ಕಲಬುರ್ಗಿ ಜಿಲ್ಲಾ ಪೊಲೀಸರಿಂದ ಐವರ ಹಂತಕರ ಬಂಧನ

John Prem
0 0
Read Time:1 Minute, 39 Second

ಮದುವೆಗೆ ಹುಡುಗಿ ತೋರಿಸುವುದಾಗಿ ನಂಬಿಸಿ ವ್ಯಕ್ತಿಯೋರ್ವನನ್ನು ಮಹಾರಾಷ್ಟ್ರದ ಅಕ್ಕಲಕೋಟ್‌ಗೆ ಕರೆದುಕೊಂಡು ಹೋಗಿ ದೇಹವನ್ನು ಎರಡು ಭಾಗವಾಗಿ ಕತ್ತರಿಸಿ ಬರ್ಬರ ಕೊಲೆಗೈದಿದ್ದಲ್ಲದೆ, ಸಾಕ್ಷ್ಯ ನಾಶ ಮಾಡಲು ಯತ್ನಿಸಿದ ಐವರು ಆರೋಪಿಗಳನ್ನು ಮಾಧನ ಹಿಪ್ಪರಗಾ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಹಿರೋಳ್ಳಿ ಗ್ರಾಮದ ನಿವಾಸಿಗಳಾದ ಮಲ್ಲಿನಾಥ್, ಬಸವರಾಜ, ಹಣಮಂತ ಬೆಳ್ಳಿಕಟ್ಟಿ, ಗಾಂಧರಬಾಯಿ ತೋರಣಗಿ ಹಾಗೂ ನಾಗಮ್ಮಾ ಬಂಧಿತ ಆರೋಪಿಗಳು. ಮಾ. 29ರಂದು ರಾತ್ರಿ ವೇಳೆ ನಾಗಪ್ಪ ವಾಡೇದ್ ಎಂಬಾತನ ಕೊಲೆ ನಡೆದಿತ್ತು. ಕೊಲೆಯಾದ ವ್ಯಕ್ತಿಗೆ ಮದುವೆಗಾಗಿ ಹುಡುಗಿ ತೋರಿಸುವ ನೆಪವೊಡ್ಡಿ ಹಿರೋಳ್ಳಿ ಗ್ರಾಮದಿಂದ ಮಹಾರಾಷ್ಟ್ರದ ಅಕ್ಕಲಕೋಟ್‌ಗೆ ಕರೆದುಕೊಂಡು ಹೋಗಿ ಚಾಕುವಿನಿಂದ ಇರಿದು,ಕುರುಪಿಯಿಂದ ಕೊಯ್ದು, ಕೊಡಲಿಯಿಂದ ದೇಹವನ್ನು ಎರಡು ಭಾಗವಾಗಿ ಕತ್ತರಿಸಲಾಗಿತ್ತು. ಬಳಿಕ ಸಾಕ್ಷ್ಯ ನಾಶಮಾಡುವ ಉದ್ದೇಶದಿಂದ ಶವದ ತುಂಡುಗಳನ್ನು ಚೀಲಗಳಲ್ಲಿ ತುಂಬಿ ಹೊಲದ ಕೊಳವೆಬಾವಿಯಲ್ಲಿ ಬಿಸಾಡಿದ್ದಾಗಿ ಪೊಲೀಸರ ತನಿಖೆಯಲ್ಲಿ ಆರೋಪಿಗಳು ಬಾಯ್ಬಿಟ್ಟಿದ್ದಾರೆ. ಹಳೇ ವೈಷ್ಯಮ್ಯದ ಹಿನ್ನೆಲೆ ಕೊಲೆ ನಡೆದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,

This image has an empty alt attribute; its file name is John_prem.jpg

ಜೆ .ಜಾನ್ ಪ್ರೇಮ್

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Next Post

ಕೊಡಗು ಜಿಲ್ಲಾ ಪೊಲೀಸರಿಗೆ ಅಭಿನಂದನೆಗಳು

ಕರ್ನಾಟಕ ಪೊಲೀಸ್ ಅಕಾಡೆಮಿ ಮೈಸೂರಿನಲ್ಲಿ ಇಂದು ನಡೆದ 44ನೇ ತಂಡದ ಆರಕ್ಷಕ ಉಪ ನಿರೀಕ್ಷಕರು (ಸಿವಿಲ್ ಮತ್ತು ಕೆಎಸ್‌ಐಎಸ್‌ಎಫ್) ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ಸಮಾರಂಭದಲ್ಲಿ ತರಬೇತಿ ಅವಧಿಯಲ್ಲಿ ನೀಡುವ ಸರ್ವೋತ್ತಮ ಪ್ರಶಿಕ್ಷಣಾರ್ಥಿ ಪ್ರಶಸ್ತಿಯನ್ನು ಕೊಡಗು ಮೂಲದ ಚಿಂತನ್ ಕೆ ಆರ್ (ಪ್ರೊಬೆಷನರಿ ಪಿಎಸ್‌ಐ) ಪಡೆದುಕೊಂಡಿದ್ದಾರೆ. ಮುಖ್ಯಮಂತ್ರಿಗಳ‌ ಟ್ರೋಫಿ, ಗೃಹಮಂತ್ರಿಗಳ ಖಡ್ಗ, ಡಿಜಿ ಐಜಿಪಿ ರವರ ಬೇಟನ್, ಮತ್ತು ನಿವೃತ್ತ ಡಿಜಿಪಿ ಗರುಡಾಚಾರ್ ಅವರ 10 ಸಾವಿರ ನಗದು ಬಹುಮಾನ […]

Get News on Whatsapp

by send "Subscribe" to 7200024452
Close Bitnami banner
Bitnami