ವಿರಾಜಪೇಟೆ ಪೊಲೀಸರಿಂದ ಯಶಸ್ವಿ ಕಾರ್ಯಾಚರಣೆ-ಇಬ್ಬರು ಆರೋಪಿಗಳ ಬಂಧನ

John Prem 9448190523
0 0
Read Time:2 Minute, 26 Second

ಲಕ್ಷಾಂತರ ರೂಪಾಯಿ ಮೌಲ್ಯದ ಹಣ ಕಳವು ಮಾಡಿದ ಪ್ರಕರಣವೊಂದರಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ವಿರಾಜಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ. ದಿನಾಂಕ 04/04/2021ರಂದು ವಿರಾಜಪೇಟೆ ಸಮೀಪದ ಅರಮೇರಿ ಗ್ರಾಮದ ನಿವಾಸಿ ಪೊಯ್ಯೇಟಿರ ನಂದ ಎಂಬವರ ಮನೆಯಲ್ಲಿ ಯಾರೂ ಇಲ್ಲದೇ ಇದ್ದ ಸಮಯದಲ್ಲಿ ರಾತ್ರಿ ವೇಳೆ ಯಾರೋ ಕಳ್ಳರು ಮನೆಯ ಬಾಗಿಲಿನ ಬೀಗ ಮುರಿದು ಒಳ ಪ್ರವೇಶಿಸಿ ಮನೆಯೊಳಗಡೆ ಕೊಠಡಿಯ ಕಪಾಟಿನಲ್ಲಿದ್ದ ಸುಮಾರು ರೂ. 3,67,000/- ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿರುವ ಬಗ್ಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಕೈಗೊಳ್ಳಲಾಗಿತ್ತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾರವರ ಮಾರ್ಗದರ್ಶನದಂತೆ ವಿರಾಜಪೇಟೆ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಸಿ.ಟಿ.ಜಯಕುಮಾರ್ರವರ ನಿರ್ದೇಶನದಲ್ಲಿ ತನಿಖೆ ಕೈಗೊಂಡ ವಿರಾಜಪೇಟೆ ವೃತ್ತ ನಿರೀಕ್ಷಕ ಬಿ.ಎಸ್.ಶ್ರೀಧರ್ರವರ ನೇತೃತ್ವದ ಅಪರಾಧ ಪತ್ತೆ ತಂಡವು ಕಳವು ಪ್ರಕರಣವನ್ನು ಭೇದಿಸಿ ಆರೋಪಿಗಳಾದ ಅರಮೇರಿ ಗ್ರಾಮದ ನಿವಾಸಿ ನಟೇಶ ಹಾಗೂ ಮೈಸೂರು ಜಿಲ್ಲೆಯ ಹುಣಸೂರಿನ ಆಜಾದ್ ನಗರದ ನಿವಾಸಿ ಅಫ್ಸರ್ ಎಂಬವರನ್ನು ಬಂಧಿಸಿ ಅವರಿಂದ ಕಳವು ಮಾಡಲಾದ ರೂ.3,67,000/- ಮೌಲ್ಯದ ಚಿನ್ನಾಭರಣ, ರೂ.29,250/- ನಹಗದು ಹಾಗೂ ಕೃತ್ಯಕ್ಕೆ ಉಪಯೋಗಿಸಿದ್ದಾರೆನ್ನಲಾದ ಒಂದು ಮೊಬೈಲ್ ಫೋನ್ ಅನ್ನು ವಶಪಡಿಸಿಕೊಂಡಿದ್ದು ಾರೋಪಿಗಳಿಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿರುತ್ತದೆ.ಅಪರಾಧ ಪತ್ತೆ ಕಾರ್ಯಾಚರಣೆಯಲ್ಲಿ ವಿರಾಜಪೇಟೆ ಗ್ರಾಮಾಂತರ ಠಾಣೆಯ ಪಿಎಸ್ಐ ಸಿದ್ದಲಿಂಗ ಬಾನಸೆ, ಪಿಎಸ್ಐ ಹೆಚ್.ಎಸ್.ಬೋಜಪ್ಪ, ಎಎಸ್ಐ ಶ್ರೀಧರ್ ಮತ್ತು ಸಿಬ್ಬಂದಿಗಳಾದ ತೀರ್ಥ ಕುಮಾರ್, ರಾಮಪ್ಪ, ರವಿ, ನೆಹರು, ಮುಸ್ತಫಾ, ಚಂದ್ರಶೇಖರ್, ಪ್ರದೀಪ್, ಈರಪ್ಪ ಮತ್ತು ಸಿಡಿಆರ್ ವಿಭಾಗದ ರಾಜೇಶ್, ಗಿರೀಶ್ ಮುಂತಾದವರು ಪಾಲ್ಗೊಂಡಿದ್ದರು.

ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,

This image has an empty alt attribute; its file name is John_prem.jpg

ಜೆ .ಜಾನ್ ಪ್ರೇಮ್

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Next Post

ಮಡಿವಾಳ ಠಾಣಾ ವತಿಯಿಂದ ನೈಟ್ ಕರ್ಫ್ಯೂ ಬಗ್ಗೆ ಜಾಗೃತಿ ಸಭೆ

ರಾಜ್ಯದಲ್ಲಿ ಕೋವಿಡ್ ಸೋಂಕು ಹೆಚ್ಚಳ ಹಿನ್ನೆಲೆ ಬೆಂಗಳೂರು ನಗರದಲ್ಲಿ ಏ.10 ರಿಂದ‌ 20ರ ವರೆಗೆ ರಾತ್ರಿ 10 ರಿಂದ ಬೆಳಿಗ್ಗೆ 5 ಗಂಟೆ ವರೆಗೆ ರಾತ್ರಿ ಕರ್ಫ್ಯೂ ವಿಧಿಸಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ ಆದೇಶ ಮೇ ತಿಂಗಳ ಮೊದಲ ವಾರದಲ್ಲಿ ರಾಜ್ಯದಲ್ಲಿ  ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗಲಿದ್ದು, ಮೇ ಅಂತ್ಯದಲ್ಲಿ ಕಡಿಮೆಯಾಗಲಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.ಇದಕ್ಕೆ ಪೂರಕವಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲಾಗಿದೆ ಎಂದು ಆರೋಗ್ಯ […]

Get News on Whatsapp

by send "Subscribe" to 7200024452
Close Bitnami banner
Bitnami