ಬೆಂಗಳೂರು ನಗರ ಪೊಲೀಸರಿಂದ ಗೌರಿ ಗಣೇಶ ಹಬ್ಬದ ಮಾರ್ಗ ಸೂಚನೆ

1 0
Read Time:8 Minute, 20 Second

ಗೌರಿ-ಗಣೇಶ ಹಬ್ಬವನ್ನು ನಮ್ಮ ನಾಡಿನ ಸಂಸ್ಕೃತಿ, ಭಾವೈಕ್ಯತೆಯ ಪ್ರತೀಕವಾಗಿ ಆಚರಿಸಲಾಗುತ್ತಿದ್ದು, ಕೋಮು ಸೌಹಾರ್ದದಿಂದ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲು ಸಾರ್ವಜನಿಕರಲ್ಲಿ ವಿನಂತಿ.

ದಿನಾಂಕ: 18-09-2023 ರಿಂದ ನಗರಾದ್ಯಂತ ಗೌರಿ-ಗಣೇಶ ಹಬ್ಬದ ಪ್ರಯುಕ್ತ, ಹಲವಾರು ಸಂಘ ಸಂಸ್ಥೆಗಳು ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ವಿವಿಧ ದಿನಗಳಲ್ಲಿ ಮೆರವಣಿಗೆ ಮೂಲಕ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡುವರು ಹಬ್ಬವನ್ನು ಆಚರಿಸುವಾಗ ಆಯೋಜಕರು, ಸಮಿತಿಯವರು ಕೆಳಕಂಡ ಸೂಚನೆಗಳನ್ನು

ಗಮನದಲ್ಲಿಟ್ಟುಕೊಂಡು, ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಈ ಮೂಲಕ ಸೂಚಿಸಲಾಗಿದೆ.

  1. ಗಣೇಶ ಮೂರ್ತಿಯನ್ನು ಸಾರ್ವಜನಿಕ ಸ್ಥಳದಲ್ಲಿ ಪ್ರತಿಷ್ಠಾಪಿಸುವ ಮೊದಲು ಸಂಬಂಧಪಟ್ಟ ಪೊಲೀಸ್ ಠಾಣೆಯಿಂದ ಅನುಮತಿ ಪಡೆದು ಸಾರ್ವಜನಿಕರು ಮತ್ತು ವಾಹನ ಸಂಚಾರಕ್ಕೆ ತೊಂದರೆಯಾಗದಂತೆ ಪ್ರತಿಷ್ಠಾಪನೆ ಮಾಡುವುದು, ಯಾವುದೇ ಕಾರಣಕ್ಕೂ ಸಾರ್ವಜನಿಕರು ಹಾಗೂ ವಾಹನ ಸಂಚಾರ ಒತ್ತಡವಿರುವ ರಸ್ತೆಗಳಲ್ಲಿ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ನೀಡಲಾಗುವುದಿಲ್ಲ.
  2. ಗಣೇಶ ವಿಗ್ರಹ ಪ್ರತಿಷ್ಠಾಪನೆ ಹಾಗೂ ಇತರೆ ಕಾರ್ಯಕ್ರಮಗಳ ಆಯೋಜನೆಗಾಗಿ ಬಲವಂತವಾಗಿ ಹಾಗೂ ಕಾನೂನು ಬಾಹಿರವಾಗಿ ವಂತಿಗೆಯನ್ನು (ಹಣವನ್ನು )ಸಂಗ್ರಹಿಸುವವರ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು.
  3. ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸುವ ಸಾರ್ವಜನಿಕ ಸ್ಥಳದಲ್ಲಿ ಚಪ್ಪರ ಶಾಮಿಯಾನಗಳನ್ನು ಬಂದೋಬಸ್ತಾಗಿ ನಿರ್ಮಿಸತಕ್ಕದ್ದು ಈ ಬಗ್ಗೆ ಬೆಂಗಳೂರು ಮಹಾನಗರ ಹಾಗೂ ಕಾನೂನ
    ಪಾಲಿಕೆಯಿಂದ
    ಪರವಾನಗಿಯನ್ನು ಪಡೆಯತಕ್ಕದ್ದು.
  4. ಯಾವುದೇ ಕಾರಣಕ್ಕೂ ಗಣೇಶ ಪ್ರತಿಷ್ಠಾಪನೆಯನ್ನು ವಿವಾದಿತ ಸ್ಥಳದಲ್ಲಿ ಪ್ರತಿಷ್ಟಾಪಿಸಬಾರದು ಹಾಗೂ ಪ್ರತಿಷ್ಟಾಪನೆ ಮಾಡುವ ಸ್ಥಳದ ಮಾಲೀಕರ ಅನುಮತಿ ಪಡೆದು ಮಾಹಿತಿಯನ್ನು ಸಂಬಂಧಪಟ್ಟ ಪೊಲೀಸ್ ಠಾಣೆಗೆ ನೀಡಿ ನಂತರ ಪ್ರತಿಷ್ಠಾಪನೆ ಮಾಡತಕ್ಕದ್ದು.
  5. ಗಣೇಶ ಪ್ರತಿಷ್ಠಾಪನೆ ಮಾಡಿದ ಸ್ಥಳದಲ್ಲಿ ಆಯೋಜಕರ ಪರವಾಗಿ ಇಬ್ಬರು ಜವಾಬ್ದಾರಿಯುತ ಕಾರ್ಯಕರ್ತರು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ದಿನದ 24 ಗಂಟೆಗಳ ಕಾಲ ಇರುವಂತೆ ನೋಡಿಕೊಳ್ಳುವುದು ಹಾಗೂ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡತಕ್ಕದ್ದು.
  6. ಆಯೋಜಕರು ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸುವ ಸ್ಥಳದಲ್ಲಿ ಸಿ.ಸಿ. ಕ್ಯಾಮೆರಾಗಳನ್ನು ಆಳವಡಿಸುವುದು ಹಾಗೂ ಗಣೇಶ ಮೂರ್ತಿಯ ಪ್ರತಿಷ್ಠಾಪನಾ ಸ್ಥಳದಲ್ಲಿ ಬೆಂಕಿ ನಂದಿಸುವ ಸಾಮಗ್ರಿಗಳನ್ನು, ಸ್ಥಳೀಯ ಪೊಲೀಸ್ ಠಾಣೆಯ ಮತ್ತು ಆಗ್ನಿಶಾಮಕ ದಳದ ದೂರವಾಣಿ ಸಂಖ್ಯೆಗಳನ್ನು ಹಾಗೂ ಪದಾಧಿಕಾರಿಗಳ ಮೊಬೈಲ್ ಸಂಖ್ಯೆಗಳನ್ನು ನಮೂದಿಸಿ ಪ್ರದರ್ಶಿಸುವುದು. ಅಲ್ಲದೇ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸುವ ಸ್ಥಳದಲ್ಲಿ ಬೆಂಕಿ ನಂದಿಸುವ ಸಾಮಾಗ್ರಿಗಳನ್ನು ಆಳವಡಿಸಿಕೊಳ್ಳುವುದು.
  7. ಗಣೇಶ ಪ್ರತಿಷ್ಠಾಪನಾ ಸ್ಥಳದಲ್ಲಿ ಹಾಗೂ ಸುತ್ತಮುತ್ತ ಯಾವುದೇ ಅಡುಗೆ ಮಾಡುವ ಕಟ್ಟಿಗೆ, ಉರುವಲು,
    ಸೀಮೆಎಣ್ಣೆ ಸಾಧನಗಳನ್ನು ಇಡಬಾರದು ಹಾಗೂ ಅಡುಗೆ ಮಾಡಬಾರದು.
  8. ವಿದ್ಯುತ್‌ ಮತ್ತು ವಿದ್ಯುತ್‌ ಅಲಂಕಾರಕ್ಕೆ ಸಂಬಂಧಿಸಿದಂತೆ ವೈರಿಂಗ್ ಬಗ್ಗೆ ಜೆಸ್ಕಾಂ ಇಲಾಖೆಯಿಂದ
    ಆನುಮತಿ ಪಡೆಯತಕ್ಕದ್ದು, ಅಗ್ನಿಶಾಮಕ ದಳ ಹಾಗೂ ಸಂಚಾರಿ ಪೊಲೀಸರಿಂದ ನಿರಾಪೇಕ್ಷಣಾ (NO objection Certificate) ಪಡೆಯತಕ್ಕದ್ದು.
  9. ಗಣೇಶ ಪ್ರತಿಷ್ಠಾಪನಾ ಸ್ಥಳದಲ್ಲಿ ದಿನದ 24 ಗಂಟೆ ಸಮರ್ಪಕ ಬೆಳಕು ಇರುವಂತೆ ನೋಡಿಕೊಳ್ಳತಕ್ಕದ್ದು.
  10. ಆಯೋಜಕರು ಗಣೇಶ ಪ್ರತಿಷ್ಠಾಪನೆ ಸ್ಥಳಕ್ಕೆ ಆಗಮಿಸುವ ಸಾರ್ವಜನಿಕರಿಗೋಸ್ಕರ ಸಮರ್ಪಕವಾಗಿ ಆಗಮನ ಮತ್ತು ನಿರ್ಗಮನದ ವ್ಯವಸ್ಥೆಯನ್ನು ಮಾಡುವುದರ ಜೊತೆಗೆ ಜನಸಂದಣಿಯನ್ನು ನಿಯಂತ್ರಿಸುವ ಬಗ್ಗೆ ಬ್ಯಾರಿಕೇಡ್‌ಗಳನ್ನು ನಿರ್ಮಿಸಿ, ಸ್ವಯಂ ಸೇವಕರನ್ನು ನೇಮಿಸಿಕೊಂಡು ಯಾವುದೇ ಜನಜಂಗುಳಿಗೆ ಆಸ್ಪದ ನೀಡದಂತೆ ನೋಡಿಕೊಳ್ಳತಕ್ಕದ್ದು ಹಾಗೂ ಗಣೇಶ ವಿಗ್ರಹ ಪ್ರತಿಷ್ಠಾಪನೆಯ ಸಂಬಂಧ ಎಲ್ಲಾ ಪರಿಕರಗಳ ರಕ್ಷಣೆಗಾಗಿ, ಸದರಿ ಕಾರ್ಯಕ್ರಮವನ್ನು ಆಯೋಜಿಸುವವರೇ ಜವಾಬ್ದಾರರಾಗಿರುತ್ತಾರೆ.
  11. ಗಣೇಶ ವಿಸರ್ಜನಾ ಮೆರವಣಿಗೆ ಸಮಯದಲ್ಲಿ ಯಾವುದೇ ರೀತಿಯ ಅಪರಾದಗಳು ನಡೆಯದಂತೆ ಗಮನಹರಿಸತಕ್ಕದ್ದು, ಮೆರವಣಿಗೆ ಸಮಯದಲ್ಲಿ ಯಾವುದೇ ಅಪರಾಧಗಳು ನಡೆದರೆ ಆಯೋಜಕರೇ ಜವಾಬ್ದಾರರಾಗಿರುತ್ತಾರೆ.
  12. ಗಣೇಶ ಪ್ರತಿಷ್ಠಾಪನೆ, ಮನರಂಜನಾ ಕಾರ್ಯಕ್ರಮ, ಮೆರವಣಿಗೆ ಮತ್ತು ವಿಸರ್ಜನಾ ಸ್ಥಳಗಳಲ್ಲಿ ಹೆಣ್ಣುಮಕ್ಕಳನ್ನು ಚುಡಾಯಿಸುವುದು ಹಾಗೂ ಕೀಟಲೆ ಮಾಡದಂತೆ ಆಯೋಜಕರೇ ಪೂರ್ಣ
    ಜವಾಬ್ದಾರಿಯನ್ನು ವಹಿಸಿಕೊಳ್ಳತಕ್ಕದ್ದು.
  13. ಹಿರಿಯ ನಾಗರೀಕರಿಗೆ, ಶಾಲಾ ಮಕ್ಕಳಿಗೆ ಹಾಗೂ ಇತರರಿಗೆ ತೊಂದರೆಯಾಗದಂತೆ ಧ್ವನಿವರ್ಧಕಗಳನ್ನು ಬೆಳಗ್ಗೆ 06-00 ಘಂಟೆಯಿಂದ ರಾತ್ರಿ 10-00 ಘಂಟೆಯವರೆಗೆ ಮಾತ್ರ ಬಳಸಿಕೊಳ್ಳಲು ಸ್ಥಳೀಯ ಪೊಲೀಸರ ಅನುಮತಿ/ಪರವಾನಗಿ ಪಡೆದುಕೊಳ್ಳತಕ್ಕದ್ದು. ಸದರಿ ನಿಬಂಧನೆಯನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡದವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಧ್ವನಿವರ್ಧಕಗಳಿಂದ ಹೊರಡುವ ಶಬ್ದದ ಪ್ರಮಾಣವನ್ನು ಕಡಿಮೆ ಮಟ್ಟದಲ್ಲಿ ಇಟ್ಟುಕೊಳ್ಳುವುದು. ಹಾಗೂ ಯಾವುದೇ ಕಾರಣಕ್ಕೂ (DJ Sound System ) ಅಳವಡಿಸಲು ಅವಕಾಶ ಇರುವುದಿಲ್ಲ.
  14. ಗಣೇಶ, ಪ್ರತಿಷ್ಠಾಪನ ಮಂಡಳಿಯ ಸಂಘಟಕರು ತಮ್ಮ ಮಂಡಳಿಯ ಅಧ್ಯಕ್ಷ, ಕಾರ್ಯದರ್ಶಿ ಮತ್ತು ಇತರ ಪದಾಧಿಕಾರಿಗಳ ಹೆಸರು, ವಿಳಾಸ ಮತ್ತು ದೂರವಾಣಿ ಸಂಖ್ಯೆಯನ್ನು ಸಂಬಂಧಪಟ್ಟ ಠಾಣಾಧಿಕಾರಿಗೆ ಒದಗಿಸಿ ಸಹಕರಿಸಬೇಕು.

ವಿಸರ್ಜನಾ ಕಾರ್ಯಕ್ರಮಕ್ಕೆ ಸಂಬಂಧಪಟ್ಟಂತೆ ಈ ಕೆಳಗಿನ ಅಂಶಗಳನ್ನು ಪಾಲನೆ ಮಾಡುವ ಕುರಿತು.

  1. ಗಣೇಶ ವಿಸರ್ಜನಾ ಮೆರವಣಿಗೆ ಸಮಯದಲ್ಲಿ ಆಯೋಜಕರು ಸ್ವಯಂಸೇವಕರನ್ನು ಗುರ್ತಿಸಲು ಅವರಿಗೆ
    ಗುರುತಿನ ಚೀಟಿ, ಬ್ಯಾಡ್ಜ್, ಟೀ-ಶರ್ಟ್ ಅಥವಾ ಕ್ಯಾಪ್‌ಗಳನ್ನು ನೀಡಿ, ಅವರುಗಳನ್ನು ಗುರ್ತಿಸಲು ಕ್ರಮ
    ಕೈಗೊಂಡು, ಮೆರವಣಿಗೆ ಶಾಂತರೀತಿಯಲ್ಲಿ ವಿಸರ್ಜನಾ ಸ್ಥಳಕ್ಕೆ ಹೋಗಲು ಅನುವು ಮಾಡಿಕೊಡಲು
    ಕೋರಲಾಗಿದೆ.
  2. ಗಣೇಶ ಪ್ರತಿಷ್ಠಾಪನಾ ಸ್ಥಳದಲ್ಲಿ ಏನಾದರೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವುದಿದ್ದಲ್ಲಿ ಸಂಬಂಧಪಟ್ಟ ಪೊಲೀಸ್‌ ಠಾಣೆಗೆ ಮುಂಚಿತವಾಗಿ ಮಾಹಿತಿ ನೀಡಿ ಸೂಕ್ತ ಬಂದೋಬಸ್ತ್ ಮಾಡಿಕೊಳ್ಳಲು ಸ್ಥಳೀಯ ಪೊಲೀಸರೊಂದಿಗೆ ಸಹಕರಿಸುವುದು ಹಾಗೂ ಧ್ವನಿವರ್ಧಕಗಳಿಗೆ ನೀಡಿರುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸತಕ್ಕದ್ದು.
  3. ಮೆರವಣಿಗೆಯು ಸೂಕ್ಷ್ಮಸ್ಥಳ, ಅತೀ ಸೂಕ್ಷ್ಮಸ್ಥಳ ಹಾಗೂ ಪ್ರಾರ್ಥನಾ ಸ್ಥಳಗಳ ಮುಂಭಾಗದಲ್ಲಿ ಸಾಗುವಾಗ
    ಸಿಡಿಮದ್ದು, ಪಟಾಕಿಗಳನ್ನು ಸಿಡಿಸದಂತೆ ಹಾಗೂ ಕರ್ಪೂರಗಳನ್ನು ಹಚ್ಚಬಾರದು.
  4. ಗಣೇಶ ವಿಸರ್ಜನೆ ಸಂಬಂಧ ಮೆರವಣಿಗೆಯು ರಾತ್ರಿ 10-00 ಗಂಟೆಯೊಳಗೆ ಮುಗಿಯುವಂತೆ ಆಯೋಜಕರು ನೋಡಿಕೊಳ್ಳತಕ್ಕದ್ದು, ಮೆರವಣಿಗೆ ಸಮಯದಲ್ಲಿ ಎಲೆಕ್ಟಿಕಲ್‌ ವೈರುಗಳು, ಮರದ ಕೊಂಬೆಗಳ ಬಗ್ಗೆ ಗಮನಹರಿಸಿ, ವಿಸರ್ಜನಾ ಮೆರವಣಿಗೆ ಸುಸೂತ್ರವಾಗಿ ಹೋಗಲು ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಸಂಬಂಧಪಟ್ಟ ಇಲಾಖೆಯವರಿಂದ (ಅರಣ್ಯ ಮತ್ತು ಕೆ.ಇ.ಬಿ) ಪಡೆದುಕೊಳ್ಳತಕ್ಕದ್ದು.

ವರದಿ : ಆಂಟೋನಿ ಬೇಗೂರು

Happy
Happy
0 %
Sad
Sad
0 %
Excited
Excited
100 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Next Post

ಗಣಪತಿ ಮತ್ತು ಈದ್ ಮಿಲಾದ್ ಹಬ್ಬದ ಪ್ರಯುಕ್ತ ಸೌಹಾರ್ದ ಸಭೆ-ಕ್ಷೇತ್ರ ಸುರಪುರ

ಗಣಪತಿ ಮತ್ತು ಈದ್ ಮಿಲಾದ್ ಹಬ್ಬದ ಪ್ರಯುಕ್ತ ಸೌಹಾರ್ದ ಸಭೆ ಯಾದಗಿರಿ..ಸುರಪುರ ತಾಲೂಕ ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಈದ್ ಮಿಲಾದ್ ಮತ್ತು ಗಣೇಶ ಹಬ್ಬದ ಪ್ರಯುಕ್ತ ಹಮ್ಮಿಕೊಂಡ ಶಾಂತಿ ಸಭೆ . ಸಭೆಯಲ್ಲಿ ಅಧ್ಯಕ್ಷತೆ ವಹಿಸಿಕೊಂಡಿರುವ DYSP ಜಾವೀದ್ ಇನಾಮದಾರ ಅವರು ಮಾತನಾಡಿ ಕೆಂಭಾವಿ ಪಟ್ಟಣದ ಪೊಲೀಸ್ ಠಾಣೆ ವ್ಯಾಪ್ತಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವವರು ನಿಯಮನುಸಾರ ಕಡ್ಡಾಯವಾಗಿ ಬಾಂಡ್ ಬರೆದು ಕೊಡಬೇಕು ಎಂದು ಹೇಳಿದರು. ಮೆರವಣಿಗೆಯಲ್ಲಿ ಡಿಜೆಗಳನ್ನು ಬಳಸಬಾರದು […]

Get News on Whatsapp

by send "Subscribe" to 7200024452
Close Bitnami banner
Bitnami