ಇನ್ಸುರೆನ್ಸ್ ಹಣ ಹಾಗೂ ಚಿನ್ನಾಭರಣಗಳ ಮಾರಾಟದಿಂದ 4 ಕೋಟಿಗೂ ಅಧಿಕ ಅಕ್ರಮ ಹಣ ಸಂಪಾದನೆ ಮಾಡಲು ಸಂಚು ರೂಪಿಸಿ, ಸುಳ್ಳು ಸುಲಿಗೆ ಪ್ರಕರಣ ದಾಖಲಿಸಿದ್ದ ನಗರತ್‌ ಪೇಟೆಯ ಚಿನ್ನಾಭರಣ ವ್ಯಾಪಾರಿಯ ಬಂಧನ

0 0
Read Time:5 Minute, 15 Second

ಕಾಟನ್‌ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಿನಾಂಕ: 12.07.2023 ರಂದು ರಾತ್ರಿ ಬೆಂಗಳೂರು ನಗರತ್ ಪೇಟೆಯ ಕೇಸರ್ ಜುವೆಲರ್ ಅಂಗಡಿಯ ಮಾಲೀಕನು ತಮ್ಮ ಸಂಬಂಧಿಗಳೊಂದಿಗೆ ಆ ದಿನ ಸಂಜೆ (7.30 ಗಂಟೆಗೆ ತಮ್ಮ ಜುವೆಲರಿ ರಾಮ್‌ನಿಂದ ಹೊರಟು ಹೈದರಾಬಾದ್‌ಗೆ ಕಳುಹಿಸಲು 3 ಕೆ.ಜಿ 78) ಗ್ರಾಂ ಚಿನ್ನಭಾರಣಗಳನ್ನು ತಮ್ಮ ದ್ವಿ ಚಕ್ರ ವಾಹನದಲ್ಲಿ ಮನೆಗೆ ತೆಗೆದುಕೊಂಡು ಹೋಗುತ್ತಿರುವಾಗ್ಗೆ ಮೈಸೂರು ರಸ್ತೆಯ ಫೈ ಓವರ್ ಮೇಲೆ ಇಬ್ಬರು ಅಪರಿಚಿತ ವ್ಯಕ್ತಿಗಳು ದ್ವಿಚಕ್ರ ವಾಹನದಲ್ಲಿ ಹಿಂದಿನಿಂದ ಬಂದು ಕಾಲಿನಿಂದ ಹೊಡೆದು ತಮ್ಮ ಬಳಿ ಇದ್ದ ಚಿನ್ನಭರಣ ತುಂಬಿದ್ದ ಗೋಲ್ಡ್ ಬ್ಯಾಗ್ ಅನ್ನು ಕಿತ್ತುಕೊಂಡು ಹೋಗಿರುವ ಸಂಬಂಧ ಕಾಟನ್‌ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಬಗ್ಗೆ ತನಿಖೆಯನ್ನು ಕೈಗೊಂಡಿರುತ್ತದೆ.

ಸದರಿ ಪ್ರಕರಣದ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಿದ್ದು, ತನಿಖಾ ತಂಡವು ತಾಂತ್ರಿಕವಾಗಿ ಹಾಗೂ ವಿವಿಧ ಅಯಾಮಗಳಲ್ಲಿ ಪರಿಶೀಲನೆ ನಡೆಸಿದಾಗ ಇನ್ಸುರೆನ್ಸ್ ಕೈ ಮಾಡಿಕೊಳ್ಳಲು ಹಾಗೂ ಸುಲಿಗೆಯಾಗಿದೆಯೆಂದು ಹೇಳಿದ ಚಿನ್ನಭರಣಗಳನ್ನು ತನ್ನ ಬಳಿಯೇ ಇಟ್ಟುಕೊಂಡು ಬೇರೊಬ್ಬರಿಗೆ ಮಾರಾಟ ಮಾಡಿ ಲಾಭ ಮಾಡಿಕೊಳ್ಳುವ ಉದ್ದೇಶದಿಂದ ಪಿರಾದಿಯು ತನ್ನ ಸಂಬಂಧಿಗಳಾದ ಇಬ್ಬರು ತರಬೇತಿ ನೀಡಿ ಬಳಸಿಕೊಂಡಿರುತ್ತಾನೆ. ಸದರಿ ಅಪ್ರಾಪ್ತ ಬಾಲಕರು ಚಿನ್ನಭರಣದ ಬಾಕ್ಸ್ ಅನ್ನು ಅಂಗಡಿಯ ಸಿಸಿಟಿವಿ ಕ್ಯಾಮರಗಳ ಮುಂದೆಯೇ ಪ್ಯಾಕ್ ಮಾಡಿ, ಸಿಸಿ ಕ್ಯಾಮರಾದಲ್ಲಿ ಕಾಣುವಂತೆ ಗಾಡಿಯಲ್ಲಿ ಚಿನ್ನಾಭರಣವಿದ್ದ ಬ್ಯಾಗನ್ನು ಇಟ್ಟುಕೊಂಡು, ನಂತರ ಗಾಡಿಯಲ್ಲಿ ಸಿಟಿ ಮಾರ್ಕೆಟ್ ಫೈ ಓವರ್ ಮೇಲೆ ಬಂದು, ದ್ವಿ ಚಕ್ರ ವಾಹನವನ್ನು ಸಿಸಿ ಕ್ಯಾಮರಾಗಳಿಲ್ಲದ ಪ್ರೈ ಓವರ್ ಮೇಲಿನ ಖಾಲಿ ಜಾಗದಲ್ಲಿ ನಿಲ್ಲಿಸಿ, ಬ್ಯಾಗ್‌ನಿಂದ ಚಿನ್ನಾಭರಣದ ಬಾಕ್ಸ್ ಅನ್ನು ತೆಗೆದು, ಬೇರೊಂದು ಗಾಡಿಯ ಡಿಕ್ಕಿಗೆ ಇಟ್ಟುಕೊಂಡು, ಬ್ಯಾಗ್ ಬಿಸಾಡಿಸಿ, ರಾಬರಿಯಾಗಿದೆಂದು ನಂಬಿಸಲು ಮಾಲೀಕನು ಮನೆಯಲ್ಲಿ ಇದ್ದುಕೊಂಡು ಘಟನೆ ನಡೆದ ಸ್ಥಳದಿಂದಲೇ ಪೋನ್ ಕಾಲ್ ಬರುವಂತೆ ಮಾಡಿಸಿಕೊಂಡು, ಚಿನ್ನಾಭರಣದ ಬಾಕ್ಸ್ ಅನ್ನು ಅಪ್ರಾಪ್ತ ಬಾಲಕನಿಂದಲೇ ತನ್ನ ಮನೆಗೆ ಸಾಗಿಸಿ, ನಂತರ ಪೊಲೀಸ್ ಠಾಣೆಗೆ ಬಂದು ಸುಳ್ಳು ಘಟನೆಯನ್ನು ನಿಜವೆಂದು ಬಿಂಬಿಸಿ ತನ್ನ ಬಳಿಯಿದ್ದ 2 ಕೆ.ಜಿ 70 ಗ್ರಾಂಗೆ ಒಂದು ಕೆ.ಜಿಯಷ್ಟು ಹೆಚ್ಚಿಗೆ ಸೇರಿಸಿ. 3 ಕೆ.ಜಿ 780 ಗ್ರಾಂ ಚಿನ್ನಾಭರಣಗಳು ಸುಲಿಗೆಯಾಗಿರುವುದಾಗಿ ನಕಲಿ ಬಿಲ್‌ನ್ನು ಸಹ ಸೃಷ್ಟಿಸಿ, ಸುಳ್ಳು ದೂರು ನೀಡಿದ್ದು, ನಂತರ 2 ಕೆ.ಜಿ 760 ಗ್ರಾಂ ಚಿನ್ನಾಭರಣಗಳನ್ನು ಹೈದರಾಬಾದಿನ ಜುವೆಲರಿ ಅಂಗಡಿಯವರಿಗೆ ಮಾರಾಟ ಮಾಡಿರುತ್ತಾನೆಂದು ತನಿಖೆಯಿಂದ ಧೃಡಪಟ್ಟಿರುತ್ತದೆ.

ಈ ಬಗ್ಗೆ ಸದರಿ ಆರೋಪಿಯು ಸುಮಾರು ಒಂದು ತಿಂಗಳಿನಿಂದ ಪ್ಲಾನ್ ಮಾಡಿಕೊಂಡು ಇನ್ಸುರೆನ್ಸ್ ಕೈ ಮಾಡುವ ಬಗ್ಗೆ ಹಾಗೂ ಪೊಲೀಸರ ತನಿಖೆಯ ಆಯಾಮಗಳನ್ನು ತಿಳಿದುಕೊಂಡು ಅಪ್ರಾಪ್ತರನ್ನ ಬಳಸಿಕೊಂಡು ಪೊಲೀಸರನ್ನು ನಂಬಿಸಲು ಹೈದರಾಬಾದ್‌ಗೆ ಕಳುಹಿಸಿ ಕೊಡುತ್ತಿದ್ದಾನೆ ಎಂದು ನಂಬುವಂತೆ ಹೈದರಾಬಾದ್‌ಗೆ ಬಸ್ ಟಿಕೆಟ್ ಅನ್ನು ಬುಕ್ ಮಾಡಿಸಿರುತ್ತಾನೆ. ಹಾಗೂ ಸಿಸಿಟಿವಿ ಕ್ಯಾಮರ, ಮೊಬೈಲ್ ಟವರ್ ಲೋಕೇಷನ್ ಹಾಗೂ ಮೊಬೈಲ್ ಕರೆಗಳನ್ನು ಕೃತ್ಯ ನಡೆದಿದೆ ಎಂಬುವಂತೆ ಹೊಂದಾಣಿಕೆ ಮಾಡಿರುತ್ತಾನೆ. ಆರೋಪಿಯು ಸುಮಾರು 4 ಕೋಟಿ ರೂ ಹಣವನ್ನು ಲಾಭ ಮಾಡಿಕೊಳ್ಳುವ ಉದ್ದೇಶದಿಂದ ಈ ಕೃತ್ಯವೆಸಗಿರುವುದು ತನಿಖೆಯಿಂದ ಕಂಡು ಬಂದಿರುತ್ತದೆ.
ಈ ಕಾರ್ಯಾಚರಣೆಯನ್ನು ಬೆಂಗಳೂರು ನಗರದ ಪಶ್ಚಿಮ ವಿಭಾಗದ ‘ಉಪ ಪೊಲೀಸ್‌ ಆಯುಕ್ತರಾದ ಶ್ರೀ. ಲಕ್ಷಣ ರವರ ನೇತೃತ್ವದಲ್ಲಿ, ಶ್ರೀ ಗಿರಿ ಕೆ.ಸಿ, ಸಹಾಯಕ ಪೊಲೀಸ್ ಆಯುಕ್ತರು ಚಿಕ್ಕಪೇಟೆ ಉಪ-ವಿಭಾಗ ರವರ ಮಾರ್ಗದರ್ಶನದಲ್ಲಿ, ಬಾಲರಾಜ್ ಜಿ. ಪೊಲೀಸ್ ಇನ್ಸ್‌ಪೆಕ್ಟರ್ ಹಾಗೂ ಸಿಬ್ಬಂದಿಯವರನ್ನೊಳಗೊಂಡ ತಂಡವು ಸದರಿ ಪ್ರಕರಣವನ್ನು ಬೇಧಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ. ಈ ಮೇಲ್ಕಂಡ ಅಧಿಕಾರಿಗಳ ಮತ್ತು ಸಿಬ್ಬಂದಿಯವರುಗಳ ಕರ್ತವ್ಯವನ್ನು ಬೆಂಗಳೂರು ನಗರದ ಪೊಲೀಸ್‌ ಆಯುಕ್ತರಾದ ಬಿ. ದಯಾನಂದ ಮತ್ತು ಅಪರ ಪೊಲೀಸ್ ಆಯುಕ್ತರು ಪಶ್ಚಿಮ ಶ್ರೀ. ಸತೀಶ್ ಕುಮಾರ್ ರವರು ಶ್ಲಾಘಿಸಿರುತ್ತಾರೆ.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Next Post

ಬೆಂಗಳೂರು ನಗರದ 8 ವಿಭಾಗಳಿಂದ, ಜುಲೈ ಮಾಹೆಯಲ್ಲಿ ಮಾದಕ ವಸ್ತು ದ್ರವ್ಯಗಳ ವಿರುದ್ಧ ಪ್ರಕರಣ ದಾಖಲಿಸಿ ವಶಪಡಿಸಿಕೊಂಡ ವಸ್ತುಗಳ ವಿವರ

ಬೆಂಗಳೂರು ನಗರ ಪೊಲೀಸರು ಜುಲೈ ತಿಂಗಳಿನಲ್ಲಿ ಮಾದಕ ವಸ್ತುಗಳ ಮಾರಾಟ ಮತ್ತು ಸೇವನೆ ಮಾಡುವವರ ವಿರುದ್ಧ ಒಟ್ಟು 378 ಪ್ರಕರಣಗಳನ್ನು ದಾಖಲಿಸಿದ್ದು, ಸದರಿ ಪ್ರಕರಣಗಳಲ್ಲಿ 47 ಅಂತರರಾಜ್ಯ ಆರೋಪಿಗಳನ್ನು ಒಳಗೊಂಡಂತೆ 474 ಭಾರತೀಯರನ್ನು ಹಾಗೂ 13 ವಿದೇಶಿ ಪ್ರಜೆಗಳನ್ನು ಬಂಧಿಸಿರುತ್ತಾರೆ. ಅವುಗಳಲ್ಲಿ 12 ಪ್ರಕರಣಗಳನ್ನು ಡಗ್ ಪೆಡ್ಲರ್‌ಗಳ ಮೇಲೂ ಹಾಗೂ 306 ಪ್ರಕರಣಗಳನ್ನು ಡ್ರಗ್ಸ್ ಸೇವನೆ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮುಂದುವರೆದು ಅಕ್ರಮವಾಗಿ ನೆಲೆಸಿದ್ದ || ಜನ ವಿದೇಶಿಯರನ್ನು […]

Get News on Whatsapp

by send "Subscribe" to 7200024452
Close Bitnami banner
Bitnami