ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಕಾರ್ಯಾಚರಣೆ

0 0
Read Time:2 Minute, 40 Second

ದಿನಾಂಕ 27/02/2021 ರಂದು ಶ್ರೀಮತಿ ಸರೋಜಮ್ಮ ಕೋಂ ಬಿ. ಎಸ್. ಚಂದ್ರೇಗೌಡ ಎಂಬುವರು ಚಿಕ್ಕಮಗಳೂರು ನಗರದ ಬೈಪಾಸ್ ರಸ್ತೆಯ ಕಲ್ಯಾಣನಗರದ ತಮ್ಮ ಮನೆಯಲ್ಲಿ ಒಂಟಿಯಾಗಿ ಅಡಿಗೆ ಮನೆಯಲ್ಲಿದ್ದಾಗ ಇಬ್ಬರು ಅಪರಿಚಿತರು ಹಿಂದಿನಿಂದ ಬಂದು ಬಾಯನ್ನು ಮುಚ್ಚಿ ನಂತರ ಕೈಕಾಲುಗಳನ್ನು ಕಟ್ಟಿ ಚಾಕುವನ್ನು ತೋರಿಸಿ ಕೊಲ್ಲುವುದಾಗಿ ಬೆದರಿಸಿ ಬೀರುವುನಲ್ಲಿದ್ದ ಹಣ ಮತ್ತು ಒಡವೆಗಳನ್ನು ದೋಚಿಕೊಂಡು ಮೋಟಾರ್ ಸೈಕಲ್ ನಲ್ಲಿ ಪರಾರಿಯಾಗುತ್ತಿದ್ದ ಸಂದರ್ಭದಲ್ಲಿ ಸದರಿ ಸ್ಥಳಕ್ಕೆ ಅಗ್ನಿಶಾಮಕ ವಾಹನದಲ್ಲಿ ಬಂದ ನೀವು, ಪರಾರಿಯಾಗುತ್ತಿದ್ದ ಆರೋಪಿಗಳನ್ನು ಕಂಡ ತಕ್ಷಣ ಕಾರ್ಯಪ್ರವೃತ್ತರಾಗಿ ಅಗ್ನಿಶಾಮಕ ವಾಹನವನ್ನು ಆರೋಪಿಗಳ ಮೋಟಾರ್ ಸೈಕಲ್ ಗೆ ಅಡ್ಡಗಟ್ಟಿದ್ದರಿಂದ ಮೋಟಾರ್ ಸೈಕಲ್ ಕೆಳಗೆ ಬಿದ್ದಿರುತ್ತದೆ.

ಇದರಿಂದ ಗಾಬರಿಗೊಂಡ ಆರೋಪಿಗಳು ಸ್ಥಳದಲ್ಲಿಯೇ ಮೋಟಾರ್ ಸೈಕಲ್ ನ್ನು ಬಿಟ್ಟು ಓಡಿ ಹೋಗಲು ಪ್ರಯತ್ನಿಸಿದಾಗ ಅಲ್ಲಿದ್ದ ಸಾರ್ವಜನಿಕರು ಅವರುಗಳನ್ನು ಗುರುತಿಸಿ ವೀಡಿಯೋವನ್ನು ತೆಗೆದಿರುತ್ತಾರೆ. ಇದರಿಂದ ನಂತರ ಆರೋಪಿಗಳನ್ನು ಪತ್ತೆ ಹಚ್ಚಿ ವಶಕ್ಕೆ ತೆಗೆದುಕೊಳ್ಳಲು ಪೊಲೀಸರಿಗೆ ಬಹಳ ಸಹಾಯವಾಗಿರುತ್ತದೆ. ಹಾಗೂ ಸದರಿ ಪ್ರಕರಣದ ತನಿಖೆಯಲ್ಲಿಯೂ ಸಹ ಸಹಾಯಕವಾಗುತ್ತದೆ. ಈ ನಿಮ್ಮ ಅಪ್ರತಿಮ ಕಾರ್ಯವು ಸಾರ್ವಜನಿಕರಲ್ಲಿ ಪೊಲೀಸ್ ಇಲಾಖೆಗೆ ಸಹಾಯ ಮಾಡಲು ಉತ್ತೇಜನೆ ನೀಡಿ ಸ್ಪೂರ್ತಿದಾಯಕವಾಗಿರುತ್ತದೆ. ಈ ನಿಮ್ಮ ಕಾರ್ಯಕ್ಕೆ ನಾನು ವೈಯಕ್ತಿಕವಾಗಿ ಮತ್ತು ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಘಟಕದ ವತಿಯಿಂದ ಧನ್ಯವಾದಗಳನ್ನು ತಿಳಿಸುತ್ತೇನೆ. ಇಂತಹ ತುರ್ತು ಸಂದರ್ಭದಲ್ಲಿ ನೀವು ತ್ವರಿತವಾಗಿ ತೋರಿದ ಸಮಯಪ್ರಜ್ಞೆ ಹಾಗೂ ಪ್ರದರ್ಶಿಸಿದ ಅಪ್ರತಿಮ ಧೈರ್ಯವನ್ನು ಪರಿಗಣಿಸಿ, ನಿಮಗೆ ಈ ಪ್ರಶಂಸನಾ ಪತ್ರವನ್ನು ನೀಡಲಾಗಿದೆ. ಮುಂದಿನ ದಿನಗಳಲ್ಲಿಯೂ ಸಹ ಇದೇ ರೀತಿಯಾಗಿ ಪೊಲೀಸ್ ಇಲಾಖೆಗೆ ಸಹಕಾರ ನೀಡುತ್ತೀರೆಂದು ಹಾಗೂ ಇದೇ ರೀತಿಯಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತೀರೆಂದು ಆಶಿಸುತ್ತೇನೆ.:- ಪೊಲೀಸ್ ಅಧೀಕ್ಷಕರು ಚಿಕ್ಕಮಗಳೂರು ಜಿಲ್ಲೆ.

ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ ,

ಶ್ರೀ .ಜಾನ್ ಪ್ರೇಮ್ .

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Next Post

ವಿಜಯಪುರ ಜಿಲ್ಲಾ ಪೊಲೀಸರಿಂದ ಕಾರ್ಯಾಚರಣೆ

ವಿಜಾಪುರ ಜಿಲ್ಲಾ ಪೊಲೀಸರಿಂದ ಯಶಸ್ವಿ ಕಾರ್ಯಾಚರಣೆ .ಇನ್ಸ್ ಪೆಕ್ಟರ್ ರವೀಂದ್ರ ಮತ್ತು ಇನ್ಸ್ ಪೆಕ್ಟರ್ ಸಂಗಮೇಶ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮನೆ ಕಳ್ಳತನ ಮಾಡುತ್ತಿದ್ದ ಹಲವರನ್ನು ಬಂಧಿಸಿ ಯಶಸ್ವಿಯಾಗಿದ್ದಾರೆ .2017 ,2020 ಮತ್ತು 2021ರಲ್ಲಿ ನಡೆದ 10 ಕ್ಕೂ ಹೆಚ್ಚು ಪ್ರಕರಣಗಳನ್ನು ಪತ್ತೆ ಹಚ್ಚಲು ಸಾಧ್ಯವಾಯಿತು .ಚೇತರಿಸಿಕೊಂಡ ಚಿನ್ನದ ಆಭರಣಗಳ ಮೌಲ್ಯ ರೂ 15,00,000/- ಅದರಲ್ಲಿ 200 ಗ್ರಾಂ ಚಿನ್ನ ಮತ್ತು 210 ಗ್ರಾಂ ಬೆಳ್ಳಿ ಸೇರಿದೆ. ನಮ್ಮ ಮುಖ್ಯ […]

Get News on Whatsapp

by send "Subscribe" to 7200024452
Close Bitnami banner
Bitnami