32 ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಇಂದು ಆಲ್ದೂರು ಪಟ್ಟಣದಲ್ಲಿ ವಿಭಿನ್ನವಾಗಿ ರಸ್ತೆ ಸಂಚಾರ ಸುರಕ್ಷತೆ ಕುರಿತು ತಿಳುವಳಿಕೆ ಮೂಡಿಸಿವುದರ ಜೊತೆಗೆ ಹೆಲ್ಮೆಟ್ ರಹಿತ ಚಾಲನೆ ಮಾಡುತ್ತಿದ್ದ ದ್ವಿಚಕ್ರ ವಾಹನ ಸವಾರರಿಗೆ,ಅಪಘಾತ ಗಳ ಬಗ್ಗೆ ಜಾಗೃತಿಯನ್ನು ಮೂಡಿಸಿ, ರಿಯಾಯಿತಿ ದರದಲ್ಲಿ ISI ಗುಣಮಟ್ಟದ ಹೆಲ್ಮೆಟ್ ಗಳನ್ನು ಕೊಡಿಸಲಾಗಿರುತ್ತದೆ.
ಯುವಕರು ದುಶ್ಚಟಗಳಿಗೆ ದಾಸರಾಗದೆ ಉತ್ತಮ ಮಾರ್ಗದಲ್ಲಿ ನಡೆಯಬೇಕು,ಚಾಲನಾ ಪರವಾನಿಗೆ ಪಡೆದ ನಂತರವಷ್ಟೇ ವಾಹನಗಳನ್ನು ಚಲಾಯಿಸಬೇಕು,ಮೊಬೈಲ್ ಗಳನ್ನು ಸತ್ಕಾರ್ಯಗಳಿಗೆ ಮಾತ್ರ ಬಳಸಬೇಕು ಎಂದು.ದಾವಣಗೆರೆ ಗ್ರಾಮಾಂತರ ಪೊಲೀಸ್ ಉಪ ವಿಭಾಗ ದ ಉಪಾಧೀಕ್ಷಕರಾದ ನರಸಿಂಹ ವಿ.ತಾಮ್ರಧ್ವಜ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು ಅವರು ದಿನಾಂಕ 12-02-2021 ರಂದು ಹರಿಹರದ ಸಂತ ಅಲೋಶಿಯಸ್ ಕಾಲೇಜಿನ ಆಶ್ರಯದಲ್ಲಿ ದಾವಣಗೆರೆ ಜಿಲ್ಲಾ ಪೊಲೀಸ್ ಹಾಗೂ ಹರಿಹರ ಗ್ರಾಮಾಂತರ ಪೋಲಿಸ್ ಠಾಣೆಯ ಸಹಭಾಗಿತ್ವದಲ್ಲಿ ಏರ್ಪಡಿಸಿದ್ದ ರಸ್ತೆ ಸುರಕ್ಷತೆ ಹಾಗೂ ಪೋಕ್ಸೋ […]