ಬೇಗೂರು ಪೊಲೀಸರಿಂದ 20 ಪ್ರಕರಣಗಳು ಪತ್ತೆ : ಇನ್ಸ್ಪೆಕ್ಟರ್ ಅನಿಲ್ ಕುಮಾರ್ ತಂಡ

John Prem 9448190523
1 0
Read Time:4 Minute, 30 Second

ಬೇಗೂರು ಪೊಲೀಸರು. ಕುಖ್ಯಾತ ಚಿನ್ನಕಳವು ಆರೋಪಿಗಳು ಹಾಗೂ ಗಿರವಿ ಅಂಗಡಿಗಳಿಗೆ ಗ್ರಾಹಕರ ಸೋಗಿನಲ್ಲಿ ಹೋಗಿ ಕಳವು ಮಾಡುತ್ತಿದ್ದ ಆರೋಪಿ ಹಾಗೂ ಸೇವಕರ ಕಳವು ಆರೋಪಿಗಳನ್ನು ಬಂಧಿಸಿ ೨೦ ಪ್ರಕರಣಗಳನ್ನು ಪತ್ತೆ ಹಚ್ಚಿದ್ದಾರೆ. ಬಂಧಿತ ಆರೋಪಿಗಳಿಂದ ೨೮.ಲಕ್ಷ ಮೌಲ್ಯದ ೪೭೫ ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
ಬೇಗೂರಿನಲ್ಲಿ ನಡೆದಿದ್ದ ಚಿನ್ನಕಳವು ಪ್ರಕರಣವನ್ನು ದಾಖಲಿಸಿದ ಇನ್ಸ್‌ಪೆಕ್ಟರ್ ಅನಿಲ್ ಕುಮಾರ್, ಸಿಬ್ಬಂದಿ ಆರೋಪಿಯೊಬ್ಬನನ್ನು ಬಂಧಿಸಿ ಆತನಿಂದ ೬೬ ಗ್ರಾಂ ಚಿನ್ನಾಭರಣವನ್ನು ಜಪ್ತಿ ಮಾಡಿ ತನಿಖೆಯನ್ನು ಮುಂದುವರೆಸಿ ೨ ದಿನಗಳಲ್ಲಿ ಮತ್ತಿಬ್ಬರನ್ನು ಬಂಧಿಸಿ ಚಿನ್ನದ ಮಾಂಗಲ್ಯ ಸರವನ್ನು ವಶಪಡಿಸಿಕೊಂಡಿದ್ದಾರೆಂದು ತಿಳಿಸಿದರು.
ಹಗಲು ರಾತ್ರಿ ಮನೆಕಳವು ಮಾಡುತ್ತಿದ್ದ ಕುಖ್ಯಾತ ೮ ಮಂದಿ ಕಳ್ಳರನ್ನು ಬಂಧಿಸಿ ಭರ್ಜರಿ ಬೇಟೆಯಾಡಿರುವ ಆಗ್ನೇಯ ವಿಭಾಗದ ಪೊಲೀಸರು ೧.೯೫ ಕೋಟಿ ಮೌಲ್ಯದ ಚಿನ್ನ, ಬೆಳ್ಳಿ ಇನ್ನಿತರ ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತರಲ್ಲಿ ಕುಖ್ಯಾತ ರೌಡಿ ಬಾಲಾಜಿ ಅಲಿಯಾಸ್ ಪ್ರಕಾಶ್ ಸೇರಿದ್ದು, ಬಂಧಿತರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿಯವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಎಚ್‌ಎಸ್‌ಆರ್ ಲೇಔಟ್‌ನ ಪೊಲೀಸರು ಶ್ರೀಮಂತರ ಮನೆಗಳನ್ನು ಗುರಿಯಾಗಿಸಿಕೊಂಡು ಮನೆಗಳವು ಮಾಡುತ್ತಿದ್ದ ಹಾಗೂ ಕಳ್ಳತನಕ್ಕೆ ಸಹಕರಿಸುತ್ತಿದ್ದ ಕುಖ್ಯಾತ ರೌಡಿಯನ್ನು ಬಂಧಿಸಿ ಒಂದೂವರೆ ಕೆಜಿ ಚಿನ್ನ ನಕಲಿ ಕೀಗಳು, ನಕಲಿ ಕೀಗಳನ್ನು ತಯಾರಿಸುತ್ತಿದ್ದ ಟೂಲ್‌ಕಿಟ್‌ಗಳು, ೨ ದ್ವಿಚಕ್ರ ವಾಹನ, ೧ ಮೊಬೈಲ್ ಸೇರಿ ೭೫ ಲಕ್ಷ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ.ಬಂಧಿತರಲ್ಲಿ ಅನಿಲ್ ಕುಮಾರ್, ಯಶವಂತ್ ಕುಮಾರ್ ಎಂಬ ಇಬ್ಬರು ಕುಖ್ಯಾತ ಕಳ್ಳರಿದ್ದು ಅವರ ಬಂಧನದಿಂದ ಬಂಡೇಪಾಳ್ಯದ ಮೂರು, ಎಚ್‌ಎಸ್‌ಆರ್ ಲೇಔಟ್, ಕೋರಮಂಗಲ ಎರಡು, ಬೊಮ್ಮನಹಳ್ಳಿ, ಹುಳಿಮಾವು, ಸದಾಶಿವನಗರ, ವಿವೇಕನಗರ, ಮಾರತಹಳ್ಳಿ ತಲಾ ಒಂದು ಸೇರಿದಂತೆ ೧೨ ಮನೆಕಳವು ಪ್ರಕರಣಗಳು ಪತ್ತೆಯಾಗಿವೆ ಎಂದರು.
ಬಂಧಿತ ರೌಡಿ ಪ್ರಕಾಶ್ ಅಲಿಯಾಸ್ ಬಾಲಾಜಿ ಇನ್ನಿಬ್ಬರು ಕಳ್ಳರಿಗೆ ಮನೆಗಳವು ಮಾಡುವುದಕ್ಕೆ ಸಹಕರಿಸುತ್ತಿರುವುದು ತನಿಖೆಯಲ್ಲಿ ಕಂಡು ಬಂದಿದ್ದು, ಲಕ್ಷ್ಮೀನಾರಾಯಣ ನೇತೃತ್ವದಲ್ಲಿ ಇನ್ಸ್‌ಪೆಕ್ಟರ್ ರವಿ ಮತ್ತು ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.
ಪರಪ್ಪನ ಅಗ್ರಹಾರ ಪೊಲೀಸರು ಚಿನ್ನಗಳವು ಮಾಡುತ್ತಿದ್ದ ವಿನಿತ್ ಅಲಿಯಾಸ್ ನಾಗೇಶ್, ಲಕ್ಷ್ಮಣ್ ಅಲಿಯಾಸ್ ಸೈಕಲ್‌ನನ್ನು ಬಂಧಿಸಿ ೧೬.೫೦ ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಪರಪ್ಪನ ಅಗ್ರಹಾರದ ಚಿನ್ನಮಾಗಮಂಗಲದ ನಾಗರಾಜ್ ಎಂಬುವವರ ಮನೆಗೆ ನುಗ್ಗಿ ಚಿನ್ನಾಭರಣವನ್ನು ಕಳವು ಮಾಡಿದ್ದ ಪ್ರಕರಣವನ್ನು ದಾಖಲಿಸಿದ ಪರಪ್ಪನ ಅಗ್ರಹಾರ ಇನ್ಸ್‌ಪೆಕ್ಟರ್ ನರೇಂದ್ರ ಕುಮಾರ್ ಮತ್ತು ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡು ಆರೋಪಿಗಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಗಳು ತಲೆ ಮೆರೆಸಿಕೊಂಡಿರುವ ಮತ್ತೊಬ್ಬನ ಜತೆ ಸೇರಿ ನಾಗರಾಜು ಅವರ ಮನೆಯ ಕನ್ನಗಳವು ಮಾಡಿ ೨೧೦ ಗ್ರಾಂ ತೂಕದ ಚಿನ್ನಾಭರಣವನ್ನು ಸ್ನೇಹಿತರು ಹಾಗೂ ಸಂಬಂಧಿಕರಿಗೆ ಮಾರಾಟ ಮಾಡಿ ೧೦ ಲಕ್ಷ ಹಣ ಪಡೆದು ಗೋವಾ, ಪಾಂಡಿಚೇರಿಗೆ ಹೋಗಿ ಮೋಜು ಮಾಡಿದ್ದರು ಎಂದು ಪ್ರತಾಪ್ ರೆಡ್ಡಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಆಗ್ನೇಯ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಡಿಸಿಪಿ ಚಂದ್ರಶೇಖರ್ ಸಿ.ಕೆ ಬಾಬಾ, ಎಸಿಪಿಗಳಾದ ಲಕ್ಷ್ಮಣ್ ರಾಣಾ, ಲಕ್ಷ್ಮಯ್ಯ ಇದ್ದರು.

Antony Raju A -Citizen Reporter-Karnataka
Happy
Happy
0 %
Sad
Sad
0 %
Excited
Excited
100 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Next Post

ನಾಯಿಗಳ‌ ಕೈಗೆ ಸಿಕ್ಕಿ ಪ್ರಾಣ ಉಳಿಸಿಕೊಳ್ಳಲು ಪರದಾಡುತ್ತಿದ್ದ ಬಾಲಕನ ಪ್ರಾಣವನ್ನ ಪೊಲೀಸ್ ಕಾನ್ಸ್ ಟೇಬಲ್

ರಂಜಾನ್ ಕೊನೆ‌ ದಿನದ ಉಪವಾಸದ ಪ್ರಾರ್ಥನೆಗೆ ಮಸೀದಿಗೆ ತೆರಳುತಿದ್ದ ಬಾಲಕನ ಮೇಲೆ ನಾಯಿಗಳು ಏಕಾಏಕಿ ದಾಳಿ ನಡೆಸಿ ಗಾಯಗೊಳಿಸಿದ್ದು, ನಾಯಿಗಳ‌ ಕೈಗೆ ಸಿಕ್ಕಿ ಪ್ರಾಣ ಉಳಿಸಿಕೊಳ್ಳಲು ಪರದಾಡುತ್ತಿದ್ದ ಬಾಲಕನ ಪ್ರಾಣವನ್ನ ಪೊಲೀಸ್ ಕಾನ್ಸ್ ಟೇಬಲ್ ವೊಬ್ಬರು ಉಳಿಸಿದ ಘಟನೆ ನಡೆದಿದೆ. ಮುಂಜಾನೆ ಕೋಲಾರದ ರಹಮತ್ ನಗರದ 9 ವರ್ಷದ ಬಾಲಕ ಜಾಫರ್ ರಂಜಾನ್ ಕೊನೆಯ ದಿನದ ಜಾಗರಣೆಯನ್ನು ಮಸೀದಿಯಲ್ಲಿ ಮುಗಿಸಿದ್ದ.ಮನೆಗೆ ಬಂದು ಮತ್ತೆ ಮನೆಯಿಂದ ಪ್ರಾರ್ಥನೆಗಾಗಿ ಮಸೀದಿಗೆ ತೆರಳುತ್ತಿದ್ದ.ಈ ವೇಳೆ […]

Get News on Whatsapp

by send "Subscribe" to 7200024452
Close Bitnami banner
Bitnami