ವಿಜಾಪುರ ಜಿಲ್ಲಾ ಪೊಲೀಸರಿಂದ ಯಶಸ್ವಿ ಕಾರ್ಯಾಚರಣೆ .ಇನ್ಸ್ ಪೆಕ್ಟರ್ ರವೀಂದ್ರ ಮತ್ತು ಇನ್ಸ್ ಪೆಕ್ಟರ್ ಸಂಗಮೇಶ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮನೆ ಕಳ್ಳತನ ಮಾಡುತ್ತಿದ್ದ ಹಲವರನ್ನು ಬಂಧಿಸಿ ಯಶಸ್ವಿಯಾಗಿದ್ದಾರೆ .2017 ,2020 ಮತ್ತು 2021ರಲ್ಲಿ ನಡೆದ 10 ಕ್ಕೂ ಹೆಚ್ಚು ಪ್ರಕರಣಗಳನ್ನು ಪತ್ತೆ ಹಚ್ಚಲು ಸಾಧ್ಯವಾಯಿತು .ಚೇತರಿಸಿಕೊಂಡ ಚಿನ್ನದ ಆಭರಣಗಳ ಮೌಲ್ಯ ರೂ 15,00,000/- ಅದರಲ್ಲಿ 200 ಗ್ರಾಂ ಚಿನ್ನ ಮತ್ತು 210 ಗ್ರಾಂ ಬೆಳ್ಳಿ ಸೇರಿದೆ.
2020ನೇ ಸಾಲಿನ ಮೈಸೂರು ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟಗಳಿಗೆ ಅಂತರಾಷ್ಟ್ರೀಯ ಕಬ್ಬಡ್ಡಿ ಆಟಗಾರ್ತಿ, ಜಿಲ್ಲಾ ಮಹಿಳಾ ಪೊಲೀಸ್ ಠಾಣೆಯ ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ಶ್ರೀಮತಿ. ಸುಷ್ಮಿತಾ ಪವಾರ್. ಓ ರವರು ಜ್ಯೋತಿನಗರದ ಡಿ.ಎ.ಆರ್ ಮೈದಾನದಲ್ಲಿಂದು ಚಾಲನೆ ನೀಡಿದರು.ಕ್ರೀಡಾ ತಂಡಗಳಿಂದ ಗೌರವ ವಂದನೆ ಸ್ವೀಕರಿಸಿ ವಿಜೇತ ಕ್ರೀಡಾಪಟುಗಳಿಗೆ ಪದಕ ತೊಡಿಸಿದರು.ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ. ಸಿ.ಬಿ.ರಿಷ್ಯಂತ್, ಐಪಿಎಸ್ ರವರು ಕ್ರೀಡಾಕೂಟದ ಉದ್ಘಾಟಕರನ್ನು ಬರಮಾಡಿಕೊಂಡರು. ಅಪರ ಪೊಲೀಸ್ ಅಧೀಕ್ಷಕರಾದ ಶ್ರೀ. ಆರ್.ಶಿವಕುಮಾರ್ ರವರು […]