ. ಪ್ರವೀಣ್ ಸೂದ್, ಭಾ.ಪೊ.ಸೇ. ಮಹಾ ನಿರ್ದೇಶಕರು ಮತ್ತು ಆರಕ್ಷಕ ಮಹಾ ನಿರೀಕ್ಷಕರು ಕರ್ನಾಟಕ ರಾಜ್ಯ, ಬೆಂಗಳೂರು ರವರು ಕಲಬುರಗಿ ನಗರ ಮತ್ತು ಜಿಲ್ಲಾ ಘಟಕಕ್ಕೆ ಭೇಟಿ ನೀಡಿ ಕಲಬುರಗಿ ನಗರ ಮತ್ತು ಜಿಲ್ಲೆಯಲ್ಲಿನ ಕಾನೂನು & ಸುವ್ಯವಸ್ಥೆ ಹಾಗೂ ಅಪರಾಧ ವಿಮರ್ಶನಾ ಸಭೆಯನ್ನು ಕೈಗೊಂಡಿರುತ್ತಾರೆ. ಈ ಸಂದರ್ಭದಲ್ಲಿ ಶ್ರೀ. ಮನಿಷ ಖರ್ಬಿಕರ್,ಭಾ.ಪೊ.ಸೇ. ಪೊಲೀಸ್ ಮಹಾನಿರೀಕ್ಷಕರು, ಈಶಾನ್ಯ ವಲಯ ಮತ್ತು ಶ್ರೀ ಡಾ.ವೈ.ಎಸ್.ರವಿಕುಮಾರ, ಭಾ.ಪೊ.ಸೇ. […]
ಕಲಬುರಗಿ ನಗರ ಪೊಲೀಸ್ ವತಿಯಿಂದ ವಾರ್ಷಿಕ ಕ್ರೀಡಾಕೂಟದ ಉದ್ಘಾಟನ ಸಮಾರಂಭ
ಕಲಬುರಗಿ ನಗರದ ವಾರ್ಷಿಕ ಕ್ರೀಡಾಕೂಟದ ಉದ್ಘಾಟನ ಸಮಾರಂಭವನ್ನು ಮಾನ್ಯ ಶ್ರೀ ನಿರಂಜನ ವಿ.ನಿಷ್ಠಿ, ಉಪಕುಲಪತಿಗಳು ಶರಣಬಸವೇಶ್ವರ ವಿಶ್ವವಿದ್ಯಾಲಯ ಕಲಬುರಗಿ ರವರು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಶ್ರೀಮತಿ ವಿ.ವಿ.ಜ್ಯೋತ್ಸ್ನ, ಭಾ.ಆ.ಸೇ. ಜಿಲ್ಲಾಧಿಕಾರಿಗಳು ಕಲಬುರಗಿ , ಅಧ್ಯಕ್ಷತೆಯನ್ನು ಶ್ರೀ ಡಾ.ವೈ.ಎಸ್.ರವಿಕುಮಾರ, ಭಾ.ಪೊ.ಸೇ. ಪೊಲೀಸ ಆಯುಕ್ತರು ಕಲಬುರಗಿ ನಗರ ಹಾಗೂ ಶ್ರೀ ದಿಲೀಷ ಶಶಿ, ಭಾ.ಆ.ಸೇ ಮತ್ತು ಶ್ರೀ ಅಡ್ಡೂರು ಶ್ರೀನಿವಾಸುಲು, ಭಾ.ಪೊ.ಸೇ.ಉಪ ಪೊಲೀಸ ಆಯುಕ್ತರು ಕಲಬುರಗಿ ನಗರರವರು ಪಾರಿವಾಳ ಹಾರಿ ಬಿಡುವ ಮೂಲಕ […]
“ತಡೆ ಅರಿವು ನಡೆ”-ಕಲಬುರಗಿ ನಗರ ಪೊಲೀಸ್
ಕಲಬುರಗಿ ನಗರ ಪೊಲೀಸ್ ಆಯುಕ್ತಾಲಯದ ವತಿಯಿಂದ ಮಹಿಳೆಯರು ಮತ್ತು ಅಪ್ರಾಪ್ತ ಬಾಲಕಿಯರ ಮೇಲೆ ನಡೆಯುವ ಲೈಂಗಿಕ ಕಿರುಕುಳ ಹಾಗೂ ದೌರ್ಜನ್ಯ ವಿರುದ್ದ “ತಡೆ ಅರಿವು ನಡೆ” ಜಾಥಾ ನಡೆಸಲಾಯಿತು. ಉಪ ಪೊಲೀಸ ಆಯುಕ್ತರಾದ ಶ್ರೀ ಅಡ್ಡೂರು ಶ್ರೀನಿವಾಸುಲು,ಭಾ.ಪೊ.ಸೇ.ರವರು ಜಾಥಾಗೆ ಚಾಲನೆ ನೀಡಿದರು. ಕಲಬುರಗಿ ನಗರ ಪೊಲೀಸ ಆಯುಕ್ತಾಲಯದ ಎಲ್ಲ ಹಿರಿಯ ಕಿರಿಯ ಪೊಲೀಸ ಅಧಿಕಾರಿ ಸಿಬ್ಬಂದಿಯವರು ಜಾಥಾದಲ್ಲಿ ಪಾಲ್ಗೊಂಡಿದ್ದರು.
ಕಲಬುರಗಿ ನಗರ ಪೊಲೀಸರಿಂದ ಕಾರ್ಯಾಚರಣೆ ಕುಖ್ಯಾತ ಕೊಲೆಗಾರರ ಬಂಧನ
ಕಲಬುರಗಿ ನಗರದ ಅಶೋಕನಗರ ಪೊಲೀಸ ಠಾಣೆಯ ವ್ಯಾಪ್ತಿಯ ಕೇಂದ್ರ ಬಸ್ ನಿಲ್ದಾಣದಲ್ಲಿ ಹಾಡುಹಗಲೇ ಕೊಲೆ ಮಾಡಿದ್ದ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಅಶೋಕನಗರ ಠಾಣೆಯ ಇನ್ಸಪೇಕ್ಟರ ಪಂಡಿತ ಸಗರ ಮತ್ತು ರೌಡಿ ನಿಗ್ರಹದಳದ ಪಿ.ಎಸ್.ಐ ಬಸವರಾಜ ಮತ್ತು ಸಿ.ಇ.ಎನ್ ಠಾಣೆಯ ಪಿ.ಎಸ್.ಐ ವಾಹಿದ ಕೋತ್ವಾಲ ಮತ್ತು ಸಿಬ್ಬಂದಿಯವರಿಗೆ ಮಾನ್ಯ ಪೊಲೀಸ ಆಯುಕ್ತರು ಮೆಚ್ಚುಗೆಯನ್ನು ವ್ಯಕ್ತಪಡಿಸಿರುತ್ತಾರೆ.
ಸಂಚಾರ ಕಾನೂನು ಅರಿವು ಕಾರ್ಯಕ್ರಮ-ಕಲಬುರಗಿ ನಗರ ಪೊಲೀಸ್
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ನ್ಯಾಯವಾಧಿಗಳ ಸಂಘ, ಜಿಲ್ಲಾ ನ್ಯಾಯಾಲಯ ಕಲಬುರಗಿ ಹಾಗೂ ಪೊಲೀಸ ಆಯುಕ್ತಾಲಯ ಕಲಬುರಗಿ ವತಿಯಿಂದ ಕಲಬುರಗಿ ನಗರದ ಸರ್ದಾರ ವಲ್ಲಭಾಯಿ ವೃತ್ತದಲ್ಲಿ ಸಂಚಾರ ಕಾನೂನು ಅರಿವು ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಗೌರವಾನ್ವಿತ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀ.ಕೆ.ಸುಬ್ರಹ್ಮಣ್ಯ,ರವರು , ಕಲಬುರಗಿ ನಗರ ಪೊಲೀಸ್ ಆಯುಕ್ತರಾದ ಡಾ.ವೈ.ಎಸ್.ರವಿಕುಮಾರ,ಐಪಿಎಸ್, ಉಪ ಪೊಲೀಸ ಆಯುಕ್ತರಾದ ಶ್ರೀ.ಅಡ್ಡೂರು ಶ್ರೀನಿವಾಸುಲು, ಐಪಿಎಸ್ ರವರು ಮತ್ತು ಇತರ ಹಿರಿಯ ಕಿರಿಯ […]
ಕಲಬುರಗಿ ನಗರ ಪೊಲೀಸರಿಂದ ರೌಡಿ ಪರೇಡ್
ಕಲಬುರಗಿ ನಗರದ ಪೋಲಿಸ್ ಕಮಿಷನರ್ ಕಚೇರಿಯ ಆವರಣದಲ್ಲಿ ರೌಡಿಗಳ ಪರೇಡ್ ನಡೆಸಿದ ಕಮಿಷನರ್, ಕಲಬುರಗಿ ಸಿಟಿ ವ್ಯಾಪ್ತಿಯ ‘ಎ’ ಡಿವಿಷನ್ ನಾಲ್ಕು ಪೊಲೀಸ್ ಠಾಣೆಗಳ ವ್ಯಾಪ್ತಿಯ 100ಕ್ಕೂ ಅಧಿಕ ರೌಡಿಗಳ ಪರೇಡ್ ನಡೆಸಿ ರೌಡಿ ಪರೇಡ್‌ನಲ್ಲಿ ರೌಡಿಗಳಿಗೆ ಬಿಸಿ ಮುಟ್ಟಿಸಿದರು.ಅಲ್ಲದೇ ರೌಡಿಸಂ ಮಾಡೋದಕ್ಕೆ ಗುತ್ತಿಗೆ ಪಡೆದುಕೊಂಡಿದ್ದೀರಾ ಅಂತಾ ತರಾಟೆ ತೆಗೆದುಕೊಂಡರು. ಪಾಲಿಕೆ ಚುನಾವಣೆ ಸಂದರ್ಭದಲ್ಲಿ ಬಾಲ ಬಿಚ್ಚದೇ, ಸೈಲೆಂಟ್ ಆಗಿದ್ರೆ ಒಳ್ಳೆಯದು, ಸಮಾಜಘಾತುಕ ಕೆಲಸದಲ್ಲಿ ಭಾಗಿಯಾದ್ರೆ ಅಪರಾಧ ಕೃತ್ಯಗಳಲ್ಲಿ ಪಾಲ್ಗೊಂಡರೆ […]