ಗಣಪತಿ ಮತ್ತು ಈದ್ ಮಿಲಾದ್ ಹಬ್ಬದ ಪ್ರಯುಕ್ತ ಸೌಹಾರ್ದ ಸಭೆ-ಕ್ಷೇತ್ರ ಸುರಪುರ

1 0
Read Time:1 Minute, 46 Second

ಗಣಪತಿ ಮತ್ತು ಈದ್ ಮಿಲಾದ್ ಹಬ್ಬದ ಪ್ರಯುಕ್ತ ಸೌಹಾರ್ದ ಸಭೆ

ಯಾದಗಿರಿ..ಸುರಪುರ ತಾಲೂಕ ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಈದ್ ಮಿಲಾದ್ ಮತ್ತು ಗಣೇಶ ಹಬ್ಬದ ಪ್ರಯುಕ್ತ ಹಮ್ಮಿಕೊಂಡ ಶಾಂತಿ ಸಭೆ .

ಸಭೆಯಲ್ಲಿ ಅಧ್ಯಕ್ಷತೆ ವಹಿಸಿಕೊಂಡಿರುವ DYSP ಜಾವೀದ್ ಇನಾಮದಾರ ಅವರು ಮಾತನಾಡಿ ಕೆಂಭಾವಿ ಪಟ್ಟಣದ ಪೊಲೀಸ್ ಠಾಣೆ ವ್ಯಾಪ್ತಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವವರು ನಿಯಮನುಸಾರ ಕಡ್ಡಾಯವಾಗಿ ಬಾಂಡ್ ಬರೆದು ಕೊಡಬೇಕು ಎಂದು ಹೇಳಿದರು.

ಮೆರವಣಿಗೆಯಲ್ಲಿ ಡಿಜೆಗಳನ್ನು ಬಳಸಬಾರದು ಮೂರ್ತಿ ಪ್ರತಿಷ್ಠಾಪಿಸಿದ ಸ್ಥಳದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬೇಕು. ಈ ಎಲ್ಲಾ ನಿಯಮಗಳನ್ನು ಮೂರ್ತಿ ಪ್ರತಿಷ್ಠಾಪಿಸುವವರಿಗೆ ತಿಳಿಸಬೇಕು ಎಂದು ಸಿಪಿಐ ಹಾಗೂ ಪಿಎಸ್ಐ ಅವರಿಗೆ ಹೇಳಿದರು.

ನಂತರ ಮಾತನಾಡಿದ ಕೆಂಭಾವಿ ಠಾಣಾಧಿಕಾರಿ ರಾಜಶೇಖರ ರಾಠೋಡ ಗಣಪತಿ ಪ್ರತಿಷ್ಠಾಪನೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಮಾಡಬೇಕು ವಿಸರ್ಜನಾ ಕಾರ್ಯ ಕ್ರಮದಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಯಾವದೇ ಅಹಿತಕರ ಘಟನೆಗಳು ಆಗದಂತೆ ಶಾಂತಿಯುತವಾಗಿ ಯಶಸ್ವಿಗೊಳಿಸಲು ಪೋಲಿಸ್ ಇಲಾಖೆಗಳೊಂದಿಗೆ ಸಹಕರಿಸಬೇಕು ಎಂದರು

ಈ ಸಭೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಸಂಘ ಸಂಸ್ಥೆಯವರು ಹಾಗೂ ಮುಸ್ಲಿಂ ಬಾಂಧವರು. ಕಂದಾಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಬಾಗಿಯಾಗಿ ಸಭೆಯನ್ನು ಯಶಸ್ವಿಗೊಳಿಸಿದರು

ವರದಿ:- ಸಿದ್ದಪ್ಪ ಪಟ್ಟೇದಾರ್

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Next Post

ಮಾದಕ ವಸ್ತು ಹಾಗೂ ಗಾಂಚಾ ಪೆಡ್ಲರ್ ಬಂಧನ : ವಿವೇಕನಗರ ಪೊಲೀಸರ ಕಾರ್ಯಚರಣೆ

ವಿವೇಕನಗರ ಪೊಲೀಸ್‌ ಠಾಣಾ ಸರಹದ್ದಿನಲ್ಲಿ ಆರೋಪಿತನೊಬ್ಬ ಬಾಡಿಗೆ ಆಟೋದಲ್ಲಿ ಮಾದಕ ವಸ್ತು ಗಾಂಜಾವನ್ನು ಸಾಗಾಣಿಕೆ ಮಾಡಿಕೊಂಡು ಗಿರಾಕಿಗಳಿಗೆ ಮಾರಾಟ ಮಾಡಲು ಪ್ರಯತ್ನಿಸುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಕಾರ್ಯಪ್ರವೃತ್ತರಾದ ವಿವೇಕನಗರ ಪೊಲೀಸರು ದಾಳಿಮಾಡಿ, ಆರೋಪಿತನನ್ನು ದಸ್ತಗಿರಿ ಮಾಡಿ ಆತನ ವಶದಲ್ಲಿದ್ದ 20 ಕೆ.ಜಿ. 280 ಗ್ರಾಂ ತೂಕದ ಗಾಂಜಾ, ಗಾಂಜಾ ಮಾರಾಟದಿಂದ ಸಂಪಾದಿಸಿದ್ದ ನಗದು ಹಣ 1500 ರೂ ಹಾಗು ತಿಂಡಿ-ಊಟವನ್ನು ಪಾರ್ಸಲ್ ಮಾಡುವ 52 ಖಾಕಿ ಬಣ್ಣದ […]

Get News on Whatsapp

by send "Subscribe" to 7200024452
Close Bitnami banner
Bitnami