ಮೂವರು ದರೋಡೆಕೋರರ ಬಂಧನ

Admin
0 0
Read Time:1 Minute, 37 Second

ಇತ್ತೀಚೆಗೆ ರಾಜಾಪುರ ಕ್ರಾಸ್ ಹತ್ತಿರ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಹೀರಾಪುರ ಕ್ರಾಸ್ ನ ರಮೇಶ ಪರಶುರಾಮ ಬಂದರವಾಡ, ಶ್ರೇಯಸ್ ಮಲ್ಲಿನಾಥ ಬಿಲಗುಂದಿ ಮತ್ತು ಹೀರಾ ನಗರದ ಅಭಿಷೇಕ ರಾಜಕುಮಾರ ಮೂಲಭಾರತಿ ಎಂಬುವವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಬೈಕ್ ಮೇಲೆ ಬಂದ ಮೂವರು ರಾಜಾಪುರ ಕ್ರಾಸ್ ಹತ್ತಿರ ಶರಣು ಲಿಂಗಪ್ಪ ಅಣಕಲ್ ಅವರೊಂದಿಗೆ ಪೆಟ್ರೋಲ್ ಹಾಕುವ ವಿಷಯದಲ್ಲಿ ಜಗಳ ತೆಗೆದು ಹಲ್ಲೆ ಅವರ ಮೇಲೆ ಹಲ್ಲೆ ನಡೆಸಿ ಅವರ ಬಳಿ ಇದ್ದ 63,200 ರೂಪಾಯಿ ನಗದು ದೋಚಿಕೊಂಡು ಹೋಗಿದ್ದರು. ಈ ಸಂಬಂಧ ಶರಣು ಅಣಕಲ್ ಅವರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.
ಈ ದೂರಿನ ಅನ್ವಯ ನಗರ ಪೊಲೀಸ್ ಆಯುಕ್ತ ಎನ್.ಸತೀಷ್ ಕುಮಾರ್, ಉಪ ಪೊಲೀಸ್ ಆಯುಕ್ತ ಡಿ.ಕಿಶೋರಬಾಬು, ಪೊಲೀಸ್ ಉಪ ಆಯುಕ್ತ ಶ್ರೀಕಾಂತ ಕಟ್ಟಿಮನಿ (ಅಪರಾಧ ಮತ್ತು ಸಂಚಾರ) ಅವರ ಮಾರ್ಗದರ್ಶನದಲ್ಲಿ “ಸಿ” ಉಪ ವಿಭಾಗದ ಎಸಿಪಿ ಜೆ.ಎಚ್.ಇನಾಮದಾರ, ಗ್ರಾಮೀಣ ಪೊಲೀಸ್ ಠಾಣೆ ಇನ್ಸಪೆಕ್ಟರ್ ಭಾಸು ಚವ್ಹಾಣ ಅವರ ನೇತೃತ್ವದಲ್ಲಿ ರಚಿಸಿದ ತಂಡ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಲ್ಲಿ ಯಶಸ್ವಿಯಾಗಿದೆ.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published.

Next Post

Police Day

Get News on Whatsapp

by send "Subscribe" to 7200024452
Close Bitnami banner
Bitnami