ಮಂಡ್ಯ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಜಿಲ್ಲಾ ಮಟ್ಟದ ವಾರದ ಕವಾಯತು ಕೈಗೊಂಡಿದ್ದು ಪೊಲೀಸ್ ಅಧೀಕ್ಷಕರಾದ ಶ್ರೀ ಯತೀಶ್.ಎನ್ ಐಪಿಎಸ್ ರವರು ಗೌರವ ವಂದನೆಯನ್ನು ಸ್ವೀಕರಿಸಿ ಕವಾಯತನ್ನು ವೀಕ್ಷಿಸಿಸಿದರು. ನಂತರ ಠಾಣೆಗೆ ಬರುವ ಸಾರ್ವಜನಿಕರೊಡನೆ ಸೌಜನ್ಯದಂತೆ ನಡೆದುಕೊಳ್ಳವಂತೆ ಹಾಗೂ ಠಾಣೆಗಳಲ್ಲಿ ಸಿಬ್ಬಂದಿಗಳು ತಮ್ಮ ಬೀಟ್ ಕರ್ತವ್ಯವನ್ನು ಉತ್ತಮವಾಗಿ ನಿರ್ವಹಿಸಲು ಸೂಚಿಸಿದರು. ಕವಾಯಿತಿನಲ್ಲಿ ಹಾಜರಿದ್ದ ಅಧಿಕಾರಿ & ಸಿಬ್ಬಂದಿಗಳ ಕುಂದುಕೊರತೆಗಳ ಬಗ್ಗೆ ವಿಚಾರಿಸಿದರು.
ಇ.ಆರ್.ಎಸ್.ಎಸ್ ಸಿಬ್ಬಂದಿಗೆ ಪ್ರಶಂಸನೆ: ಬೆಂಗಳೂರು ಜಿಲ್ಲೆಯಲ್ಲಿ ERSS-112 ಸಿಬ್ಬಂದಿಯವರಾದ ಲಿಂಗರಾಜ್ ಹುಡೇದ ಸಿ.ಪಿ.ಸಿ 435 ಮತ್ತು ಬಸನಗೌಡ ಪಾಟೀಲ ಎ.ಪಿ.ಸಿ 130 ರವರಿಗೆ ದೂರುದಾರರು ನೀಡಿದ ಮಾಹಿತಿ ಮೇರೆಗೆ ನೆಲಮಂಗಲ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಮೈಮಾಪೂರ ಗೇಟ್ ಬಳಿ ಅಪಘಾತವಾಗಿದೆ ಎಂದು ತಿಳಿಸಿದ ತಕ್ಷಣ ಸ್ಥಳಕ್ಕೆ ಹೋಗಿ ನೋಡಲಾಗಿ ಲಾರಿಯು ಬೈಕ್ ಚಾಲಕನ ಮೇಲೆ ಹರಿದಿದ್ದು ಚಾಲಕನು ಸ್ಥಳದಲ್ಲೇ ಮೃತಪಟ್ಟಿರುತ್ತಾನೆ ಮತ್ತು ಹಿಂಬದಿ ಕುಳಿತಂತಹ ವ್ಯಕ್ತಿಗೆ ಗಂಭೀರ ಗಾಯಗಳಾಗಿದ್ದು […]