ಕದ್ದ ಬೈಕ್ ಮಾರಲು ಹೋಗುತ್ತಿದ್ದ ದ್ವಿಚಕ್ರ ವಾಹನ ಚೋರರ ಸೆರೆ

John Prem
0 0
Read Time:2 Minute, 27 Second

ಕೊಡಗಿನ ವಿವಿಧ ಭಾಗಗಳಲ್ಲಿ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ವೀರಾಜಪೇಟೆ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.ಸಿದ್ದಾಪುರ ಗುಯ್ಯ ಗ್ರಾಮದ ನಿವಾಸಿ ಮೆಕ್ಯಾನಿಕ್ ಕೆಲಸ ಮಾಡುತ್ತಿದ್ದ ಎನ್.ಆರ್.ರಂಜಿತ್ (25) ಹಾಗೂ ಹೈಸ್ಕೂಲ್ ಪೈಸಾರಿ ನಿವಾಸಿ ಕೂಲಿ ಕಾರ್ಮಿಕ ಎಸ್.ಶರಣು (23) ಬಂಧಿತ ಆರೋಪಿಗಳು.

ಶನಿವಾರ ಬೆಳಗ್ಗೆ ಅಮ್ಮತ್ತಿ ಪಟ್ಟಣದಲ್ಲಿ ವೀರಾಜಪೇಟೆ ಗ್ರಾಮಾಂತರ ಪೊಲೀಸರು ವಾಹನಗಳನ್ನು ತಪಾಸಣೆ ಮಾಡುತ್ತಿದ್ದ ಸಂದರ್ಭ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ದಾಖಲೆಯೂ ಇಲ್ಲದೆ, ಸಮರ್ಪಕ ಉತ್ತರವನ್ನೂ ನೀಡದೆ ಇದ್ದಾಗ ವಿಚಾರಣೆಗೆ ಒಳಪಡಿಸಲಾಯಿತು.ತನಿಖೆ ವೇಳೆ ಸತ್ಯವನ್ನು ಬಾಯಿಬಿಟ್ಟ ಆರೋಪಿಗಳು ಜೂ.9 ರಂದು ಸಿದ್ದಾಪುರ ಬಳಿಯ ನೆಲ್ಯಹುದೀಕೇರಿಯಿಂದ ಕಳವು ಮಾಡಿದ್ದ ದ್ವಿಚಕ್ರ ವಾಹನವನ್ನು ವೀರಾಜಪೇಟೆಯಲ್ಲಿ ಮಾರಾಟ ಮಾಡಲು ತೆರಳುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ. ಅಲ್ಲದೆ ಪೊನ್ನಂಪೇಟೆ ವ್ಯಾಪ್ತಿಯಿಂದ ಮತ್ತೊಂದು ದ್ವಿಚಕ್ರ ವಾಹನವನ್ನು ಕಳ್ಳತನ ಮಾಡಿರುವುದಾಗಿ ಬಾಯಿ ಬಿಟ್ಟಿದ್ದಾರೆ.

ವಾಹನಗಳ ಗುರುತು ಪತ್ತೆಯಾಗದಂತೆ ಬಿಡಿಭಾಗಗಳನ್ನು ಅದಲು ಬದಲು ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ.ಇಬ್ಬರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದ್ದು, ವೀರಾಜಪೇಟೆ ಉಪವಿಭಾಗದ ಡಿವೈಎಸ್ಪಿ ಸಿ.ಟಿ.ಜಯಕುಮಾರ್ ಅವರ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಬಿ.ಎಸ್.ಶ್ರೀಧರ್ ಅವರ ನಿರ್ದೇಶನದಂತೆ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಸಿದ್ದಲಿಂಗ ಭೀ ಬಾಣಸೆ ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ತೀರ್ಥಕುಮಾರ್, ರಾಮಪ್ಪ, ಶ್ರೀಕಾಂತ್, ಪುರುಷೋತ್ತಮ ಹಾಗೂ ಚಾಲಕ ಸಂದೀಪ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯವನ್ನು ಶ್ಲಾಘಿಸಲಾಗಿದೆ.

ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,

This image has an empty alt attribute; its file name is John_prem.jpg

ಜೆ .ಜಾನ್ ಪ್ರೇಮ್

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Next Post

ರಾಷ್ಟ್ರೀಯ ಅಥ್ಲೆಟಿಕ್ ಕ್ರೀಡಾ ಕೋಟಾದಲ್ಲಿ ಸಾಧನೆ ತೋರಿದ ಕರ್ನಾಟಕ ಪೊಲೀಸ್

Source : Kendhooli ಕ್ರೀಡಾ ಕೋಟಾದಲ್ಲಿ ಸಾಧನ ಮಾಡಿದ ಕರ್ನಾಟಕ ಪೊಲೀಸ್ ,ಪಂಜಾಬ್ ನ ಪಾಟಿಯಾದಲ್ಲಿ ನಡೆದ 60ನೇ ಅಂತಾರಾಜ್ಯ ಹಿರಿಯರ ರಾಷ್ಟ್ರೀಯ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಕರ್ನಾಟಕ ರಾಜ್ಯ ಸಿ ಎ ರ್ ಉತ್ತರ ಹೆಗ್ಗಡೆ ನಗರ ಘಟಕದ ಪೊಲೀಸ್ ಕಾನ್ಸ್ಟೇಬಲ್ ಕುಮಾರಸ್ವಾಮಿ ಪುರುಷರ 800 ಮೀಟರ್ ಓಟದಲ್ಲಿ ಐದನೇ ಸ್ಥಾನ ಗಳಿಸಿದ್ದಾರೆ . ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ಪುರುಷರ 800 ಮೀಟರ್ ಓಟದಲ್ಲಿ 1ನಿಮಿಷ 51.86 ಸೆಕೆಂಡ್ ಗಳಲ್ಲಿ […]

Get News on Whatsapp

by send "Subscribe" to 7200024452
Close Bitnami banner
Bitnami