ಎರಡು ದ್ವಿ-ಚಕ್ರ ವಾಹನಗಳ ಕಳ್ಳರ ಬಂಧನ : ಚಂದ್ರಾಲೇಔಟ್ ಪೊಲೀಸ್ ಠಾಣೆಯ ಕಾರ್ಯಾಚರಣೆ

0 0
Read Time:1 Minute, 38 Second

ಚಂದ್ರಾಲೇಔಟ್ ಪೊಲೀಸ್‌ ಠಾಣಾ ಸರಹದ್ದಿನಲ್ಲಿ ಹ್ಯಾಂಡಲ್ ಲಾಕ್ ಮುರಿದು ದ್ವಿ-ಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡಿ, ಆರೋಪಿಗಳ ಮಾಹಿತಿ ಮೇರೆಗೆ ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಾದ ಬ್ಯಾಟರಾಯನಪುರ, ಕುಂಬಳಗೂಡು, ಹೊಸಕೋಟೆ ಪೊಲೀಸ್ ಠಾಣೆಯ ತಲಾ ಒಂದು ಪ್ರಕರಣ ಹಾಗೂ ಚಂದ್ರಾಲೇಔಟ್ ಪೊಲೀಸ್ ಠಾಣೆಯ ಎರಡು ದ್ವಿ-ಚಕ್ರ ವಾಹನಗಳ ಪ್ರಕರಣಗಳು ಪತ್ತೆಯಾಗಿರುತ್ತವೆ.

ಈ ಕಾರ್ಯಾಚರಣೆಯನ್ನು ಪಶ್ಚಿಮ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಡಾ:ಲಕ್ಷಣ, ಬಿ. ನಿಂಬರಗಿ, ರವರ ಸೂಕ್ತ ಮಾರ್ಗದರ್ಶನದಲ್ಲಿ, ಕೆಂಗೇರಿಗೇಟ್ ಉಪ-ವಿಭಾಗದ ಸಹಾಯಕ ಪೊಲೀಸ್ ಕಮೀಷನರ್ ಶ್ರೀ. ಭರತ್ ಎಸ್ ರೆಡ್ಡಿ ರವರ ನಿರ್ದೇಶನದಲ್ಲಿ, ಚಂದ್ರಾಲೇಔಟ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ ಕೆ.ಎಸ್‌.ಹಟ್ಟಿ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯನ್ನು ಕೈಗೊಂಡು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.

ಈ ಮೇಲ್ಕಂಡ ಅಧಿಕಾರಿಗಳ ಮತ್ತು ಸಿಬ್ಬಂದಿಯವರುಗಳ ಕರ್ತವ್ಯವನ್ನು ಬೆಂಗಳೂರು ನಗರದ ಪೊಲೀಸ್ ಆಯುಕ್ತರಾದ ಬಿ.ದಯಾನಂದ ಮತ್ತು ಅಪರ ಪೊಲೀಸ್ ಆಯುಕ್ತರು ಪಶ್ಚಿಮ ಸತೀಶ್‌ ಕುಮಾರ್ ರವರು ಪ್ರಶಂಸಿರುತ್ತಾರೆ.

ವರದಿ : ಆಂಟೋನಿ ಬೇಗೂರು

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Next Post

ಪ್ರಿಯಕರನೊಂದಿಗೆ ಸೇರಿ ತನ್ನ ಗಂಡನನ್ನೇ ಕೊಲೆ ಮಾಡಿಸಿದ ಆರೋಪಿತೆ, ಆಕೆಯ ಪ್ರಿಯಕರ ಮತ್ತು ಕೊಲೆ ಮಾಡಲು ಸಹಕರಿಸಿದ ಆರೋಪಿಗಳ ಬಂಧನ: ತಲಘಟ್ಟಪುರ ಪೊಲೀಸ್‌ ಠಾಣೆಯ ಕಾರ್ಯಾಚರಣೆ

ತಲಘಟ್ಟಪುರ ಪೊಲೀಸ್ ಠಾಣೆಯ, ಕರ್ತವ್ಯದಲ್ಲಿದ್ದ ಹೊಯ್ಸಳ ಗಸ್ತು ವಾಹನಕ್ಕೆ ದಿನಾಂಕ:29/03/2023 ರಂದು ಬೆಳಗ್ಗೆ 7 ಗಂಟೆಯಲ್ಲಿ ನಿಯಂತ್ರಣ ಕೋಣೆಯಿಂದ, ಬಂದ ಮಾಹಿತಿ ಏನೆಂದರೆ ಬನಶಂಕರಿ 6ನೇ ಹಂತ, ಸೋಂಪುರ, ಗಟ್ಟಿಗೆರೆ ಪಾಳ್ಯದಿಂದ ವರಾಹಸಂದ್ರಕ್ಕೆ ಹೋಗುವ ನೈಸ್ ರಸ್ತೆ ಬ್ರಿಡ್ಜ್ ಬಳಿ ಅಪರಿಚಿತ ಗಂಡಸಿನ ಶವವಿರುತ್ತೆ. ಕೂಡಲೆ ಹೊಯ್ಸಳ ವಾಹನವು ಸದರಿ ಸ್ಥಳಕ್ಕೆ ಹೋಗಿ ನೋಡಲಾಗಿ ಸುಮಾರು 27-30 ವರ್ಷ ವಯಸ್ಸಿನ ಯಾರೋ ದುಷ್ಕರ್ಮಿಗಳು ಯಾವುದೋ ದುರುದ್ದೇಶದಿಂದ ಆತನ ಮುಖ, ತಲೆ, […]

Get News on Whatsapp

by send "Subscribe" to 7200024452
Close Bitnami banner
Bitnami