ಹೆಬ್ಬಾಳ ಪೊಲೀಸ್‌ ಠಾಣೆಯ ಕೇಸಿನಲ್ಲಿ ಆರೋಪಿ ವಶದಿಂದ 4 ಜೀವಂತ ಹ್ಯಾಂಡ್ ಗ್ರೆನೈಡ್ ಗಳ ವಶ

0 0
Read Time:2 Minute, 55 Second

ಬೆಂಗಳೂರು ನಗರದಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ಕಾರ್ಯಾಚರಣೆ ಕೈಗೊಂಡಿದ್ದ ಸಿಸಿಬಿ ಅಧಿಕಾರಿಗಳಿಗೆ ಕೆಲವು ಆರೋಪಿಗಳು, ಭಯೋತ್ಪಾದಕ ಕೃತ್ಯದಲ್ಲಿ ಭಾಗಿಯಾಗಿ ಜೈಲಿನಲ್ಲಿರುವ ಆರೋಪಿಗಳೊಂದಿಗೆ ಸಂಪರ್ಕ ಹೊಂದಿ, ನಗರದಲ್ಲಿ ದೇಶವಿರೋಧಿ ಕಾನೂನು ಬಾಹಿರ ವಿದ್ವಂಸಕಕೃತ್ಯವೆಸಗಲು ಹಲವಾರು ಒಳಸಂಚಿನ ಸಭೆಗಳನ್ನು ನಡೆಸಿ, ಈ ಕಾರ್ಯಸಾಧನೆಗಾಗಿ ಕೆಲವು ವಾರಗಳಿಂದ ಅಕ್ರಮವಾಗಿ ಶಸ್ತ್ರಾಸ್ತ್ರ ಮದ್ದುಗುಂಡುಗಳು ಮತ್ತು ದುಷ್ಕೃತ್ಯಕ್ಕೆ ಬೇಕಾಗುವ ಸಲಕರಣೆಗಳನ್ನು ಕ್ರೋಡಿಕರಿಸಿಕೊಂಡು ದೇಶದ ಐಕ್ಯತೆ, ಭದ್ರತೆ ಮತ್ತು ಸರ್ವಭೌಮತ್ವಕ್ಕೆ ಧಕ್ಕೆ ಉಂಟು ಮಾಡುವ ದುಷ್ಕೃತ್ಯಗಳನ್ನು ಎಸಗಿ, ಸಾರ್ವಜನಿಕ ಆಸ್ತಿ ಪಾಸ್ತಿಗೆ ನಷ್ಟ ಉಂಟು ಮಾಡುವ ಉದ್ದೇಶಗಳನ್ನು ಹೊಂದಿ, ಹೆಬ್ಬಾಳ ಪೊಲೀಸ್ ಠಾಣಾ ವ್ಯಾಪ್ತಿಯ ಸುಲ್ತಾನ್ ಪಾಳ್ಯದ ಮನೆಯೊಂದರಲ್ಲಿ ದೇಶವಿರೋಧಿ ಕೃತ್ಯದ ರೂಪರೇಷೆಗಳನ್ನು ರೂಪಿಸಿ ಅಕ್ರಮ ಶಸ್ತ್ರಾಸ್ತ್ರದೊಂದಿಗೆ ವಿಧ್ವಂಸಕ ಕೃತ್ಯಕ್ಕೆ ಒಳಸಂಚು ಮಾಡಿದ್ದ ಆರೋಪಿಗಳನ್ನು ದಸ್ತಗಿರಿ ಮಾಡಿ ಕೈಗೊಂಡ ಕ್ರಮದ ಬಗ್ಗೆ ಈಗಾಗಲೇ ತಿಳಿಸಲಾಗಿತ್ತು.
ದಿನಾಂಕ: 19.07.2023 ರಂದು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ 17 ದಿನಗಳ ಪೊಲೀಸ್ ವಶಕ್ಕೆ ಪಡೆದು ತನಿಖೆ ಮುಂದುವರಿಸಲಾಗಿರುತ್ತದೆ. ಈ ಕೇಸಿನಲ್ಲಿ ಎಲ್ಲಾ ಆಯಾಮಗಳಲ್ಲಿ ತನಿಖೆ ಮುಂದುವರಿಸಲು ತನಿಖಾಧಿಕಾರಿ: ಸೇರಿ ಇಬ್ಬರು ಎಸಿಪಿ, 16 ಜನ ಪೊಲೀಸ್ ಇನ್ಸ್ಪೆಕ್ಟರ್ ಗಳ ವಿಶೇಷ ತಂಡಗಳನ್ನು ರಚಿಸಲಾಗಿದ್ದು, ತೀವ್ರಗತಿಯಲ್ಲಿ ತನಿಖೆ ಮುಂದುವರಿದಿದೆ.

ಆರೋಪಿಗಳನ್ನು ವಿಚಾರಣೆಗೊಳಪಡಿಸಿದ್ದು, ಪೊಲೀಸ್ ಅಭಿರಕ್ಷೆಯಲ್ಲಿರುವ ಎ-5 ಆರೋಪಿತನು ತಲೆ ಮರೆಸಿಕೊಂಡಿರುವ ಎ-2 ಆರೋಪಿತನು ಒಬ್ಬ ವ್ಯಕ್ತಿಯ ಮೂಲಕ 04 ಹ್ಯಾಂಡ್ ಗ್ರೆನೈಡ್ ಗಳನ್ನು ಕಳುಹಿಸಿದ್ದು, ಅವುಗಳನ್ನು ಕೊಡಿಗೆಹಳ್ಳಿಯ ಮನೆಯೊಂದರಲ್ಲಿ ಸಂಗ್ರಹಿಸಿಟ್ಟಿರುವುದಾಗಿಯೂ, ಸದರಿ ಸ್ಥಳವನ್ನು ತೋರಿಸುವುದಾಗಿ ವಿಚಾರಣೆ ವೇಳೆ ತಿಳಿಸಿರುತ್ತಾನೆ. ಅದರಂತೆ, ತನಿಖಾಧಿಕಾರಿಯವರು ಬಾಂಬ್ ನಿಷ್ಕ್ರಿಯ ದಳದ (ಬಿಡಿಡಿಎಸ್) ಮತ್ತು ಎಫ್‌ಎಸ್‌ಎಲ್ ಅಧಿಕಾರಿಗಳ ಜೊತೆಯಲ್ಲಿ ನಿಯಮಾನುಸಾರವಾಗಿ (4 ಜೀವಂತ ಹ್ಯಾಂಡ್ ಗೇನೈಡ್ ಗಳನ್ನು ಅಮಾನತ್ತುಪಡಿಸಿಕೊಳ್ಳಲಾಗಿರುತ್ತದೆ.

ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಎಲ್ಲಾ ಆಯಾಮಗಳಲ್ಲಿಯೂ ತನಿಖೆ ಮುಂದುವರಿಸಿದೆ

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Next Post

ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಸಿಕೊಂಡು, ದ್ವಿಗುಣ ಮಾಡಿಕೊಡುವುದಾಗಿ ನಂಬಿಸಿ ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದ ಆರೋಪಿಯ ಬಂಧನ, ರೂ.45 ಲಕ್ಷ ನಗದು ಮತ್ತು 2 ಲ್ಯಾಪ್ ಟಾಪ್‌ಗಳ ವಶ: ಬನಶಂಕರಿ ಪೊಲೀಸ್‌ ಠಾಣೆ

ಬನಶಂಕರಿ ಪೊಲೀಸರಿಗೆ ದಿನಾಂಕ:-28/04/2023 ರಂದು ಶ್ರೀ.ರಾಘವೇಂದ್ರ ಆಚಾರ್ಯ ಎಂಬುವರು ದೂರನ್ನು ನೀಡಿದ್ದು, ಪಿದ್ಯಾದಿಗೆ ಪರಿಚಯವಿದ್ದ ಒಬ್ಬ ಆಸಾಮಿಯು ತಾನು ಷೇರು ಮಾರುಕಟ್ಟೆಯಲ್ಲಿ ವ್ಯವಹಾರ ಮಾಡುತ್ತಿದ್ದು, ವಿದ್ಯಾಥಿಯ ಬಳಿ ಇರುವ ಹಣವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ 20 ತಿಂಗಳಲ್ಲಿ ಹಣ ದ್ವಿಗುಣ ಮಾಡಿಕೊಡುತ್ತೇನೆಂದು ನಂಬಿಸಿರುತ್ತಾರೆ. ಆರೋಪಿ ಆಸಾಮಿಯನ್ನು ನಂಬಿ ಆತನಿಗೆ 2022 ನೇ ಇಸವಿಯಲ್ಲಿ ಒಟ್ಟು 1,07 ಕೋಟಿ ರೂಗಳನ್ನು ನೀಡಿದ್ದು ಅಲ್ಲದೆ, ಪಿರಾದಿಯ ಮನೆಯನ್ನು ಸಹ ಸೇಲ್ ಆಗ್ರೀಮೆಂಟ್ […]

Get News on Whatsapp

by send "Subscribe" to 7200024452
Close Bitnami banner
Bitnami