ವಿಶ್ವ ಮಾದಕ ವಸ್ತುಗಳ ಸೇವನೆ ಮತ್ತು ಕಳ್ಳಸಾಗಾಣಿಕೆ ವಿರೋಧಿ ದಿನಾಚರಣೆ ಮತ್ತು ವಶಪಡಿಸಿಕೊಂಡ ಮಾದಕ ವಸ್ತುಗಳ ನಾಶಪಡಿಸುವ ಕಾರ್ಯಕ್ರಮ

0 0
Read Time:7 Minute, 14 Second

ಪ್ರತಿ ವರ್ಷ ಜೂನ್ 26 ನೇ ದಿನಾಂಕದಂದು ಪ್ರಪಂಚದಾದ್ಯಂತ, ಮಾದಕ ವ್ಯಸನ ಮತ್ತು
ಅಕ್ರಮ ಕಳ್ಳಸಾಗಾಣಿಕೆ ವಿರುದ್ಧ ಅಂತರ್ ರಾಷ್ಟ್ರೀಯ ದಿನ ದಿನಾಚರಣೆಯನ್ನು ಹಮ್ಮಿಕೊಳ್ಳಲಾಯಿತು. ಇದರ ಅಂಗವಾಗಿ ಬೆಂಗಳೂರು ನಗರ ಪೊಲೀಸ್‌ ಘಟಕದ ವತಿಯಿಂದ ಡ್ರಗ್ಸ್ ಪ್ಲಡರ್ | ಕನ್ಸೂಮರ್ ಗಳ ವಿರುದ್ಧ ವಿಶೇಷ ಕಾರ್ಯಾಚರಣೆ, ಅಮಾನತ್ತುಪಡಿಸಿದ್ದ ಡಗ್ಸ್ ಗಳ ನಾಶಪಡಿಸುವ, ಶಾಲಾ ಕಾಲೇಜುಗಳಲ್ಲಿ ಜಾಗೃತಿ ಅಭಿಯಾನಗಳನ್ನು ಕೈಗೊಳ್ಳಲಾಯಿತು.

ಬೆಂಗಳೂರು ನಗರದ ಪೊಲೀಸ್ ಠಾಣೆಗಳಲ್ಲಿ 2022 ಮತ್ತು 2023 ನೇ ಸಾಲಿನಲ್ಲಿ (22.06, 2023 ರವರೆಗೆ) ಮಾದಕ ವಸ್ತುಗಳ ಮಾರಾಟ ಮತ್ತು ಸೇವನೆ ಮಾಡುವವರ ವಿರುದ್ಧ ಒಟ್ಟು 6191 ಪ್ರಕರಣಗಳನ್ನು ದಾಖಲಿಸಿ, 7723 ಭಾರತೀಯರು ಹಾಗೂ 159 ವಿದೇಶಿ ಪ್ರಜೆಗಳನ್ನು ಬಂಧಿಸಲಾಗಿರುತ್ತದೆ. ಅವುಗಳಲ್ಲಿ 943 ಪ್ರಕರಣಗಳನ್ನು ಡ್ರಗ್ ಪ್ಲಾಡಲೆರ್ ಗಳ ಮೇಲೂ ಹಾಗೂ 5248 ಪ್ರಕರಣಗಳನ್ನು ಡ್ರಗ್ ಸೇವನೆ ಮಾಡುವವರ ವಿರುದ್ಧ ದಾಖಲಿಸಲಾಗಿದೆ. ಆರೋಪಿಗಳಿಂದ ಅಂದಾಜು 117 ಕೋಟಿ ರೂ ಬೆಲೆ ಬಾಳುವ 6261 ಕೆ.ಜಿ.ಯಷ್ಟು ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅದರಲ್ಲಿ ಗಾಂಜಾ- 1074.685 ಕೆ.ಜಿ, ಗಾಂಜಾ ಅಯಲ್ 5.5 ಕೆ.ಜಿ, ಬ್ರೌನ್ ಷುಗರ್ 2.554 ಕೆ.ಜಿ, ಅಫೀಮು 15.689 ಕೆ.ಜಿ. ಎಂ.ಡಿ.ಎಂ.ಎ-52.689 ಕೆ.ಜಿ. ಸಿಂಥೆಟಿಕ್ ಡ್ರಗ್ಸ್ 109,914 ಕೆ.ಜಿ. 3406 ವಿವಿಧ ರೀತಿಯ ಮಾತ್ರೆಗಳು ಹಾಗೂ 1372 ಎಲ್‌ಎಸ್‌ ಡಿ ಸ್ಟ್ರಿಪ್ಸ್ ಸೇರಿವೆ.

ದಿನಾಂಕ: 24.03,2023 ರಂದು NCCORD ವತಿಯಿಂದ ಏರ್ಪಡಿಸಿದ್ದ ದಕ್ಷಿಣ ರಾಜ್ಯಗಳ Drug Trafficking and National Security ಸಮಾವೇಶದ ಅಂಗವಾಗಿ ಸುಮಾರು 92 ಕೋಟಿ ರೂ ಮೌಲ್ಯದ ವಿವಿಧ ಬಗೆಯ 4397.855 ಕೆ.ಜಿ ತೂಕದ ಮಾದಕ ವಸ್ತುಗಳು ಹಾಗೂ 8199 ವಿವಿಧ ರೀತಿಯ ಮಾತ್ರೆಗಳು ಮತ್ತು 584 ಎಲ್‌ ಎಸ್‌ ಡಿ ಸ್ಟ್ರಿಪ್ಸ್ ಗಳನ್ನು ನಾಶಪಡಿಸಲಾಗಿರುತ್ತದೆ.

ಪ್ರಸ್ತುತ ವಿಶ್ವ ಮಾದಕ ವಸ್ತುಗಳ ಸೇವನೆ ಮತ್ತು ಕಳ್ಳಸಾಗಾಣಿಕೆ ವಿರೋಧಿ ದಿನಾಚರಣೆ ಅಂಗವಾಗಿ ಡ್ರಗ್ಸ್ ಡಿಸ್ಪೋಸಲ್ ಕಮಿಟಿಗೆ ಬೆಂಗಳೂರು ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಪ್ರಕರಣಗಳಿಂದ ಒಟ್ಟು 2117,568 ಕೆ.ಜಿ. ಯಷ್ಟು ಮಾದಕ ವಸ್ತುಗಳನ್ನು ಹಸ್ತಾಂತರಿಸಲಾಗಿದೆ. ಇವುಗಳಲ್ಲಿ 2053,486 ಕೆ.ಜಿ. ಗಾಂಜಾ, 1.392 ಕೆ.ಜಿ. ಪೀಡ್ ಆಯಿಲ್, 9,232 ಕೆ.ಜಿ. ಹಾಶಿಷ್ ಆಯಿಲ್, 23 ಗ್ರಾಂ ಬ್ರೌನ್ ಷುಗರ್, 12,278 ಕೆ.ಜಿ. ಅಫೀಮು, 9,325 ಕೆ.ಜಿ. ಚರಸ್, 568 ಗ್ರಾಂ ಕೊಕೈನ್. 13 ಗ್ರಾಂ ಹೆರಾಯಿನ್, 5.353 ಕೆ.ಜಿ. ಎಂ.ಡಿ.ಎಂ.ಎ, 290 ಎಂ.ಡಿ.ಎಂ.ಎ ಮಾತ್ರೆಗಳು, 137 ಎಕ್ಸಟೆಸಿ ಮಾತ್ರೆಗಳು, 931 ಗ್ರಾಂ ಎಕ್ಸಟೆಸಿ, ಮಾತ್ರೆಗಳು, 654 ಗ್ರಾಂ ಮೆತಾಕ್ವೆಲಾನ್, 13 ಗ್ರಾಂ ಎಲ್.ಎಸ್.ಡಿ ಸ್ಟ್ರೀಪ್ ಹಾಗೂ 93 ಎಲ್.ಎಸ್.ಡಿ. ಸ್ಕ್ರಿಪ್‌ಗಳು ಮತ್ತು 24,300 ಕೆ.ಜಿ. ಎಸ್ಕಾಫ್ ಸಿರಪ್ ಇತ್ಯಾದಿ ಮಾದಕ ವಸ್ತುಗಳನ್ನು ಹಸ್ತಾಂತರಿಸಲಾಗಿದೆ. ಸದರಿ ಮಾದಕ ವಸ್ತುಗಳ ಅಂದಾಜು ಮೌಲ್ಯ ಸುಮಾರು 21 ಕೋಟಿ ರೂಗಳಾಗಿದ್ದು, ಅವುಗಳನ್ನು ನಾಶಪಡಿಸಲು ನ್ಯಾಯಾಲಯದಿಂದ ಆದೇಶವನ್ನು ಪಡೆಯಲಾಗಿರುತ್ತದೆ, ಹಾಗೂ ಸದರಿ ಮಾದಕ ವಸ್ತುಗಳನ್ನು ಈ ದಿವಸ ವೈಜ್ಞಾನಿಕವಾಗಿ ಭಸ್ಮಕ ಯಂತ್ರದಲ್ಲಿ ಹಾಕಿ ನಾಶಪಡಿಸಲಾಗುವುದು.

ಕಳೆದ ಒಂದು ತಿಂಗಳಿನಿಂದ ಬೆಂಗಳೂರು ನಗರ ಪೊಲೀಸರು ವಿದ್ಯಾಸಂಸ್ಥೆಗಳ ಬಳಿ ಮಾದಕ ವಸ್ತು ಪದಾರ್ಥಗಳ ಮಾರಾಟ / ಸೇವನೆ ಮಾಡುತ್ತಿದ್ದವರ ವಿರುದ್ಧ ನಿರಂತರ ವಿಶೇಷ ಕಾರ್ಯಾಚರಣೆ ನಡೆಸಿ ಮಾರಾಟ ಮಾಡುತ್ತಿದ್ದವರು ಮತ್ತು ಸೇವನೆ ಮಾಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸಿದೆ.

ಈ ದಿನ ವಿಶ್ವ ಮಾದಕ ವಸ್ತುಗಳ ಸೇವನೆ ಮತ್ತು ಕಳ್ಳಸಾಗಾಣಿಕೆ ವಿರೋಧಿ ದಿನ ಅಂಗವಾಗಿ ಬೆಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಎಲ್ಲಾ ದರ್ಜೆಯ ಪೊಲೀಸ್ ಅಧಿಕಾರಿಗಳು ಅಂದರೆ ನಗರ ಪೊಲೀಸ್ ಆಯುಕ್ತರಿಂದ ಪೊಲೀಸ್ ಉಪ ನಿರೀಕ್ಷಕರನ್ನು ಒಳಗೊಂಡಂತೆ, ಒಟ್ಟು 618 ಅಧಿಕಾರಿಗಳು, 388 ಶಾಲೆ, 253 ಕಾಲೇಜು ಹಾಗೂ 51 ವೃತ್ತಿನಿರತ ಕಾಲೇಜುಗಳಿಗೆ ಇಂದು ಭೇಟಿ ನೀಡಿ, ಸುಮಾರು 1,95,000 ವಿದ್ಯಾರ್ಥಿಗಳಿಗೆ ಮಾದಕ ವಸ್ತು ದ್ರವ್ಯಗಳ ಸೇವನೆಯಿಂದ ಆಗುವ ಹಾನಿ ಹಾಗೂ ಎನ್.ಡಿ.ಪಿ.ಎಸ್ ಕಾಯ್ದೆ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ.

BCP NDPS Portal” ತಂತ್ರಾಂಶ ಅನಾವರಣ

ಬೆಂಗಳೂರು ನಗರ ಪೊಲೀಸರು ಮಾದಕ ವಸ್ತುಗಳ ಮಾರಾಟಗಾರರ ವಿರುದ್ಧ ಸಮರ ಸಾರಿದ್ದು, ಮಾದಕ ವಸ್ತುಗಳ ಮಾರಾಟವನ್ನು ತಡೆಗಟ್ಟುವುದರ ಜೊತೆಗೆ ಅದನ್ನು ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿರುವುದಕ್ಕೆ ಸದರಿಯವರ ವಿರುದ್ಧ ದಾಖಲಿಸಿರುವ ಪ್ರಕರಣಗಳೇ ಸಾಕ್ಷಿಯಾಗಿರುತ್ತವೆ.
ಅಲ್ಲದೆ ಮಾದಕ ವಸ್ತುಗಳನ್ನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ಹವ್ಯಾಸಿ ಮಾರಾಟಗಾರರ ಬಗ್ಗೆ ಮಾಹಿತಿ ಕಲೆ ಹಾಕಿ, ಇಬ್ಬರು ಮಾರಾಟಗಾರರ ವಿರುದ್ಧ ಮಾದಕ ವಸ್ತು ಕಾಯ್ದೆಯಡಿಯಲ್ಲಿ, ಸೂಕ್ತ ಕಾನೂನು ರೀತ್ಯಾ ಕ್ರಮಕೈಗೊಂಡು ಸದರಿಯವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಈ ರೀತಿಯಾಗಿ ಹವ್ಯಾಸಿ ಮಾದಕ ವಸ್ತುಗಳ ಮಾರಾಟಗಾರರ ಬಗ್ಗೆ ಕ್ರೋಢೀಕರಿಸಿದ ಮಾಹಿತಿಯನ್ನೊಳಗೊಂಡ ಒಂದು ದತ್ತಾಂಶ ಸಂಗ್ರಹಣೆಯ (Database) ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದೆ. ಈ ದತ್ತಾಂಶ ಸಂಗ್ರಹಣೆ (Database) ನಿಂದ ಬೆಂಗಳೂರು ನಗರದ ಪೊಲೀಸರಿಗೆ ಅವಶ್ಯಕವಾದ ಮಾಹಿತಿ ಅವರ ಅಂಗೈಯಲ್ಲೇ ದೊರಕುವಂತಾಗಿದೆ. ಅಲ್ಲದೇ ಈ ದಿನ ಮಾದಕವಸ್ತು ಮಾರಾಟಗಾರರ ಬಗ್ಗೆ ಹೆಚ್ಚು ಮಾಹಿತಿದೊರಕುವಂತೆ ಮಾಡಿರುವ ಒಂದು ಪೋರ್ಟಲ್‌ನ್ನು ಅನಾವರಣ ಮಾಡಲಾಗುತ್ತಿದೆ.

ಪ್ರತಿಜ್ಞೆ

ಈ ದಿನ ವಿಶ್ವ ಮಾದಕ ವಸ್ತುಗಳ ಸೇವನೆ ಮತ್ತು ಕಳ್ಳಸಾಗಾಣಿಕೆ ವಿರೋಧಿ ದಿನಾಚರಣೆ ಅಂಗವಾಗಿ ಬೆಂಗಳೂರು ನಗರದಲ್ಲಿ ಸಾರ್ವಜನಿಕರು ಪೊಲೀಸರೊಂದಿಗೆ ತಮ್ಮ ಕೈಜೊಡಿಸಿ ಅಂತರ್ಜಾಲದ ಮೂಲಕ “Say yes to life, No To Drugs” ಎಂಬ ಪ್ರತಿಜ್ಞೆ ಧೈಯವಾಕ್ಯದೊಂದಿಗೆ ಉತ್ತಮ ಸಮಾಜ ನಿರ್ಮಾಣ ಮಾಡಲು ಸಹಕರಿಸಲು ಕೋರಿದೆ. ಈ ಕಾರ್ಯಕ್ಕೆ ಸಹಕರಿಸಿದ ಸಾರ್ವಜನಿಕರಿಗೆ ಅಂತರ್ಜಾಲದ ಮೂಲಕ ಪ್ರಮಾಣ ಪತ್ರವನ್ನು ಪಡೆಯುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ವರದಿ : ಆಂಟೋನಿ ಬೇಗೂರು

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Next Post

ಕ್ಷುಲ್ಲಕ ಕಾರಣಕ್ಕಾಗಿ ಗಲಾಟೆ ಮಾಡಿ, ಕೊಲೆ ಮಾಡಲು ಪ್ರಯತ್ನಿಸಿದ ಆರೋಪಿಯ ಬಂಧನ

ದರ್ಶನ್ ಗೋವಿಂದರಾಜು 30 ವರ್ಷ, ಜಯನಗರ ವಾಸಿ, ಬೆಂಗಳೂರು ಅವರಿಗೆ ತಮ್ಮ ಸ್ನೇಹಿತರೊಬ್ಬರು ದಿನಾಂಕ 10-06-2023 ರಂದು ಫೋರ್ ಸೀಜನ್ ಹೊಟೇಲ್‌ನಲ್ಲಿ ಮದುವೆ ಕಾರ್ಯಕ್ರಮಕ್ಕೆ ಅಹ್ವಾನ ನೀಡಿದ್ದು, ಅದರಂತೆ ಮದುವೆ ಕಾರ್ಯಕ್ರಮಕ್ಕೆ ಹೋಗಿರುತ್ತಾರೆ. ಸದರಿ ಮದುವೆ ಕಾರ್ಯಕ್ರಮದಲ್ಲಿ ತನಗೆ ಪರಿಚಯವಿರುವ ವ್ಯಕ್ತಿಯೊಬ್ಬ ತನ್ನನ್ನು ಮಾತನಾಡಿಸುತ್ತಿಲ್ಲವೆಂಬ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಮಾಡಿಕೊಂಡು ಮದ್ಯದ ಬಾಟಲಿಯಿಂದ ದರ್ಶನ್ ಗೋವಿಂದರಾಜು ರವರಿಗೆ ಹಲ್ಲೆ ಮಾಡಿ ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಆರ್.ಟಿ.ನಗರ […]

Get News on Whatsapp

by send "Subscribe" to 7200024452
Close Bitnami banner
Bitnami