ರೈಟರ್ ಸೆಫ್‌ಗಾರ್ಡ್ ಪ್ರೈ. ಕಂಪನಿಗೆ ರೂ 20,00,000/- ರೂ ನಗದು ಹಣ ದುರುಪಯೋಗ ಪಡಿಸಿಕೊಂಡು ಮೋಸ ಮಾಡಿದ್ದ ಆರೋಪಿಗಳ ಬಂಧನ

0 0
Read Time:2 Minute, 16 Second

ವಿಲ್ಸನ್ ಗಾರ್ಡನ್ ಪೊಲೀಸ್ ಠಾಣಾ ಸರಹದ್ದಿನಲ್ಲಿರುವ ರೈಟರ್ ಸೆಫ್ಟ್‌ಗಾರ್ಡ್ ಪ್ರೈ.ಅ ಕಂಪನಿಯಲ್ಲಿ ಏಟಿಎಂ ಗಳಿಗೆ ಕ್ಯಾಶ್ ಲೋಡಿಂಗ್ ಮಾಡುತ್ತಿದ್ದ ಇಬ್ಬರು ಸಿಬ್ಬಂದಿಗಳು ದಿನಾಂಕ:19/06/2023 ರಿಂದ ದಿನಾಂಕ:21/06/2023 ರ ನಡುವಿನ ದಿನಗಳಲ್ಲಿ ಆರೋಪಿತರು ಕಂಪನಿಗೆ ಮೋಸ ಮಾಡುವ ಉದ್ದೇಶದಿಂದ 5,00,000/-ರೂಗಳು ಇಂಡೆಂಟ್ ಇರುವ ಎ.ಟಿ.ಎಂ. ಕ್ಯಾಸೆಟ್‌ಗಳಿಗೆ ಹೆಚ್ಚುವರಿಯಾಗಿ 20,00,000/-ರೂಗಳನ್ನು ಕ್ಯಾಶ್ ವಾಲ್ಟ್ ಕಛೇರಿಯಲ್ಲಿ ಕ್ಯಾಶ್ ಲೋಡ್ ಮಾಡಿದ್ದು, ಇದೆ ರೀತಿ ಐದೈದು ಲಕ್ಷ ರೂಗಳಂತೆ ನಾಲ್ಕು ಬಾರಿ ಮಾಡಿ, ಒಟ್ಟು ಇಪ್ಪತ್ತು ಲಕ್ಷ ಹಣವನ್ನು ತೆಗೆದುಕೊಂಡು ತಮ್ಮ ಸ್ವಂತಕ್ಕೆ ಬಳಸಿಕೊಂಡಿರುತ್ತಾರೆ. ಈ ಸಂಬಂಧ ವಿಲ್ಲನ್‌ಗಾರ್ಡನ್‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ತನಿಖೆ ಕೈಗೊಂಡು ತನಿಖಾಧಿಕಾರಿಯವರು ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡಿ, ಆರೋಪಿತರಿಂದ 8,00,000/-ರೂ ನಗದು ಹಣ ಮತ್ತು 1,50,000/- ಬೆಲೆ ಬಾಳುವ ಒಂದು ಐಫೋನ್ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.

ಕೇಂದ್ರ ವಿಭಾಗದ ಉಪ-ಪೊಲೀಸ್ ಆಯುಕ್ತರಾದ ಶ್ರೀ ಶ್ರೀನಿವಾಸ್‌ಗೌಡ ಐಪಿಎಸ್, ಹಲಸೂರುಗೇಟ್ ಉಪ-ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ.ವಿ.ನಾರಾಯಣಸ್ವಾಮಿ ರವರ ಮಾರ್ಗದರ್ಶನದಲ್ಲಿ ವಿಲ್ಸನ್‌ಗಾರ್ಡನ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ.ಎ.ರಾಜು ರವರ ನೇತೃತ್ವದಲ್ಲಿ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ರವರಾದ ಶ್ರೀ.ನಬೀಸಾ ವಾಧಿಕಾರ ಹಾಗೂ ಸಿಬ್ಬಂದಿಯವರುಗಳು ಪ್ರಕರಣವನ್ನು ಬೇದಿಸುವಲ್ಲಿ ಯಶಸ್ವಿಯಾಗಿರುತ್ತಾರೆ.

ಈ ಉತ್ತಮ ಕಾರ್ಯವನ್ನು ಬೆಂಗಳೂರು ನಗರದ ಪೊಲೀಸ್ ಆಯುಕ್ತರಾದ ಶ್ರೀ. ಬಿ .ದಯಾನಂದ ಮತ್ತು ಅಪರ ಪೋಲೀಸ್ ಆಯುಕ್ತರು ಪಶ್ಚಿಮ ಶ್ರೀ ಸತೀಶ್‌ಕುಮಾರ್ ರವರು ಶ್ಲಾಘಿಸಿರುತ್ತಾರೆ.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Next Post

ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವ ಆರೋಪಿಗೆ 20 ವರ್ಷ ಕಠಿಣ ಶಿಕ್ಷೆ ಮತ್ತು 5000 ದಂಡ.

ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ 2018ನೇ ಸಾಲಿನಲ್ಲಿ ದಾಖಲಾಗಿದ್ದ ಪಕರಣ ಕಲಂ-5 (ಎಲ್), 6 ಪೋಸ್ಕೋ ಆಕ್ಟ್, ಕಲಂ-376 ಐಪಿಸಿ ಮತ್ತು 31Xಡಬ್ಲ್ಯೂ ಎಸ್‌ ಸಿ ಎಸ್‌ಟಿ ಆಕ್ಟ್-2015. ಪ್ರಕರಣದ ಸಾರಾಂಶ : ಆರೋಪಿಯು ಪ್ರಕರಣದಲ್ಲಿ ಅಪ್ರಾಪ್ತ ವಯಸ್ಸಿನ ನೊಂದ ಬಾಲಕಿ, 16 ವರ್ಷ ಈಕೆಯ ಮೇಲೆ ದಿನಾಂಕ:29/09/2018 4 ತಿಂಗಳು ಮೊದಲು ಅವರ ಮನೆಗೆ ಹೋಗಿ ಅಪ್ರಾಪ್ತ ಬಾಲಕಿಯ ಮೈಕೈ ಅನ್ನು ಮುಟ್ಟಿ, ಕೈಯಿಂದ ಬಾಯನ್ನು ಮುಚ್ಚಿ ಬಲವಂತದಿಂದ ಅತ್ಯಾಚಾರವೆಸಗಿ, […]

Get News on Whatsapp

by send "Subscribe" to 7200024452
Close Bitnami banner
Bitnami