ಹೊಸಕೋಟೆ ಪೊಲೀಸ್ ಉಪ ವಿಭಾಗದಿಂದ ಭರ್ಜರಿ ಬೇಟೆ ಒಂದುವರೆ ಕೆಜಿ ಚಿನ್ನ, ನಗದು ವಶ

0 0
Read Time:4 Minute, 6 Second

ಹೊಸಕೋಟೆ ವಿಭಾಗದಲ್ಲಿ ಪೊಲೀಸರು ಭರ್ಜರಿ ಬೇಟೆಯಾಡಿದ್ದು ಸುಮಾರು 87 ಲಕ್ಷ ಬೆಲೆಬಾಳುವ ಒಂದುವರೆ ಕೆಜಿ ಚಿನ್ನ ಹಾಗೂ ನಗದನ್ನು ವಶಪಡಿಸಿಕೊಂಡಿದ್ದಾರೆ.
ಹೊಸಕೋಟೆ ನಗರ ಹಾಗೂ ಅವಲಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಲವು ಪ್ರಕರಣಗಳನ್ನು ಭೇದಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪಾಲಿಶ್ ನೆಪದಲ್ಲಿ ಕಳ್ಳತನ: ಪಕೀರನ ವೇಷ ಧರಿಸಿ ಗೃಹಣಿಯರನ್ನು ಗುರಿಯಾಗಿಸಿ ಮನೆಗಳಲ್ಲಿ ಚಿನ್ನಾಭರಣಗಳನ್ನು ಮಾಡುವುದಾಗಿ ನಂಬಿಸಿ ನಕಲಿ ಚಿನ್ನದ ಆಭರಣಗಳನ್ನು ಇಟ್ಟು ಅಸಲಿ ಚಿನ್ನದ ಆಭರಣಗಳನ್ನು ಶಿಕಾರಿಪುರದ ಮೂಲದ ಸೈಯದ್ ಸಲೀಂ ಕಳ್ಳತನ ಮಾಡಿ ಪರಾರಿ ಯಾಗುತ್ತಿದ್ದನು. ಖಚಿತ ಮಾಹಿತಿ ಮೇರೆಗೆ ಹೊಸಕೋಟೆ ಪೊಲೀಸರು ಈತನನ್ನು ವಶಕ್ಕೆ ತೆಗೆದುಕೊಂಡಾಗ ಆಂಧ್ರಪ್ರದೇಶ. ತಮಿಳುನಾಡು. ಸೇರಿದಂತೆ ಒಟ್ಟು 12 ಪ್ರಕರಣಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಈತನಿಂದ 20 ಲಕ್ಷ ಬೆಲೆಬಾಳುವ 300 ಗ್ರಾಂ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ.

ಮನೆ ಬೇಗ ಮುರಿದು ಕಳ್ಳತನ:
ಬೀಗ ಹಾಕಿದ ಮನೆಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದ ದೊಡ್ಡಬಳ್ಳಾಪುರದ ಆನಂದ್ ನೆಲಮಂಗಲದ ಭರತ್ ನನ್ನು ಬಂಧಿಸಿ ಐದು ಪ್ರಕರಣಗಳನ್ನು ಭೇದಿಸಿ 12 ಲಕ್ಷ ರೂ ಬೆಲೆಬಾಳುವ 202 ಗ್ರಾಂ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ. ಅವಲಳ್ಳಿ ಪೊಲೀಸ್ ಠಾಣೆಯ ಪ್ರತ್ಯೇಕ ನಾಲ್ಕು ಪ್ರಕರಣಗಳಲ್ಲಿ ಆರು ಜನ ಆರೋಪಿಗಳನ್ನು ಬಂಧಿಸಿ ಸುಮಾರು 55 ಲಕ್ಷ ರು ಬೆಲೆಯ ಒಟ್ಟು 1 ಕೆಜಿ 13 ಗ್ರಾಂ ಚಿನ್ನದ ಹಾಗೂ 4.99ಲಕ್ಷ ನಗದು ಹಾಗೂ ದ್ವಿಚಕ್ರ ವಾಹನ ವಶಕ್ಕೆ ಪಡೆದಿರುತ್ತಾರೆ.

ಕೆಲಸ ಮಾಡುತ್ತಿದ್ದ ಕೆಲಸದಾಕೆ ಕಳ್ಳಿ:
ಅವಲಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ನಿಂಬೆಕಾಯಿ ಪುರದ ಒಂದು ವಿಲ್ಲದಲ್ಲಿ ಮನೆಯ ಮಾಲೀಕರಾದ ಸುಮಂತ್ ಎಂಬುವವರು ಊರಿಗೆ ಹೋದ ಸಂದರ್ಭದಲ್ಲಿ ಮನೆ ಕೆಲಸ ಮಾಡುತ್ತಿದ್ದ ಶಕುಂತಲಾ ಮನೆಯಲ್ಲಿದ್ದ 793 ಗ್ರಾಂ ಚಿನ್ನದ ಒಡವೆಗಳನ್ನು ಕದ್ದು ಪರಾರಿಯಾಗಿದ್ದರು. ಈಕೆಯ ಮೇಲೆ ಸಂಶಯ ಬಂದು ವಶಕ್ಕೆ ಪಡೆದು ಪರಿಶೀಲಿಸಿದಾಗ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಹೀಗೆ ಕದ್ದ ಒಡವೆಗಳನ್ನು ತನ್ನೂರಿನ ತನ್ನ ಮನೆಯಲ್ಲಿ ಇರಿಸಿದ್ದಳು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ಎಲ್ಲಾ ಪ್ರಕರಣಗಳ ಕುರಿತು ಎಸ್ ಪಿ ಮಲ್ಲಿಕಾರ್ಜುನ ಬಾಲದಂಡೆ ಹೊಸಕೋಟೆ ನಗರ ಪೊಲೀಸ್ ಠಾಣೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದರು. ಹೊಸಕೋಟೆ ಪ್ರಕರಣಗಳನ್ನು ಅಪಾರ ಪೊಲೀಸ್ ಅಧೀಕ್ಷಕರು ರದ ಪುರುಷೋತ್ತಮ್ ಹಾಗೂ ಹೊಸಕೋಟೆ ಪೊಲೀಸ್ ವಿಭಾಗದ ಪೊಲೀಸ್ ಉಪ ಅಧೀಕ್ಷಕರುರಾದ ಶಂಕರ್ ಗೌಡ ಅಣ್ಣ ಸಾಹೇಬ್ ಪಾಟೀಲ್ ಮಾರ್ಗದರ್ಶನದಂತೆ ಹೊಸಕೋಟೆ ಇನ್ಸ್ಪೆಕ್ಟರ್ ಅಶೋಕ್ ನೇತೃತ್ವದಲ್ಲಿ ಪಿಎಸ್ಐ ಧರ್ಮಂ ಜಿ ಶಿವಲಿಂಗನಾಯಕ್.ಅಪರಾಧ ವಿಭಾಗದ ನಾಗರಾಜ್. ಪ್ರಕಾಶ್ ಬಾಬು. ಮಂಜುನಾಥ್. ಗೋಪಾಲ್. ಮತಿವಣನ್ ರವರ ತಂಡ ಆರೋಪಿಗಳನ್ನು ವಶಕ್ಕೆ ಪಡೆದು ಹೊಸಕೋಟೆ ನಗರ ಠಾಣೆಯಲ್ಲಿ 17 ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಅವಲಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರಕರಣಗಳನ್ನು ಅಧಿಕಾರಿಗಳ ಮಾರ್ಗದರ್ಶನದಂತೆ ಅವಲಹಳ್ಳಿ ಇನ್ಸ್ಪೆಕ್ಟರ್ ಸೋಮಶೇಖರ್ ನೇತೃತ್ವದಲ್ಲಿ ಸಿಬ್ಬಂದಿಯವರಾದ ಪಿಎಸ್ಐ ರಾಜಣ್ಣ .ಎ ಎಸ್ ಐ ಸೈಯದ್. ಅಫ್ರೋಜ್. ರಮೇಶ್. ರಾಮಾಂಜನಿ. ಮುಕ್ತಿಯರ್. ನರಸಿಂಹ. ಲೋಕೇಶ್. ಶೇಖರ್. ಸತೀಶ್. ಗೀತಾ ಮುಬಾರಕ್. ತಂಡವು ಕಾರ್ಯಾಚರಣೆ ನಡೆಸಿದೆ.

Happy
Happy
0 %
Sad
Sad
0 %
Excited
Excited
100 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Next Post

ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವತಿಯಿಂದ ಕಾನೂನು ಮಾಹಿತಿ

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕದ ವ್ಯಾಪ್ತಿಯಲ್ಲಿ ಮುಂಬರುವ ವಿಧಾನ ಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಾನ್ಯ ಪೊಲೀಸ್ ಅಧೀಕ್ಷಕರಾದ ಡಾ || ವಿಕ್ರಮ್ ಅಮಟೆ ಐ.ಪಿ.ಎಸ್ ರವರು ದಿನಾಂಕ 19.03.2023 ರಂದು ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ಪೊಲೀಸ್ ಅಧಿಕಾರಿ/ಸಿಬ್ಬಂದಿಗಳ ಬ್ರಿಫಿಂಗ್ ಸಭೆ ನಡೆಸಿ, ಸಿಬ್ಬಂದಿಗಳ ಕುಂದುಕೊರತೆಗಳನ್ನು ವಿಚಾರಿಸಿ, ಮುಂಬರುವ ಚುನಾವಣೆಗೆ ಸಂಬಂದಿಸಿದ ಕಾನೂನುಗಳ ಬಗ್ಗೆ ಮಾಹಿತಿ ನೀಡಿ, ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸುವ ಬಗ್ಗೆ ಮಾರ್ಗದರ್ಶನ ನೀಡಿರುತ್ತಾರೆ. ಸದರಿ […]

Get News on Whatsapp

by send "Subscribe" to 7200024452
Close Bitnami banner
Bitnami