ಅಕ್ರಮ ಬೀಟಿಮರ ಪತ್ತೆ ಕೇರಳ ರಾಜ್ಯದ ಆರೋಪಿ ಬಂಧನ

John Prem
0 0
Read Time:2 Minute, 2 Second

ದಿನಾಂಕ 13-5-2021 ರಂದು ಬೆಳಗ್ಗೆ ವಿರಾಜಪೇಟೆ ಸಮೀಪದ ಕದನೂರು ಬಳಿ ಕೇರಳ ನೋಂದಣಿ ಸಂಖ್ಯೆಯ ಪಿಕಪ್ ವಾಹನ ಕೆಎಲ್-17 ಹೆಚ್ 3567ರಲ್ಲಿ ಕೇರಳ ರಾಜ್ಯದ ವ್ಯಕ್ತಿಯೋರ್ವ ಅಕ್ರಮವಾಗಿ ಬೀಟಿ ಮರದ ತುಂಡುಗಳನ್ನು ಕೇರಳ ರಾಜ್ಯಕ್ಕೆ ಸಾಗಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ವರ್ತಮಾನದ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ದಾಳಿ ಮಾಡಿ ಆರೋಪಿ ಪಿ.ಪಿ. ಅನಾಸ್, 36 ವರ್ಷ, ತಂದೆ ಹಸೈನಾರ್, ವಾಸ- ಪಾಲಕ್ ಪರಂಬು ಹೌಸ್, ಮಲಪರಂಬು ಜಿಲ್ಲೆ, ಕೇರಳ ರಾಜ್ಯ ಈತನಿಂದ ಅಂದಾಜು 2 ಲಕ್ಷ ಮೌಲ್ಯದ 5 ಬೀಟಿ ಮರದ ತುಂಡುಗಳನ್ನು ಹಾಗು ವಾಹನವನ್ನು ವಶಕ್ಕೆ ಪಡೆದಿರುತ್ತಾರೆ. ಬಂಧಿತನು ಕರಡ ಗ್ರಾಮದ ಪಿ. ಬೋಪಣ್ಣ ಎಂಬವರ ತೋಟದಿಂದ ಕೊಳಕೇರಿ ನಿವಾಸಿ ಆಪು ಎಂಬವನೊಂದಿಗೆ ಜೊತೆ ಸೇರಿ ಅಕ್ರಮವಾಗಿ ಬೀಟಿ ಮರಗಳನ್ನು ಕಟಾವು ಮಾಡಿ ಕೇರಳ ರಾಜ್ಯದ ಕೊಚ್ಚಿನ್ ಗೆ ಸಾಗಾಟ ಮಾಡುವುದಾಗಿ ವಿಚಾರಣೆಯಿಂದ ತಿಳಿದುಬಂದಿದ್ದು, ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ. ಕಾರ್ಯಾಚರಣೆಯು ವಿರಾಜಪೇಟೆ ಡಿವೈಎಸ್ಪಿ ಸಿ.ಟಿ. ಜಯಕುಮಾರ್ ಮತ್ತು ವಿರಾಜಪೇಟೆ ವೃತ್ತ ನಿರೀಕ್ಷಕರಾದ ಬಿ.ಎಸ್.ಶ್ರೀಧರ್ ರವರ ನೇತೃತ್ವದಲ್ಲಿ ನಡೆದಿದ್ದು ಕಾರ್ಯಾಚರಣೆಯಲ್ಲಿ ವಿರಾಜಪೇಟೆ ಗ್ರಾಮಾಂತರ ಠಾಣಾ ಪ್ರಭಾರ ಪಿಎಸ್ಐ ಹೆಚ್.ಎಸ್. ಬೋಜಪ್ಪ, ಎಎಸ್ಐ ಸಿ.ವಿ. ಶ್ರೀಧರ್, ಸಿಬ್ಬಂದಿಗಳಾದ ತೀರ್ಥಕುಮಾರ್, ನೆಹರುಕುಮಾರ್, ಸುಕುಮಾರ್, ರಾಮಣ್ಣ, ಪ್ರದೀಪ್ ಮತ್ತು ಕಾರ್ತಿಕ್ ರವರುಗಳು ಭಾಗಿಯಾಗಿದ್ದರು.

ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,

This image has an empty alt attribute; its file name is John_prem.jpg

ಜೆ .ಜಾನ್ ಪ್ರೇಮ್

737310 comments15 sharesLikeCommentShare

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Next Post

ಮೈಸೂರು ಆಶ್ರಮದ ವತಿಯಿಂದ ಮೆಡಿಕಲ್ ಕಿಟ್ ಮೈಸೂರು ಪೊಲೀಸರಿಗೆ ನೀಡಲಾಯಿತು

ಕೋವಿಡ್ 19 ವಿರುದ್ದದ ಈ‌ ಹೋರಾಟದಲ್ಲಿ ಮುಂಚೂಣಿಯಲ್ಲಿ ನಿಂತು ಕರ್ತವ್ಯ ನಿರ್ವಹಣೆ ಮಾಡುತ್ತಿರುವ ಪೊಲೀಸ್ ಅಧಿಕಾರಿ ಸಿಬ್ಬಂದಿಗಳಿಗಾಗಿ ಮೈಸೂರಿನ ಅವಧೂತ ದತ್ತ ಪೀಠಂ ಶ್ರೀ.ಗಣಪತಿ ಸಚ್ಚಿದಾನಂದ ಆಶ್ರಮ ವತಿಯಿಂದ ಮೆಡಿಕಲ್ ಕಿಟ್ ಅನ್ನು ನೀಡಿರುತ್ತಾರೆ . ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ. ಸಿ.ಬಿ.ರಿಷ್ಯಂತ್, ಐಪಿಎಸ್ ರವರು ಪೊಲೀಸ್ ಅಧಿಕಾರಿ ಸಿಬ್ಬಂದಿಗಳಿಗಾಗಿ ಮೆಡಿಕಲ್ ಕಿಟ್ ಅನ್ನು ನೀಡಿದ ಅವಧೂತ ದತ್ತ ಪೀಠಂನ ಶ್ರೀ.ಗಣಪತಿ ಸಚ್ಚಿದಾನಂದ ಸ್ವಾಮಿಗಳಿಗೆ ಗೌರವ ಪೂರ್ವಕ‌ ಧನ್ಯವಾದ ತಿಳಿಸಿರುತ್ತಾರೆ.ಅಲ್ಲದೆ […]

Get News on Whatsapp

by send "Subscribe" to 7200024452
Close Bitnami banner
Bitnami