ಅಂತರರಾಜ್ಯ ಗಡಿಯಲ್ಲಿ ಸುಗಮ ಕಾರ್ಯಾಚರಣೆಗಾಗಿ ಕೋವಿಡ್ ನಿಯಮ ರೂಪಿಸಿ: ಭಾಸ್ಕರ್ ರಾವ್

John Prem 9448190523
0 0
Read Time:2 Minute, 24 Second

ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಅಂತರರಾಜ್ಯ ಗಡಿ ಭಾಗದಲ್ಲಿ ಸುಗಮ ಕಾರ್ಯಾಚರಣೆಗಾಗಿ ಸೂಕ್ತ ನಿಯಮ ರೂಪಿಸುವಂತೆ ಜಿಲ್ಲಾಡಳಿತಕ್ಕೆ ರೈಲ್ವೆ ಎಡಿಜಿಪಿ ಭಾಸ್ಕರ್ ರಾವ್ ಸೂಚಿಸಿದ್ದಾರೆ.

ವಿಜಯಪುರ ಮತ್ತು ಬೆಳಗಾವಿಗೆ ಭೇಟಿ ನೀಡಿದ್ದ ಅವರು ಡಿಸಿ ಪಿ ಸುನೀಲ್ ಕುಮಾರ್, ಜಿಲ್ಲಾ ಪಂಚಾಯತ್ ಸಿಇಓ ಗೋವಿಂದ ರೆಡ್ಡಿ, ಮತ್ತು ಎಸ್ ಪಿ ಅನುಪಮ್ ಅಗರ್ ವಾಲ್ ಅವರ ಜೊತೆ ಚರ್ಚೆ ನಡೆಸಿದರು, “ಕರ್ನಾಟಕದ ಗಡಿ ಪ್ರದೇಶಗಳು ಮಹಾರಾಷ್ಟ್ರಕ್ಕಿಂತ ಹೆಚ್ಚು ಅಭಿವೃದ್ಧಿ ಹೊಂದಿವೆ ಎಂದು ರಾವ್ ತಿಳಿಸಿದ್ದಾರೆ.

ಬೇರೆ ರಾಜ್ಯಗಳ ಜನರು ಆರೋಗ್ಯ ಸೇವೆಗಾಗಿ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ, ಈ ವೇಳೆ ಅನಧಿಕೃತ ಪ್ರವೇಶಕ್ಕಾಗಿ ಘರ್ಷಣೆ ನಡೆಯುತ್ತವೆ, ಹೀಗಾಗಿ ಗಡಿ ನಿಯಮಾವಳಿಗಳ ಪಟ್ಟಿಯನ್ನು ಸಿದ್ಧಪಡಿಸಿ ಗಡಿಯ ಎರಡೂ ಬದಿ ಜನರಿಗೆ ವಿತರಿಸಲು ನಾನು ಜಿಲ್ಲಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ ಎಂದು ತಿಳಿಸಿದ್ದಾರೆ.

ಮಹಾರಾಷ್ಟ್ರದ ಜನರು ಬರುವುದಕ್ಕೆ ನಮಗೆ ಯಾವುದೇ ಆಕ್ಷೇಪವಿಲ್ಲ, ಆದರೆ ಅವರು ಕೆಲವು ಪ್ರೋಟೋಕಾಲ್‌ಗಳನ್ನು ಅನುಸರಿಸಬೇಕು ಎಂದು ತಿಳಿಸಿದ್ದಾರೆ.

ಹಾಸಿಗೆ ನಿರ್ವಹಣೆ ಮತ್ತು ಆಮ್ಲಜನಕ ಮತ್ತು ರೆಮ್‌ಡೆಸಿವಿರ್ ಪೂರೈಕೆಗಾಗಿ ಪ್ರತ್ಯೇಕ ನೋಡಲ್ ಅಧಿಕಾರಿಗಳನ್ನು ನೇಮಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ.

ಇದನ್ನು ತಾಲ್ಲೂಕು ಮಟ್ಟಕ್ಕೆ ಕೊಂಡೊಯ್ಯುವಂತೆ ಜಿಲ್ಲಾ ಮತ್ತು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಇದು ನಮಗೆ ಪಾರದರ್ಶಕತೆ ಸಾಧಿಸಲು ಮತ್ತು ಸರ್ಕಾರದ ಮಾರ್ಗಸೂಚಿಗಳನ್ನು ತಳಮಟ್ಟದಲ್ಲಿ ಕಾರ್ಯಗತಗೊಳಿಸಲು ಸಹಾಯ ಮಾಡುತ್ತದೆ ಎೆದು ಹೇಳಿದ್ದಾರೆ.

ಕೋವಿಡ್ ಓಡಿಸಲು ಸರ್ಕಾರದ ಜೊತೆ ಜನ ಕೈ ಜೋಡಿಸಬೇಕು, ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು ಕಡ್ಡಾಯವಾಗಿ ಪಾಲಿಸಬೇಕು ಎಂದು ಹೇಳಿದ್ದಾರೆ.

ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,

This image has an empty alt attribute; its file name is John_prem.jpg

ಜೆ .ಜಾನ್ ಪ್ರೇಮ್

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Next Post

ದಾವಣಗೆರೆ ಜಿಲ್ಲಾ ಪೊಲೀಸರಿಂದ ಮಾಸ್ ಜಾಗೃತಿ ಅಭಿಯಾನ

ದಿನಾಂಕ: 27-04-2021 ರಂದು ಶ್ರೀ ನರಸಿಂಹ ವಿ. ತಾಮ್ರಧ್ಜಜ ಡಿವೈ.ಎಸ್.ಪಿ ಗ್ರಾಮಾಂತರ ಉಪ-ವಿಭಾಗ ದಾವಣಗೆರೆ ರವರ ನೇತೃತ್ವದಲ್ಲಿ ದಲ್ಲಿ ಹರಿಹರ ನಗರದ ಎಸ್.ಸಿ ಎಸ್ಸ್.ಟಿ ಕಾಲೋನಿಗಳಿಗೆ ಭೇಟಿ ನೀಡಿ ಅವರ ಕುಂದು ಕೊರತೆಗಳನ್ನು ವಿಚಾರಿಸಲಾಯಿತು. ನಂತರ ಹರಿಹರ ನಗರದಲ್ಲಿ “ಮಾಸ್ಕ್ ಜಾಗೃತಿ ಅಭಿಯಾನ” ಜಾಥಾವನ್ನು ಹಮ್ಮಿಕೊಂಡಿದ್ದು ನಗರದ ಎಂ.ಜಿ ಸರ್ಕಲ್, ಬೊಂಗಾಳೆ ಸರ್ಕಲ್, ಟೆಂಪಲ್ ರೋಡ್, ಶಿವಮೊಗ್ಗ ಸರ್ಕಲ್, ಹೀಗೆ ನಗರದ ಮುಂತಾದ ಬೀದಿಗಳಲ್ಲಿ ಜಾಥಾ ನಡೆಸಿ ಮಾಸ್ಕ್ ಧರಿಸದೆ […]

Get News on Whatsapp

by send "Subscribe" to 7200024452
Close Bitnami banner
Bitnami