ದಿನಾಂಕ 1/2/ 2021ರಿಂದ 7/2/ 2021 ರ ವರೆಗೆ ನಡೆದ ಜಿಲ್ಲೆಯ ನಾಗರಿಕ ಬಂದೂಕು ತರಬೇತಿ ಸಮಾರೋಪ ಸಮಾರಂಭದಲ್ಲಿ ಪ್ರಶಿಕ್ಷಣಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಿ, ಬಂದೂಕುಗಳ ಸುರಕ್ಷತೆ ಹಾಗೂ ಎಚ್ಚರಿಕೆ ಕ್ರಮಗಳ ಬಗ್ಗೆ ಪ್ರಶಿಕ್ಷಣಾರ್ಥಿಗಳಿಗೆ ತಿಳುವಳಿಕೆ ನೀಡಲಾಯಿತು ಹಾಗೂ ನೈಸರ್ಗಿಕ ವಿಪತ್ತಿನ ತುರ್ತು ಸಂದರ್ಭದಲ್ಲಿ ವಿಪತ್ತು ನಿರ್ವಹಣಾ ಸ್ವಯಂಸೇವಕರಾಗಿ ಸೇವೆ ಸಲ್ಲಿಸಲು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳುವಂತೆ ತಿಳಿಸಲಾಯಿತು.
2019 ನೇ ಸಾಲಿನಲ್ಲಿ ಮಾನ್ಯ ಮುಖ್ಯಮಂತ್ರಿಗಳ ಪದಕಕ್ಕಾಗಿ ಆಯ್ಕೆಗೊಂಡಿದ್ದ ಪೊಲೀಸ್ ಅಧಿಕಾರಿಗಳಾದ ಶ್ರೀ. ಪ್ರಭು ಡಿ. ಟಿ., ಪೊಲೀಸ್ ಉಪಾಧೀಕ್ಷಕರು, ಚಿಕ್ಕಮಗಳೂರು ಉಪವಿಭಾಗ, ಶ್ರೀ. ಕೆ. ಸತ್ಯನಾರಾಯಣ, ಪೊಲೀಸ್ ನಿರೀಕ್ಷಕರು, ಡಿ.ಸಿ.ಐ.ಬಿ., ಚಿಕ್ಕಮಗಳೂರು ಮತ್ತು ಶ್ರೀ. ಕಬ್ಬಾಳ್ ರಾಜ್, ಪೊಲೀಸ್ ಉಪ ನಿರೀಕ್ಷಕರು, ಡಿ.ಸಿ.ಆರ್.ಬಿ., ಚಿಕ್ಕಮಗಳೂರು ರವರಿಗೆ ದಿನಾಂಕ 08/02/2021 ರಂದು ಬ್ಯಾಂಕ್ವೇಟ್ ಹಾಲ್, ವಿಧಾನಸೌಧ, ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಕರ್ನಾಟಕ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳು ಪದಕವನ್ನು ಪ್ರದಾನ ಮಾಡಿರುತ್ತಾರೆ. […]