Read Time:1 Minute, 6 Second
ಈ ಕೇಸಿನ ತನಿಖೆ ಕೈಗೊಂಡ ಜ್ಞಾನಭಾರತಿ ಪೊಲೀಸ್ ಠಾಣೆಯ ಅಧಿಕಾರಿಗಳು ನಂಬಿಕೆಯಿಂದ ಮನೆ ಕೆಲಸ ಕೊಟ್ಟಿದ್ದ ಮಾಲೀಕರ ಮನೆಯಲ್ಲಿ ಮನೆ ಕೆಲಸ ಮಾಡುತ್ತಿದ್ದ ಮಹಿಳೆಯೇ ಮನೆಯ ಮಾಲೀಕರಿಗೆ ತಿಳಿಯದಂತೆ ಆಗಿಂದಾಗ್ಗೆ ಅವಕಾಶ ಸಿಕ್ಕಾಗಲೆಲ್ಲಾ ನಗದು ಹಣ, ಚಿನ್ನಾಭರಣ ಕಳವು ಮಾಡಿರುವ ಮಹಿಳೆಯನ್ನು ಪತ್ತೆ ಮಾಡಿ ಆಕೆಯಿಂದ ಕಳವು ಮಾಡಿದ್ದ 1,50,000/- ಬೆಲೆ ಬಾಳುವ 31 ಗ್ರಾಂ ತೂಕದ ಚಿನ್ನಾಭರಣ ಗಳನ್ನು ಅಮಾನತ್ತುಪಡಿಸಿಕೊಂಡಿದ್ದಾರೆ. ಕಳವು ಮಾಡಿದ್ದ ನಗದು ಹಣವನ್ನು ಆಕೆಯು ತನ್ನ ಸ್ವಂತಕ್ಕೆ ಖರ್ಚು ಮಾಡಿಕೊಂಡಿರುವದಾಗಿ ತಿಳಿದು ಬಂದಿರುತ್ತದೆ.
ಮಹಿಳೆಯನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ಮನೆ ಕೆಲಸಕ್ಕೆ ನೇಮಕ ಮಾಡಿಕೊಳ್ಳವ ಪೂರ್ವದಲ್ಲಿ ಅವರುಗಳ ನಡೆತ ಪೂರ್ವ ಚರಿತ್ರೆ ಬಗ್ಗೆ ತಪಾಸಣೆ
ನಡೆಸಿಕೊಳ್ಳಲು ಸೂಚಿಸಲಾಗಿದೆ.